Western Ghats Spatial Decision Support System [WGSDSS]
Ecologically Sensitive Regions in the Western Ghats
T V Ramachandra, Bharath Setturu, Vinay S, MD Subash Chandran, Bharath H. Aithal
Energy and Wetlands Research Group (EWRG), Environment Information System (ENVIS),
Center for Ecological Sciences (CES), Indian Institute of Science (IISc),
Tel: 080-22933099 / 22933503 / 23608661
Email: tvr@iisc.ac.in, envis.ces@iisc.ac.in

Western Ghats Spatial Decision Support System [WGSDSS] - Details

ಪ್ರಮುಖಾಂಶಗಳು

• ಪಾರಿಸಾರಿಕ-ಸೂಕ್ಷ್ಮತೆಯ ಆಧಾರದ ಮೇಲೆ ಭೂ-ಪ್ರದೇಶಗಳನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತದೆ
• ಪರಿಸರ-ಸೂಕ್ಷ್ಮತೆಯನ್ನು ನಿರ್ಧರಿಸುವಲ್ಲಿ ಬಳಸಿದ ಮಾನದಂಡಗಳ ಪಾರದರ್ಶಕತೆ.
• ಗ್ರಾಮ ಮಟ್ಟದಲ್ಲಿ ಮತ್ತು ಗ್ರಿಡ್ (5' x 5' ಅಥವಾ 9ಕಿಮೀ x 9ಕಿ.ಮೀ ಚೌಕ) ಗಳಲ್ಲಿ ಮಾಹಿತಿ ಲಭ್ಯವಿದೆ
• ದೂರಸಂವೇದಿ ಉಪಗ್ರಹಗಳ ಛಾಯಾಚಿತ್ರಗಳ ಸಹಾಯದ ಬಹುಕಾಲದ ಭೂ-ಹೊದಿಕೆಯ ಅಧ್ಯಯನ ಹಸಿರು ಕವಚದಲ್ಲಾದ ಬದಲಾವಣೆಯ ಅರಿವನ್ನು ನೀಡುತ್ತದೆ.
• ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. (BMC, ಸ್ಥಳೀಯ ಅರಣ್ಯ ಇಲಾಖೆ, ಇತ್ಯಾದಿ)

ಪಶ್ಚಿಮಘಟ್ಟಗಳ ಭೌಗೋಳಿಕಪ್ರದೇಶ ನಿರ್ಧಾರ ಬೆಂಬಲ ತಾಣವನ್ನು (Western Ghats Spatial Decision Support System) ಪಶ್ಚಿಮಘಟ್ಟ ಪ್ರದೇಶಗಳಲ್ಲಿ ನಡೆದಿರುವ, ನಡೆಯುತ್ತಿರುವ ಪರಿಸರ ಸಂಶೋಧನೆಗಳ ಮುಂದುವರಿದ ಭಾಗವಾಗಿ, ಲಭ್ಯವಿರುವ ಆಧುನಿಕ ತಂತ್ರಜ್ಞಾನ ಮತ್ತು ತೆರೆದ ಮೂಲಗಳ ವೆಬ್ ತಂತ್ರಜ್ಞಾನಗಳ ಸದುಪಯೋಗ ಪಡೆದುಕೊಂಡು, ಭೌಗೋಳಿಕ ಗುಣಲಕ್ಷಣಗಳನ್ನು (ಜೈವಿಕ, ಅಜೈವಿಕ, ಹವಾಮಾನ, ಅರಣ್ಯ, ಪರಿಸರ ಮತ್ತು ಸಾಮಾಜಿಕ) ಭೂದೃಶ್ಯದ ಮಾಹಿತಿಯೊಂದಿಗೆ ಒಗ್ಗೂಡಿಸಿ ವಿನ್ಯಾಸಗೊಳಿಸಲಾಗಿದೆ. ಇದು ಸಮಾಜದ ಅಗತ್ಯತೆಗಳನ್ನು ಪೂರೈಸುವ ಸಂದರ್ಭದಲ್ಲಿ ಗಮನದಲ್ಲಿರಬೇಕಾದ ಪರಿಸರವಿಜ್ಞಾನ ಮತ್ತು ಜಲವಿಜ್ಞಾನದ ನೆಲೆಗಟ್ಟಿನಲ್ಲಿ ಅತಿ ಪ್ರಾಮುಖ್ಯವಾದ ಸಹ್ಯಾದ್ರಿ ಶ್ರೇಣಿಯ ವಿವೇಕಯುತ ನಿರ್ವಹಣೆಯಲ್ಲಿ ಆಡಳಿತ ವ್ಯವಸ್ಥೆಗೆ ಅವಷ್ಯವಾದ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಪಶ್ಚಿಮಘಟ್ಟದಲ್ಲಿನ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸುವಾಗ ತಳಮಟ್ಟದಲ್ಲಿ (ಗ್ರಿಡ್‌ಗಳು/ಗ್ರಾಮ) ಮಾಹಿತಿಗಳನ್ನು ಕ್ರೂಢೀಕರಿಸಿ ವಿಶ್ಲೇಷಿಸಿರುವುದರಿಂದ ಇದು ಆಯಾ ಪ್ರದೇಶದ ನೈಜತೆಯನ್ನು ಎತ್ತಿಹಿಡಿಯುವುದರೊಟ್ಟಿಗೆ, ಪರಿಣಾಮಕಾರಿಯಾಗಿ ವಿಕೇಂದ್ರಿಕೃತ ಹಂತದಲ್ಲಿ, (ಉದಾಹರಣೆಗೆ ಗ್ರಾಮ ಜೀವವೈವಿಧ್ಯತಾ ನಿರ್ವಹಣಾ ಸಮಿತಿಗಳು, ಗ್ರಾಮ ಪಂಚಾಯಿತಿ,ಸ್ಢಳೀಯ ಅರಣ್ಯ ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳು) ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ನಿರ್ವಹಣೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಶ್ಯವೂ, ಉಪಯೋಗಿಯೂ ಆಗಿದೆ.

ವೆಬ್(Web)-ಆಧಾರಿತ ಭೌಗೋಳಿಕಪ್ರದೇಶ ನಿರ್ಧಾರ ಬೆಂಬಲ ತಾಣ (WSDSS)ವನ್ನು ಉಚಿತ ಮತ್ತು ಮುಕ್ತ ಮೂಲದ ಸಾಫ್ಟ್‌ವೇರ್ (software) (ಜಿಯೋಸರ್ವರ್/ GeoServer, ಪೋಸ್ಟ್‌ಗ್ರೆಎಸ್‌ಕ್ಯುಎಲ್/ PostgreSQL, ಜಿಯೋಟೂಲ್ಸ್/ GeoTools, ಓಪನ್‌ಲೇಯರ್‌/ OpenLayers)ಗಳ ಸಂಯೋಜನೆ ಮತ್ತು ಬಹು ಮಾನದಂಡದ ವಿಶ್ಲೇಷಣೆಯನ್ನು ಕೈಗೊಳ್ಳಲು ಓಪನ್ ಜಿಯೋಸ್ಪೇಷಿಯಲ್ ಕನ್ಸೋರ್ಟಿಯಂ ಸ್ಟ್ಯಾಂಡರ್ಡ್‌ (Open Geospatial Consortium (OGC) standards)ನ ಭೂಪ್ರದೇಶದ ಮಾಹಿತಿಯನ್ನು ಸಮ್ಮಿಲಿಸಿ ವಿನ್ಯಾಸಗೊಳಿಸಲಾಗಿದೆ. ವೆಬ್ ಮ್ಯಾಪ್ ಸೇವೆ (Web Map Service (WMS)) ಯು ಅಗತ್ಯವಾದ ನಕಾಶೆಗಳನ್ನು ಒದಗಿಸಲು ನೆರವಾದರೆ, ವೆಬ್ ಫೀಚರ್ ಸೇವೆ (Web Feature Service (WFS)) ನಕಾಶೆಗೆ ಸಂಬಂಧಿಸಿದ ಪೂರಕ ಮಾಹಿತಿಯನ್ನು ನೀಡುವುದರಿಂದ, ಈ ವಿಶಿಷ್ಟವಾದ ಪರಿಕರಗಳು ಅರಣ್ಯ, ಸಾಮಾಜಿಕ, ಆರ್ಥಿಕ, ಜೀವವೈವಿಧ್ಯ ಮತ್ತು ಪರಿಸರ ಮಾಹಿತಿಯ ಪರಿಣಾಮಕಾರಿ ಪ್ರಸರಣವನ್ನು ಸಂಪೂರ್ಣ ಪಶ್ಚಿಮಘಟ್ಟ, ರಾಜ್ಯ, ಜಿಲ್ಲೆ, ಪಂಚಾಯಿತಿ ಮತ್ತು ಗ್ರಾಮ ಹಂತದಲ್ಲಿ ಸಾಧಿಸಲು ಸಹಾಯ ಮಾಡುತ್ತವೆ.

ಪರಿಸರ ಸೂಕ್ಷ್ಮತೆ ಅಥವಾ ಸಂವೇದನಾಶೀಲತೆ (Ecological sensitivity) ಯು ಅಸ್ತಿತ್ವದಲ್ಲಿರುವ ಜೀವ ರಾಶಿಗಳ ಶಾಶ್ವತ ಮತ್ತು ಭರಿಸಲಾಗದ ನಷ್ಟವನ್ನು ಸೂಚಿಸುತ್ತದೆ ಅಥವಾ ಒಂದು ಪ್ರದೇಶದ ಪರಿಸರ ಸಮಗ್ರತೆಯ ಬದಲಾವಣೆಗಳೊಂದಿಗೆ, ವಿಕಾಸ ಮತ್ತು ಪ್ರಭೇದ ಸೃಷ್ಟಿ (evolution and speciation) ಯಂತಹ ನೈಸರ್ಗಿಕ ಪ್ರಕ್ರಿಯೆಗಳಿಗಾಗಬಹುದಾದ ಗಮನಾರ್ಹ ಹಾನಿಯನ್ನು ಪ್ರತಿನಿಧಿಸುತ್ತದೆ. ಒಂದು ಪ್ರದೇಶದ ಪರಿಸರ ಸೂಕ್ಷ್ಮತೆಯ ಸಮಗ್ರ ಜ್ಞಾನವು ಪ್ರದೇಶವನ್ನು ಸಂರಕ್ಷಿಸುವ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ಅತ್ಯಗತ್ಯವಾಗಿದೆ. ಪರಿಸರ ಸೂಕ್ಷ್ಮತೆಗೆ ಕಾರಣವಾಗಿರುವ ಭೂದೃಶ್ಯದ ಬದಲಾವಣೆ ಮತ್ತು ಅನಿಯಂತ್ರಿತ ಅಭಿವೃದ್ಧಿಯ ಕ್ರಮಗಳಿಂದಾಗಬಹುದಾದ ಅಡ್ಡ ಪರಿಣಾಮ, ಗಂಭೀರ ಸಮಸ್ಯೆಗಳ ಅಧ್ಯಯನ ಈ ಕಾರ್ಯತಂತ್ರದ ಭಾಗವಾಗಿದೆ. ಕಳೆದ ಶತಮಾನದಲ್ಲಿ ಈ ಪ್ರದೇಶವು ಪೂರ್ವಯೋಜಿತವಲ್ಲದ, ದೂರದೃಷ್ಠಿ ಹೊಂದಿರದ ನಗರೀಕರಣದ ಜೊತೆಗೆ ಕೈಗಾರಿಕಾಕರಣ ಮತ್ತು ಜಾಗತೀಕರಣದಿಂದಾಗಿ ದೊಡ್ಡ ಪ್ರಮಾಣದ ಭೂ-ಹೊದಿಕೆಯ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಈ ಜಾಲತಾಣ (WSDSS, https://wgbis.ces.iisc.ac.in/sdss/wgsdss/index.php) ಆಯಾ ಪ್ರದೇಶ-ನಿರ್ದಿಷ್ಟವಾದ ಸಂರಕ್ಷಣಾ ಕ್ರಮಗಳ ಮೂಲಕ ದುಷ್ಪರಿಣಾಮಗಳನ್ನು ತಡೆಗಟ್ಟವ ವಿಧಾನಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸುವವರಿಗೆ ಅವಶ್ಯಕವಾಗಿದೆ. ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ನೀತಿಗಳನ್ನು ರೂಪಿಸುವಲ್ಲಿ ಪರಿಸರ ಸೂಕ್ಷ್ಮ ವಲಯಗಳು ನಿರ್ಣಾಯಕ ಪಾತ್ರವಹಿಸಲಿದೆ. ಕಾಲಕ್ಕಣುಗುಣವಾದ ದೂರಸಂವೇದಿ ಉಪಗ್ರಹಗಳ ಮಾಹಿತಿಯ ಮತ್ತು ದತ್ತಾಂಶಗಳ ಆಧಾರದ ಮೇಲೆ ರೂಪಿತವಾದ 36 ಜಾಗತಿಕಜೀವವೈವಿಧ್ಯತಾ ತಾಣ (Global Biodiversity Hotspots) ಗಳಲ್ಲಿ ಒಂದಾದ ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ವಲಯಗಳು ಜೈವಿಕ-ಭೌಗೋಳಿಕ-ಹವಾಮಾನ, ಅರಣ್ಯ, ಪರಿಸರ ಮತ್ತು ಸಾಮಾಜಿಕ ವ್ಯವಸ್ಥೆಯ ಬದಲಾವಣೆಯಲ್ಲಿ ಪರಿಣಾಮ ಬಿರುವ ಅಂಶಗಳ ವಿವರಣೆಯನ್ನು ಒಳಗೊಂಡಿರುವುದಲ್ಲದೆ, ಇದು ಅರಣ್ಯಗಳ ನೈಜ ಸ್ಥಿತಿ ಮತ್ತು ಸಂರಕ್ಷಣಾ ತುರ್ತು ಕ್ರಮಗಳೆಡೆಗೆ ಗಂಭೀರ ಕಾಳಜಿಯ ಅನಿವಾರ್ಯತೆಯನ್ನು ಒತ್ತಿ ಹೇಳುತ್ತದೆ.

ಕೇವಲ ಪಶ್ಚಿಮಘಟ್ಟದಲ್ಲಲ್ಲದೆ ಇಡಿಯ ಭಾರತದಲ್ಲಿ ಮಿತಿ ಮೀರಿದ ಅರಣ್ಯನಾಶ, ದುರುಪಯೋಗ ಮತ್ತು ಪ್ರಾಚೀನ ನೈಸರ್ಗಿಕ ಸಂಪನ್ಮೂಲಗಳ ವಿವೇಚನಾರಹಿತ, ಬದ್ಧತೆಯಿಲ್ಲದ ನಿರ್ವಹಣೆ ನೀರಿನ ಅಭದ್ರತೆಯೊಟ್ಟಿಗೆ ಸಾಮಾನ್ಯರ ಬದುಕಿಗೆ ತೀವ್ರವಾದ ಸವಾಲೊಡ್ಡುತ್ತಿದೆ. ದೂರಸಂವೇದಿ ಉಪಗ್ರಹಗಳ ಛಾಯಾಚಿತ್ರಗಳ ಸಹಾಯದಿಂದ ಭೂ-ಹೊದಿಕೆಯ ಬಹುಕಾಲಾನುಗುಣವಾದ ಬಳಕೆಯ ಅಧ್ಯಯನವು, ಮನುಷ್ಯಜನ್ಯ ಕಾರಣದಿಂದಾಗಿ ಶೆಕಡಾ 5 (5%) ರಷ್ಟು ನಿತ್ಯಹರಿದ್ವರ್ಣ ಕಾಡಿನಲ್ಲಿ ಇಳಿಕೆಯ ಜೊತೆಗೆ, ತಲಾ 4.5% ಮತ್ತು 9% ನಷ್ಟು ಕಟ್ಟಡಗಳ ಮತ್ತು ಕೃಷಿ ಕ್ಷೇತ್ರದಲ್ಲಿ ಹೆಚ್ಚಳವನ್ನು ನಮ್ಮುಂದಿಡುತ್ತದೆ. ಒಟ್ಟು ಉಳಿದಿರುವ ಅರಣ್ಯದಲ್ಲಿ ಕೇವಲ 25% ಭಾಗದಷ್ಟು ಮಾತ್ರ ತನ್ನ ಮೊದಲ ದಟ್ಟತೆ ಅಥವಾ ಸಾಂದ್ರತೆ ಮತ್ತು ಅಖಂಡತೆಯನ್ನು ಉಳಿಸಿಕೊಂಡಿರುವುದು ಅರಣ್ಯ ದಟ್ಟತೆಯ ವಿಂಘಡನೆಯ ಅಧ್ಯಯನದಿಂದ ಕಂಡುಬರುವುದಲ್ಲದೆ, ಇದು ಅರಣ್ಯದ ಮೇಲಿರುವ ಮಾನವ ಪ್ರೇರಿತ ಅಭಿವೃದ್ಧಿಯ ಒತ್ತಡವನ್ನು ಮತ್ತು ಸ್ಥಳೀಯ ಪರಿಸರದಲ್ಲಾಗುತ್ತಿರುವ ಬದಲಾವಣೆಗೆ ನಿದರ್ಶನವಾಗಿದೆ. ಇಎಸ್ಸ್ಆರ್ (ESR-Ecologically Sensitive Regions) ನ ವಿವರಣೆಯು ಅಜೈವಿಕ, ಜೈವಿಕ, ಮತ್ತು ಸಾಮಾಜಿಕ/ಮಾನವಶಾಸ್ತ್ರದ ಅಂಶಗಳನ್ನು ಪರಿಗಣಿಸಿರುವುದರಿಂದ, ಇದು ಭೂದೃಶ್ಯಾವಳಿಯ ಪ್ರಸ್ತುತ ಸ್ಥಿತಿಯನ್ನು ಮತ್ತು ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಅವುಗಳ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಪಶ್ಚಿಮಘಟ್ಟದ ಒಟ್ಟು ಭೂ-ಪ್ರದೇಶದ ಗ್ರಿಡ್‌(Grid) ವಾರು ವಿಶ್ಲೇಷಣೆಯು, ESR-1 ಅಡಿಯಲ್ಲಿ 32% (755 ಗ್ರಿಡ್‌ಗಳು) ಭೂಭಾಗ ಅತಿಸೂಕ್ಷ್ಮ, ESR-2 ಅಡಿಯಲ್ಲಿ 16% (373 ಗ್ರಿಡ್‌ಗಳು) ಸೂಕ್ಷ್ಮ, ಇದು ಅತಿಸೂಕ್ಷ್ಮ (ESR-1) ಭೂಭಾಗವಾಗಿ ಮಾರ್ಪಾಡಾಗಲು ಶಕ್ತವಾಗಿದೆ. 34% (789) ಮತ್ತು 18% (412) ನಷ್ಟು ಭೂಭಾಗ ಕ್ರಮವಾಗಿ ESR-3 (ಮಧ್ಯಮ) ಮತ್ತು ESR-4 ಕನಿಷ್ಠ ಪರಿಸರ ಸೂಕ್ಷ್ಮತೆಯ ಅಡಿಯಲ್ಲಿ ಬರುವುದನ್ನು ತಿಳಿಸುತ್ತದೆ. ಮುಂದುವರೆದು ಪ್ರದೇಶವಾರು ವಿವರಿಸುವುದಾದರೆ, ಅತಿಸೂಕ್ಷ್ಮ ವಲಯ (ESR-1) 63,148 ಚದರ ಕೀ.ಮಿ. ಮತ್ತು ಸೂಕ್ಷ್ಮ ವಲಯ 27,646 ಚದರ ಕೀ.ಮಿ. ವಿಸ್ತೀರ್ಣವನ್ನು ಹೊಂದಿದೆ. ಮಧ್ಯಮ ಮತ್ತು ಕನಿಷ್ಠ ಪರಿಸರ ಸೂಕ್ಷ್ಮವಲಯಗಳು ತಲಾ 48,490 ಚದರ ಕೀ.ಮಿ. ಮತ್ತು 20,716 ಚದರ ಕೀ.ಮಿ. ಭೂಭಾಗವನ್ನು ಆವರಿಸಿಕೊಂಡಿವೆ. ಸುಸ್ಥಿರ ಅಭಿವೃದ್ಧಿ ನೀತಿಯನ್ನು ರೂಪಿಸುವಾಗ ಪರಿಸರ ಸೂಕ್ಷ್ಮವಲಯ (Ecologically Sensitive Regions) ಗಳನ್ನು ಪರಿಗಣಿಸುವುದರಿಂದ ಭವಿಷ್ಯದ ಯೋಚನೆಯಿಲ್ಲದ ಅಭಿವೃದ್ಧಿ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ, ಸದಾ ತೂಗುಗತ್ತಿಯಂಚಿನಲ್ಲಿರುವ ಪಶ್ಚಿಮಘಟ್ಟದ ಜನರ ಜೀವನೋಪಾಯವನ್ನು ಸುಧಾರಿಸುವಲ್ಲಿ ಮತ್ತು ಇವೆಲ್ಲವನ್ನು ಉಳಿಸಿಕೊಳ್ಳಲು ಅಗತ್ಯವಾದ ಸಮೃದ್ಧ ಪರಿಸರದ ಸೇವೆಗಳನ್ನು ನಿರಂತರವಾಗಿ ಪಡೆಯುವುದರ ಜೊತೆಗೆ ಪರಿಸರ ಸುರಕ್ಷತೆಯನ್ನು ಖಚಿತಪಡಿಸಲು ಸಹಕಾರಿಯಾಗಿ ಕೆಲಸ ಮಾಡಲಿದೆ. ನೀರಿನ ಮತ್ತು ಆಹಾರದ ಭದ್ರತೆಯ ದೃಷ್ಠಿಯಿಂದ ಹಿಂದಿನ ತಲೆಮಾರಿನಿಂದ ಎರವಲು ಪಡೆದ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವುದು ನಮ್ಮೆಲ್ಲರ ಕರ್ತವ್ಯ.

Research Team (Data Compilation)

G.R. Rao Field Data Collection
Central Western Ghats
Vishnu D. Mukri
Shrikanth Naik
Misha Fauna Distribution
Sreelekha P.B Angiosperm Tree Species
Haritha N Mapping Biodiversity
Arjun SR Protected Areas
Sincy V Valuation of Ecosystem Services
Asulabha KS
Rajesh Rana Western Ghats Villages Rectification


Developer Team

Abhishek Baghel Appplication Design & Developer


E-mail    |    Sahyadri    |    ENVIS    |    GRASS    |    Energy    |      CES      |      CST      |    CiSTUP    |      IISc      |    E-mail