ಕೆರೆ ಸಮ್ಮೇಳನ 2014: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೌಗುಭೂಮಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಯ ಕುರಿತು
ದಿನಾಂಕ: 13-15 ನವೆಂಬರ್, 2014
ನೋಂದಣಿ

ನೋಂದಣಿ ಶುಲ್ಕ

  • ಪ್ರತಿನಿಧಿಗಳು: ರೂ. 2500/- ಮತ್ತು ಜೊತೆಯಲ್ಲಿ ಬರುವವರಿಗೆ: ರೂ. 1500/-

  • ಸಂಶೋಧಕರು ಮತ್ತು ವಿಶ್ವ ವಿದ್ಯಾಲಯದ ಉಪನ್ಯಾಸಕರು: ರೂ. 2000/- (ಎಲ್ಲಾ 3 ದಿನಗಳಲ್ಲಿಯೂ ಹಾಜರಿರಲು ಸಾಧ್ಯವಿರುವವರು ಮಾತ್ರ)

  • ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು: ರೂ. 1000/- (ಎಲ್ಲಾ 3 ದಿನಗಳಲ್ಲಿಯೂ ಹಾಜರಿರಲು ಸಾಧ್ಯವಿರುವವರು ಮಾತ್ರ)

  • ಪದವಿ ವಿದ್ಯಾರ್ಥಿಗಳು: ರೂ. 500/- (ಎಲ್ಲಾ 3 ದಿನಗಳಲ್ಲಿಯೂ ಹಾಜರಿರಲು ಸಾಧ್ಯವಿರುವವರು ಮಾತ್ರ)

  • ಸ್ಥಳದಲ್ಲಿ ನೋಂದಣಿಗೆ ಅವಕಾಶವಿಲ್ಲ

  • ವಿದ್ಯಾರ್ಥಿಗಳು ಮತ್ತು ಶಿಕ್ಷಕರು (ಶಾಲೆ ಹಾಗೂ ಪದವಿಪೂರ್ವ ಕಾಲೇಜ್): ಉಚಿತ (ಸ್ವೀಕರಿಸಿದ ಪ್ರಬಂಧ ಮಂಡನೆಗೆ ಮಾತ್ರ್ರ, ಎಲ್ಲಾ 3 ದಿನಗಳಲ್ಲಿಯೂ ಹಾಜರಿರಲು ಸಾಧ್ಯವಿರುವವರು ಮಾತ್ರ್ರ)

ಸಂಘಟನಾ ಸಮಿತಿಯು, ಆಯ್ಕೆಗೊಂಡ ಪ್ರಬಂಧ/ಭಿತ್ತಿಚಿತ್ರ ಮಂಡನೆಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ (ಶಾಲೆ ಹಾಗೂ ಪದವಿಪೂರ್ವ ಕಾಲೇಜ್) ಉಚಿತ ಪ್ರವೇಶವನ್ನು ನೀಡಲು ಉದ್ದೇಶಿಸಿದೆ. ಭಾಗವಹಿಸಲಿಚ್ಛಿಸುವ ಸರ್ಕಾರಿ ಸಂಸ್ಥೆಗಳ, ಉದ್ಯಮಗಳ ಹಾಗೂ ಇತರ ಎಲ್ಲಾ ಆಕಾಂಕ್ಷಿಗಳು ನೋಂದಣಿಯ ಸಲುವಾಗಿ ರೂ. 2500/-ನ್ನು ಡಿಡಿಯ ಮೂಲಕ ಪಾವತಿಸುವುದು. ಸಂಶೋಧಕರು ಮತ್ತು ವಿಶ್ವ ವಿದ್ಯಾಲಯದ ಉಪನ್ಯಾಸಕರಿಗೆ ನೋಂದಣಿ ಶುಲ್ಕ ರೂ. 2000/- (ಎಲ್ಲಾ 3 ದಿನಗಳಲ್ಲಿಯೂ ಹಾಜರಿರಲು ಸಾಧ್ಯವಿರುವವರಿಗೆ ಮಾತ್ರ)

ಭಾಗವಹಿಸಲಿಚ್ಛಿಸುವ ಎಲ್ಲಾ ಆಕಾಂಕ್ಷಿಗಳು ಡಿಡಿಯನ್ನು “Lake 2014, Indian Institute of Science” (payable at Bangalore) ಇವರ ಪರವಾಗಿ ಪಡೆದು ಸಂವಹನ ವಿಳಾಸಕ್ಕೆ ಕಳುಹಿಸಬಹುದು.

ಭಾಗವಹಿಸಲು ಅವಕಾಶ ಪಡೆದ ಎಲ್ಲರೂ ನೋಂದಣಿ ಕಿಟ್, ಸಮ್ಮೇಳನದ ಅವಧಿಯಲ್ಲಿ ಮಧ್ಯಾಹ್ನದ ಭೋಜನ ಹಾಗೂ ಉಪಾಹಾರವನ್ನು ಪಡೆಯಲು ಅರ್ಹರು (ಜೊತೆಯಲ್ಲಿ ಬರುವವರನ್ನು ಹೊರತುಪಡಿಸಿ).