ಕೆರೆ ಸಮ್ಮೇಳನ 2014: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೌಗುಭೂಮಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಯ ಕುರಿತು
ದಿನಾಂಕ: 13-15 ನವೆಂಬರ್, 2014
ಸ್ಥಳ

ಪರಿಸರ ಸಭಾಂಗಣ (ಸ್ವರ್ಣವಲ್ಲೀ ಮಠದ ಸಭಾಂಗಣ, ಸೋಂದಾ ಮತ್ತು ಲಯನ್ಸ್ ಇಂಗ್ಲೀಷ್ ಶಾಲೆ, ಯಲ್ಲಾಪುರ ರಸ್ತೆ, ಇವುಗಳಲ್ಲಿ ಏಕಕಾಲಕ್ಕೆ ಪ್ರಬಂಧ ಮಂಡನೆ), ಸಿರ್ಸಿ, ಉತ್ತರ ಕನ್ನಡ, ಕರ್ನಾಟಕ.

  • ಸಿರ್ಸಿ ಪಟ್ಟಣವು ಸಮುದ್ರ ಮಟ್ಟದಿಂದ 590 ಮೀ.ಗಳಷ್ಟು ಎತ್ತರದಲ್ಲಿದೆ. ಅಲ್ಲದೇ ಅರಬ್ಬೀ ಸಮುದ್ರಕ್ಕೂ ಹತ್ತಿರದಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣವನ್ನು ಅನುಸರಿಸಿ: http://www.sirsicity.gov.in/

  • ಸ್ಥಳ ಮತ್ತು ಸಂಪರ್ಕ: ಸಿರ್ಸಿ ಪಟ್ಟಣವು (ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ ರಾಜ್ಯ) ಪಶ್ಚಿಮ ಘಟ್ಟದ ಮಧ್ಯ ಪ್ರದೇಶದಲ್ಲಿದ್ದು ರಸ್ತೆ, ರೈಲು ಹಾಗೂ ವಾಯು ಸಾರಿಗೆಗಳ ಸಂಪರ್ಕ ಹೊಂದಿದೆ. ಹತ್ತಿರದ ವಿಮಾನ ನಿಲ್ದಾಣಗಳಾದ ಹುಬ್ಬಳ್ಳಿ, ಗೋವಾ ಮತ್ತು ಬೆಂಗಳೂರು 105, 210 ಮತ್ತು 440 ಕೀ.ಮೀ. ದೂರದಲ್ಲಿವೆ.

  • ಹವಾಮಾನ: ಸಿರ್ಸಿಯು ಉಷ್ಣವಲಯದ ಹಿತವಾದ ವಾಯುಗುಣವನ್ನು ಹೊಂದಿದ್ದು, ನವೆಂಬರ್‍ನಲ್ಲಿ ಆಹ್ಲಾದಕರ ಹವಾಮಾನವನ್ನು ಹೊಂದಿರುತ್ತದೆ. ಚಳಿಗಾಲದ ಈ ತಿಂಗಳಲ್ಲಿ ಗರಿಷ್ಟ 32° ಸೆ. ಮತ್ತು ಕನಿಷ್ಟ 19° ಸೆ. ಉಷ್ಣಾಂಶ ದಾಖಲಾಗಿದೆ.


View Larger Map