ಸಂಶೋಧನಾ ಪ್ರಬಂಧದ ವಿಷಯಗಳು
ಈ ಕೆಳಗಿನ ವಿಷಯಗಳನ್ನಾಧರಿಸಿ ಸಂಶೋಧಕರಿಂದ, ಯೋಜಕರಿಂದ, ಅಭಿವೃದ್ಧಿ ವ್ಯವಸ್ಥಾಪಕರಿಂದ, ಅರ್ಥಶಾಸ್ತ್ರಜ್ಞರಿಂದ, ಬುದ್ಧಿಜೀವಿಗಳಿಂದ, ಶಾಲಾ (8-10ನೇ ತರಗತಿ) -ಕಾಲೇಜು ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ ಸಂಶೋಧನಾ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.
ಕೆರೆ ಸಮ್ಮೇಳನ 2014ರಲ್ಲಿ ಮಂಡಿಸಲು ಸಂಶೋಧನಾ ಪ್ರಬಂಧ/ಭಿತ್ತಿ ಪತ್ರದ ವಿಷಯಗಳು:
- ಜೀವ-ವೈವಿಧ್ಯತೆ: ಪಶ್ಚಿಮ ಘಟ್ಟ, ನದಿಗಳು ಮತ್ತು ಕೆರೆಗಳು
- ಜೌಗು ಭೂಮಿ ಮತ್ತು ಜಡ್ಡಿ ಪ್ರದೇಶ: ಪುನರುಜ್ಜೀವನ, ಸಂರಕ್ಷಣೆ ಮತ್ತು ನಿರ್ವಹಣೆ
- ಪಶ್ಚಿಮ ಘಟ್ಟ ಪ್ರದೇಶದ ಭೂ-ಕವಚ ಮತ್ತು ಭೂ-ಬಳಕೆಯಲ್ಲಿನ ಬದಲಾವಣೆ
- ಹವಾಮಾನ ಬದಲಾವಣೆ ಹಾಗೂ ಪಶ್ಚಿಮ ಘಟ್ಟ
- ಪಶ್ಚಿಮ ಘಟ್ಟ ಪ್ರದೇಶದ ಧಾರಣ ಸಾಮರ್ಥ್ಯ
- ಪಶ್ಚಿಮ ಘಟ್ಟ ಪ್ರದೇಶದ ನದಿ ಬಯಲುಗಳ/ತಪ್ಪಲಿನ ಧಾರಣ ಸಾಮರ್ಥ್ಯ
- ಪ್ರಾಕೃತಿಕ ಸರಕು ಮತ್ತು ಸೇವೆಗಳ ಮೌಲ್ಯಮಾಪನ
- ದೇವರ ಕಾಡು (ಕಾನು, ಪವಿತ್ರ ವನ) ಮತ್ತು ಮಿರಿಸ್ಟಿಕ ಜೌಗು
- ಪಶ್ಚಿಮ ಘಟ್ಟ ಪ್ರದೇಶದಲ್ಲಿ "ಪರಿಸರ ಪ್ರವಾಸೋದ್ಯಮ" ಮತ್ತು ಇಂಗಾಲದ ಮಾಪನ
- ಭಾರತದಲ್ಲಿ ಆಹಾರ ಮತ್ತು ಜಲ ಮೂಲಗಳ ಸಂರಕ್ಷಣೆಯ ಅಗತ್ಯತೆಗಳು
- ಜೌಗು ಭೂಮಿ ಸಂರಕ್ಷಣೆಗೆ ಭೂ-ಸಂವೇದಿ ಮಾಹಿತಿಯ ಉಪಯೋಗಗಳು
- ನೈಸರ್ಗಿಕ ಮತ್ತು ಮಾನವನಿಂದಾದ ಹಾನಿಗಳು
- ಸಿಹಿ ನೀರಿನ ಅಧ್ಯಯನ, ಜಲ ಪರಿಸರದ ಅಧ್ಯಯನ, ಜೀವ-ವೈವೀಧ್ಯತೆ ಹಾಗೂ ಜೈವಿಕ ಮೇಲ್ವಿಚಾರಣೆಯ ದೂರದೃಷ್ಟಿ
- ಪರಿಸರ ಮಾಲಿನ್ಯ - ಭೂ ಮತ್ತು ಜಲ ಪರಿಸರ - ಮೇಲ್ವಿಚಾರಣೆ, ನಿರ್ವಹಣೆ ಹಾಗೂ ಜೈವಿಕ ಪರಿಹಾರಗಳು
- ಸುಸ್ಥಿರ ವ್ಯವಸಾಯ ಮತ್ತು ಸಾವಯವ ಕೃಷಿ
- ಸಮುದ್ರ ತೀರದ ಪರಿಸರ ವ್ಯವಸ್ಥೆ - ಜೀವ-ವೈವಿಧ್ಯತೆ, ಪರಿಸರ ಉತ್ಪಾದಕತೆ ಮತ್ತು ಜೀವನೋಪಾಯದ ವಿಷಯಗಳು
- ಜೌಗು ಭೂಮಿ ಸಂಪನ್ಮೂಲಗಳು ಮತ್ತು ಜೀವನೋಪಾಯ
- ನವೀಕರಿಸಬಹುದಾದ ಇಂಧನಗಳ ಮಹತ್ವ (ಸೌರಶಕ್ತಿ, ಜೈವಿಕ ಇಂಧನ ಮತ್ತು ಜೈವಿಕ ಶಕ್ತಿ) ಮತ್ತು ಶಕ್ತಿಯ ಮಿತ ಬಳಕೆ
- ಪರಿಸರ ಶಿಕ್ಷಣ ಮತ್ತು ಸುಸ್ಥಿರ ಅಭಿವೃದ್ಧಿ
- ಪರಿಸರ ನೈತಿಕತೆ ಮತ್ತು ಹಸಿರು ತಂತ್ರಜ್ಞಾನ
ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವಿಭಾಗದಲ್ಲಿ 3 ಬಹುಮಾನಗಳಿರುತ್ತವೆ. ಮಾಧ್ಯಮಿಕ (8, 9, 10); ಕಾಲೇಜ್ (11, 12) ಮತ್ತು ಶಿಕ್ಷಕರು (ಮಾಧ್ಯಮಿಕ ಹಾಗೂ ಕಾಲೇಜ್). ಉತ್ತಮ ಸಂಶೋಧನಾ ಪ್ರಬಂಧಕ್ಕೆ ನೀಡುವ ಈ ಬಹುಮಾನವು ಪ್ರಮಾಣ ಪತ್ರ ಮತ್ತು ಪಾರಿತೋಷಕವನ್ನು ಒಳಗೊಂಡಿರುತ್ತದೆ. ಇದೇ ರೀತಿ ಭಿತ್ತಿ ಪತ್ರಕ್ಕೂ ಸಹ ಬಹುಮಾನವಿರುತ್ತದೆ.