ಕೆರೆ ಸಮ್ಮೇಳನ 2014 -"ಜೌಗುಭೂಮಿ ಮತ್ತು ವ್ಯವಸಾಯ: ಸಂಯೋಜಿತ ಫಲಿತಾಂಶಕ್ಕಾಗಿ ಜೌಗುಭೂಮಿ ಮತ್ತು ವ್ಯವಸಾಯ ಕ್ಷೇತ್ರಗಳ (ನೀರಿನ ಮೂಲಗಳನ್ನು ಒಳಗೊಂಡು) ಒಟ್ಟುಗೂಡುವಿಕೆಯ ಅವಶ್ಯಕತೆಗಳು". ಕೆರೆ ಸಮ್ಮೇಳನ 2014ರ ಉದ್ದೇಶ ಕೇವಲ ವಿಜ್ಞಾನಿ ಸಮುದಾಯದ ಜ್ಞಾನಾರ್ಜನೆಯಷ್ಟೇ ಅಲ್ಲದೇ, ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಮೂಲಕ ಅವರನ್ನೂ ಸಹ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದಾಗಿದೆ. ಇದು ವಿಜ್ಞಾನಿಗಳಿಗೆ, ಶಿಕ್ಷಕರಿಗೆ, ಸರ್ಕಾರಿ ಮತ್ತು ಸರಕಾರೇತರ ಸಂಸ್ಥೆಗಳಿಗೆ ಪರಿಸರ ಮತ್ತು ಜೌಗು ಭೂಮಿ ಮೇಲಿನ ಜಿಜ್ಞಾಸೆಗೆ ವೇದಿಕೆಯನ್ನು ಒದಗಿಸುತ್ತದೆ. ವಿವಿಧ ಸಂಸ್ಥೆ ಮತ್ತು ತಜ್ಞರ ನಡುವೆ ಸದೃಢ ಸಂಪರ್ಕ ನೆಲೆಸಲು ಹಾಗೂ ದುರ್ಬಲ ಪರಿಸರದ ಸಂರಕ್ಷಣೆ ಮತ್ತು ನಿರ್ವಹಣೆಗೆ ಅಗತ್ಯವಾದ ಸಮರ್ಥ ಯೋಜನೆಗಳ ರಚನೆಗೆ ಕೆರೆ ಸಮ್ಮೇಳನ ಸಹಾಯಕವಾಗಬಲ್ಲ್ಲದು. ಸಮ್ಮೇಳನದ ಭಾಗವಾಗಿ, ಆಯ್ದ ವಿಜ್ಞಾನಿಗಳಿಂದ ವಿವಿಧ ವಿಷಯಗಳ ಮೇಲೆ ಉಪನ್ಯಾಸವನ್ನು ಹಾಗೂ ವಿದ್ಯಾರ್ಥಿಗಳಿಂದ ಮತ್ತು ಸಂಶೋಧಕರಿಂದ ವಸ್ತುನಿಷ್ಠ ಪ್ರಬಂಧ ಮಂಡನೆಯನ್ನು ಏರ್ಪಡಿಸಲಾಗಿದೆ.