ಕೆರೆ ಸಮ್ಮೇಳನ 2014: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೌಗುಭೂಮಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಯ ಕುರಿತು
ದಿನಾಂಕ: 13-15 ನವೆಂಬರ್, 2014
ಪ್ರದರ್ಶನ

ಪುನರುಜ್ಜೀವನ ಮತ್ತು ಮೌಲ್ಯ ಮಾಪನ ತಂತ್ರಜ್ಞಾನ, ನೀರಿನ ಗುಣಮಟ್ಟ ವಿಶ್ಲೇಷಣೆ, ಭೂ ಮಾಹಿತಿ ವ್ಯವಸ್ಥೆ, ಭೂ ಸ್ಥಾನೀಕರಣ ವ್ಯವಸ್ಥೆ, ದೂರ ಸಂವೇದಿ ವ್ಯವಸ್ಥೆ, ಚಿತ್ರ ಸಂಸ್ಕರಣೆ ಹಾಗೂ ನಕ್ಷಾಶಾಸ್ತ್ರ ಮತ್ತು ಸಮ್ಮೇಳನದ ವಿಷಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಸಂಘ-ಸಂಸ್ಥೆಗಳ ಉತ್ಪನ್ನಗಳನ್ನು (ತಂತ್ರಾಂಶ ಅಥವಾ ಪರಿಕರ) ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಸಂಘ-ಸಂಸ್ಥೆಗಳು ರೂ. 20,000/-ವನ್ನು ಪಾವತಿಸುವ ಮೂಲಕ ಭಾಗವಹಿಸಬಹುದು. ನೋಂದಾಯಿತ ಪ್ರದರ್ಶಕರಿಗೆ ಉತ್ಪನ್ನಗಳನ್ನು ಪ್ರಸ್ತುತಪಡಿಸಲು ವೇದಿಕೆಯ ಮೇಲೆ 10 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುವುದು. ಆಸಕ್ತರು ಡಾ. ಟಿ.ವಿ. ರಾಮಚಂದ್ರ (cestvr@ces.iisc.ernet.in) ಅವರನ್ನು ಸಂಪರ್ಕಿಸಬಹುದು ಹಾಗೂ "Lake 2014, Indian Institute of Science" (payable at Bangalore) ಈ ಹೆಸರಿನಲ್ಲಿ ಡಿಡಿಯನ್ನು ಪಡೆದು ಸಂವಹನ ವಿಳಾಸಕ್ಕೆ ಕಳುಹಿಸಬಹುದು..