ಕೆರೆ ಸಮ್ಮೇಳನ 2014: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೌಗುಭೂಮಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಯ ಕುರಿತು
ದಿನಾಂಕ: 13-15 ನವೆಂಬರ್, 2014
ಕಾರ್ಯಕ್ರಮದ ರೂಪುರೇಷೆ
ದಿನಾಂಕ ಪೂರ್ವಾಹ್ನದ ಸಭೆ
(9 ರಿಂದ 1)
ಅಪರಾಹ್ನದ ಸಭೆ
(2 ರಿಂದ 6)
ನವೆಂಬರ್ 13, 2014 ಉದ್ಘಾಟನೆ, ಅಧ್ಯಕ್ಷರ ಮಾತು, ಅಭ್ಯಾಗತರ ಮಾತು, ಹಿರಿಯ ಸಂಶೋಧಕರಿಗೆ ಸನ್ಮಾನ "ಉತ್ತರ ಕನ್ನಡದ ಸಮಗ್ರ ಪರಿಸರೀಯ ಧಾರಣ ಸಾಮರ್ಥ್ಯ" ಕುರಿತು ಮಂಡನೆ
ನವೆಂಬರ್ 14, 2014 ವಸ್ತುನಿಷ್ಠ ಸಭೆ: ಜೀವ-ವೈವಿಧ್ಯತೆ, ಭೂ-ಕವಚ ಮತ್ತು ಭೂ-ಬಳಕೆಯಲ್ಲಿನ ಬದಲಾವಣೆ, ಜಲ ಪರಿಸರ, ಅರಣ್ಯ ಪರಿಸರ, ದೇವರ ಕಾಡು, ಜೌಗು ಭೂಮಿ ಮತ್ತು ಕೃಷಿ, ಪರಿಸರ ನೈತಿಕತೆ ಮತ್ತು ಹಸಿರು ತಂತ್ರಜ್ಞಾನ, ಪರಿಸರ ಮಾಲಿನ್ಯ, ಸಿಹಿ ನೀರಿನ ಅಧ್ಯಯನ. ಶಾಲೆ ಹಾಗೂ ಕಾಲೇಜ್ ವಿದ್ಯಾರ್ಥಿಗಳಿಂದ ಮಂಡನೆ (ಸಮಾನಾಂತರ ಸಭೆಗಳು) ವಸ್ತುನಿಷ್ಠ ಸಭೆ: ಜೌಗು ಭೂಮಿ, ಭೂ ತಾಪ ಹೆಚ್ಚಳ, ಹವಾಮಾನ ಬದಲಾವಣೆ, ಮಿರಿಸ್ಟಿಕ ಜೌಗು, ಪರಿಸರ ಪ್ರವಾಸೋದ್ಯಮ, ನವೀಕರಿಸಬಹುದಾದ ಇಂಧನಗಳ ಮಹತ್ವ, ಸುಸ್ಥಿರ ವ್ಯವಸಾಯ, ಇಂಗಾಲದ ಮಾಪನ, ಪರಿಸರ ಶಿಕ್ಷಣ. ಶಾಲೆ ಹಾಗೂ ಕಾಲೇಜ್ ವಿದ್ಯಾರ್ಥಿಗಳಿಂದ ಮಂಡನೆ (ಸಮಾನಾಂತರ ಸಭೆಗಳು)
ನವೆಂಬರ್ 15, 2014 ಅಭ್ಯಾಗತರ ಮಾತು, ಶಾಲೆ ಹಾಗೂ ಕಾಲೇಜ್ ವಿದ್ಯಾರ್ಥಿಗಳಿಂದ ಮಂಡನೆ (ಅಂತಿಮ ಸುತ್ತು) ತಜ್ಞರ ತಂಡದ ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಂದನಾರ್ಪಣೆ, ಬಹುಮಾನ ಹಾಗೂ ಪ್ರಮಾಣ ಪತ್ರ (ವಿಜೇತರಿಗೆ ಮತ್ತು ಭಾಗವಹಿಸಿದವರಿಗೆ) ವಿತರಣೆ.
ನವೆಂಬರ್ 16, 2014 ಅಧ್ಯಯನ ಪ್ರವಾಸ