ಕೆರೆ ಸಮ್ಮೇಳನ 2014ರ ಉದ್ದೇಶಗಳು ಈ ರೀತಿಯಾಗಿವೆ:
- ಪಶ್ಚಿಮ ಘಟ್ಟ ಪ್ರದೇಶದ ಜೌಗು ಭೂಮಿ, ಕೆರೆ, ಜಡ್ಡಿ, ಝರಿ, ಕೊಳ, ಸರೋವರ ಮತ್ತು ನದಿಗಳ ಪ್ರಸಕ್ತ ಸ್ಥಿತಿಯ ಅಧ್ಯಯನ ಹಾಗೂ ಸಂರಕ್ಷಣಾ ಕ್ರಮಗಳ ಬಗ್ಗೆ ಚಿಂತನೆ
-
ವಿಜ್ಞಾನಿಗಳಿಂದ, ವ್ರತ್ತಿಪರರಿಂದ ಹಾಗೂ ವಿದ್ಯಾರ್ಥಿಗಳಿಂದ ಜೀವ-ವೈವಿಧ್ಯತೆ, ಪರಿಸರ ಹಾನಿ ಮತ್ತು ಸಂರಕ್ಷಣಾ ಕ್ರಮಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಸಂಶೋಧನಾ ಫಲಿತಾಂಶಗಳ ಮೇಲೆ ಉಪನ್ಯಾಸ
-
ಜೌಗು ಭೂಮಿ ಪುನರುಜ್ಜೀವನ, ನಿರ್ವಹಣೆ ಸಂರಕ್ಷಣಾ ಕ್ರಮಗಳ ಬಗ್ಗೆ ಪ್ರಸಕ್ತ ಸಮ್ಮೇಳನದಲ್ಲಿ ಚರ್ಚಿಸುವುದು.
-
ಇದರಲ್ಲಿ ಧಾರ್ಮಿಕ, ಸರಕಾರೇತರ ಮತ್ತು ಶೈಕ್ಷಣಿಕ ಸಂಸ್ಥೆಗಳ ಪಾತ್ರ
-
ಜನರ ಜೀವನಾಧಾರ ಮತ್ತು ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಸಂಪನ್ಮೂಲಗಳ ಉಪಯೋಗವನ್ನು ವೈಜ್ಞಾನಿಕವಾಗಿ ನಿರ್ಧರಿಸುವುದರ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚೆ
-
ವಿದ್ಯಾರ್ಥಿಗಳಿಂದ ಜೌಗು ಭೂಮಿ, ಜೀವ-ವೈವಿಧ್ಯತೆ, ಪರಿಸರ ಹಾನಿ ಮತ್ತು ಸಂರಕ್ಷಣಾ ಕ್ರಮಗಳು, ಪ್ರಚಲಿತ ವಿದ್ಯಮಾನಗಳ ಕುರಿತು ದಾಖಲಿಸಿದ ಮಾಹಿತಿಗಳು ಹಾಗೂ ಸಂಶೋಧನಾ ಫಲಿತಾಂಶಗಳ ಮೇಲೆ ಉಪನ್ಯಾಸ
-
ದುರ್ಬಲ ಪರಿಸರದ ಸಂರಕ್ಷಣೆ ಮತ್ತು ನಿರ್ವಹಣೆಗೆ ಅಗತ್ಯವಾದ ಮಾನವ ಮತ್ತು ಹಣಕಾಸಿನ ಸಂಪನ್ಮೂಲಗಳ ಹಂಚಿಕೆ.
-
ಜೌಗು ಭೂಮಿ ಜೀವ-ವೈವಿಧ್ಯತೆಯ ಪುನರುಜ್ಜೀವನ, ನಿರ್ವಹಣೆ ಹಾಗೂ ಸಂರಕ್ಷಣೆಗೆ ವಿದ್ಯಾರ್ಥಿಗಳಿಂದ ಮತ್ತು ಸರಕಾರೇತರ ಸಂಸ್ಥೆಗಳಿಂದ ಕ್ರೀಯಾ ಯೋಜನೆಯ ಪ್ರಸ್ತಾಪ.
-
ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಪರಿಸರ ಸಂರಕ್ಷಣೆ ಮತ್ತು ನಿರ್ವಹಣೆಯ ಸಂಶೋಧನಾ ಅಗತ್ಯತೆಗಳನ್ನು ರೂಪಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ.