ಸಂಶೋಧನೆಯ ಪ್ರಮುಖ ಅಂಶಗಳು
1. ಕರ್ನಾಟಕದಲ್ಲಿ ಸೌರಶಕ್ತಿ ಬಳಕೆ
ಸೌರಶಕ್ತಿಯನ್ನು ಗ್ರಿಡ್-ಸಹಿತ ಮತ್ತು ಗ್ರಿಡ್-ರಹಿತ ಸೌರ ಘಟಕವಾಗಿ ಕರ್ನಾಟಕದಲ್ಲಿ ಬಳಸಲಾಗುತ್ತಿದೆ. ಪ್ರಸ್ತುತ ರಾಜ್ಯವು 6 ಮೆ.ವ್ಯಾ, ಪರಸ್ಪರ ವರ್ತಿಸುವ (ಗ್ರಿಡ್-ಸಹಿತ) ಗ್ರಿಡ್ ಘಟಕಗಳನ್ನು ಮತ್ತು 29.41 ಕಿ.ವ್ಯಾ. ಸಾಮರ್ಥ್ಯದ ಗ್ರಿಡ್-ರಹಿತ ಸೌರ ವಿದ್ಯುತ್ ಘಟಕಗಳನ್ನು ಹೊಂದಿದೆ. ರಾಜ್ಯದಲ್ಲಿರುವ ಗ್ರಿಡ್-ರಹಿತ ಸೌರ ಘಟಕಗಳನ್ನು ಕೋಷ್ಟಕ 4ರಲ್ಲಿ ನೀಡಿದೆ.
ಕೋಷ್ಟಕ 4: ಕರ್ನಾಟಕದಲ್ಲಿ ಸೌರ ಶಕ್ತಿಯ ಬಳಕೆ (31.03.2011 ರಂತೆ)
|
|
|
Street lighting 2,694 in nos. SPV pumps 551 in nos. House lighting 36,134 in nos. Solar lantern 7,334 in nos. Solar cookers 253 in nos. Power plants 255.41kWp |
ಮಾರ್ಚ್ 2013 ರಂತೆ, ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ 14 ಮೆ.ವ್ಯಾ ಸಾಮರ್ಥ್ಯದ ಸೌರಶಕ್ತಿ ಘಟಕಗಳನ್ನು ಸ್ಥಾಪಿಸಲಾಗಿದೆ. ಕೋಷ್ಟಕ 5 ರಲ್ಲಿ ಕರ್ನಾಟಕದಲ್ಲಿ ಅಳವಡಿಸಿರುವ ಸೌರ ವಿದ್ಯುತ್ ಘಟಕಗಳ ವಿವರಗಳನ್ನು ನೀಡಲಾಗಿದೆ.
ಕೋಷ್ಟಕ 5: ರಾಜ್ಯದಲ್ಲಿ ಅಳವಡಿಸಿರುವ ಸೌರ ವಿದ್ಯುತ್ ಘಟಕಗಳು
ಆನುಸ್ಥಾಪಕರು | ಸಾಮರ್ಥ್ಯ (ಮೆ.ವ್ಯಾ) | ತಂತ್ರಜ್ಞಾನ | ಯೋಜನೆ |
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಸಿಎಲ್) | 5 | ಎಸ್‍ಪಿವಿ | ಜೆಎನ್‍ಎನ್‍ಎಸ್‍ಎಮ್ |
ಕೆಪಿಸಿಎಲ್ (ಕೋಲಾರ) | 3 | ಎಸ್‍ಪಿವಿ | ಅರುಣೋದಯ |
ಕೆಪಿಸಿಎಲ್ (ರಾಯಚೂರು) | 3 | ಎಸ್‍ಪಿವಿ | ಅರುಣೋದಯ |
ಕೆಪಿಸಿಎಲ್ (ಬೆಳಗಾವಿ) | 3 | ಎಸ್‍ಪಿವಿ | ಅರುಣೋದಯ |
ಒಟ್ಟೂ | 14 |
5.2 ಕರ್ನಾಟಕದ ಸೌರಶಕ್ತಿ ಸಾಮಥ್ರ್ಯ
ಕರ್ನಾಟಕವು ವಾರ್ಷಿಕವಾಗಿ 5.55 ಕಿ.ವ್ಯಾ.ಘಂ./ಚ.ಮೀ./ದಿನ ಸರಾಸರಿ ಬಿಸಿಲೂಡಿಕೆ ಹೊಂದಿದೆ. ಬಿಸಿಲೂಡಿಕೆಯು ವಾರ್ಷಿಕವಾಗಿ 4.5 ರಿಂದ 7 ಕಿ.ವ್ಯಾ.ಘಂ./ಚ.ಮೀ./ದಿನ ರವರೆಗೆ ವ್ಯಾಪಿಸಿದೆ (ಚಿತ್ರ 5). ಕೊಡಗು (5-5.5 ಕಿ.ವ್ಯಾ.ಘಂ./ಚ.ಮೀ./ದಿನ) ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳು ಸರಾಸರಿ 5.5–6.5 ಕಿ.ವ್ಯಾ.ಘಂ./ಚ.ಮೀ./ದಿನ ಬಿಸಿಲೂಡಿಕೆ ಹೊಂದಿವೆ.
ಚಿತ್ರ 5: ಕರ್ನಾಟಕದಲ್ಲಿ ಸರಾಸರಿ ವಾರ್ಷಿಕ ಸೌರ ಬಿಸಿಲೂಡಿಕೆ (ಕಿ.ವ್ಯಾ.ಘಂ./ಚ.ಮೀ./ದಿನ)
ಚಿತ್ರ 6 (ಚಿತ್ರಗಳು 6.1-6.12) ರಾಜ್ಯದ ವಾರ್ಷಿಕ ಜಾಗತಿಕ ಬಿಸಿಲೂಡಿಕೆ ವಿವsರಗಳನ್ನು ನೀಡುತ್ತದೆ. ಎಲ್ಲ ಜಿಲ್ಲೆಗಳ ಜಾಗತಿಕ ಬಿಸಿಲೂಡಿಕೆ ವಿವರಗಳನ್ನು ಚಿತ್ರ 6.1 (ಜನವರಿ) ಯಿಂದ ಚಿತ್ರ 6.12 (ಡಿಸೆಂಬರ್) ರವರೆಗೆ ನೀಡಲಾಗಿದೆ.
5.3 ಭೂಮಿಯ ಅವಶ್ಯಕತೆ
ಯಾವುದೇ ವಿದ್ಯುತ್ ಸ್ಥಾವರದ ಯೋಜನಾ ಹಂತದ ಆರಂಭದಲ್ಲಿಯೇ ಯೋಜನೆಗೆ ಅವಶ್ಯವಿರುವ ಭೂಮಿಯ ವಿಸ್ತೀರ್ಣವನ್ನು ಅಂದಾಜು ಮಾಡಬೇಕಾಗುತ್ತದೆ. ಸುಮಾರು 1 ಕಿ.ವ್ಯಾ ಸೌರ ವಿದ್ಯುತ್ ಘಟಕ (ಎಸ್‍ಪಿವಿ ಆಧಾರಿತ) ಸ್ಥಾಪಿಸಲು ಅಂದಾಜು 100 ಚ.ಮೀ ಭೂಮಿ ಅವಶ್ಯವಿದೆ. ಸೌರ ಶಕ್ತಿಯ ಉತ್ಪಾದನೆಯು ಆಧರಿಸಿರುವ ಅಂಶಗಳೆಂದರೆ: ಅ) ಪ್ರಸಕ್ತ ವಿದ್ಯುತ್ ಬೇಡಿಕೆ ಆ) ಪ್ರದೇಶವೊಂದರಲ್ಲಿ ಲಭ್ಯವಿರುವ ನಿರುಪಯುಕ್ತ ಭೂಮಿಯ ವಿಸ್ತೀರ್ಣ ಇ) ಸಂಬಂಧಿತ ಕೌಟುಂಬಿಕ ಬೇಡಿಕೆಯನ್ನು ಪೂರೈಸಲು ಎಸ್‍ಪಿವಿ ಅಳವಡಿಸಲು ಮೇಲ್ಛಾವಣಿ ಲಭ್ಯತೆ.
5.4 ಜಿಲ್ಲಾವಾರು ನಿರುಪಯುಕ್ತ ಹಾಗೂ ಬರಡು ಭೂಮಿಯ ಲಭ್ಯತೆ
ಕೋಷ್ಟಕ 6 ರಲ್ಲಿ ನಿರುಪಯುಕ್ತ ಭೂಮಿ ಅಟ್ಲಾಸ್‍ನಂತೆ (2011) ರಾಜ್ಯದಲ್ಲಿರುವ ಜಿಲ್ಲಾವಾರು ನಿರುಪಯುಕ್ತ ಹಾಗೂ ಬರಡು ಭೂಮಿಯ ಲಭ್ಯತೆ ನೀಡಿದೆ. ಕರ್ನಾಟಕದಲ್ಲಿ ನಿರುಪಯುಕ್ತ ಭೂಮಿಯ ಲಭ್ಯತೆಯು ಒಟ್ಟಾರೆ ಭೌಗೋಳಿಕ ಪ್ರದೇಶದ ಶೇ. 1.88 (ಬಿಜಾಪುರ) ದಿಂದ 15.88 (ಬಳ್ಳಾರಿ) ವರೆಗೆ ಇದೆ. ಬರಡು ಭೂಮಿಯ ಲಭ್ಯತೆಯು ಶೇ. 0.02 (ಹಾವೇರಿ) ದಿಂದ 1.58 (ರಾಯಚೂರು) ಇದೆ.
ಕೋಷ್ಟಕ 6: ಜಿಲ್ಲಾವಾರು ನಿರುಪಯುಕ್ತ ಹಾಗೂ ಬರಡು ಭೂಮಿಯ ಲಭ್ಯತೆ (ಚ.ಕಿ.ಮೀ)
Districts | TGA (km2) | WL (NRSC) (km2) | % of WL in TGA | Barren Land* (km2) | % of Barren Land in TGA | % of Barren Land in WL |
Bagalkot | 6575 | 787.55 | 11.98 | 82.75 | 1.26 | 10.51 |
Bangalore Rural | 5815 | 588.27 | 10.12 | 87.86 | 1.51 | 14.94 |
Bangalore Urban | 2190 | 90.3 | 4.12 | 1.68 | 0.08 | 1.86 |
Belgaum | 13415 | 1108.38 | 8.26 | 1.31 | 0.01 | 0.12 |
Bellary | 8419 | 1336.8 | 15.88 | 75.41 | 0.90 | 5.64 |
Bidar | 5448 | 383.01 | 7.03 | 2.12 | 0.04 | 0.55 |
Bijapur | 10494 | 198.43 | 1.89 | 44.71 | 0.43 | 22.53 |
Chamarajanagar | 5685 | 373.94 | 6.58 | 5.41 | 0.10 | 1.45 |
Chikmagalur | 7201 | 284.96 | 3.96 | 14.65 | 0.20 | 5.14 |
Chitradurga | 8440 | 935.97 | 11.09 | 77.79 | 0.92 | 8.31 |
Dakshina Kannada | 4843 | 172.88 | 3.57 | 26.99 | 0.56 | 15.61 |
Davanagere | 5966 | 483.81 | 8.11 | 4.87 | 0.08 | 1.01 |
Dharwad | 4230 | 112.38 | 2.66 | 0.6 | 0.01 | 0.53 |
Gadag | 4657 | 305.75 | 6.57 | 16.13 | 0.35 | 5.28 |
Gulbarga | 16224 | 994.35 | 6.13 | 107.19 | 0.66 | 10.78 |
Hassan | 6814 | 328.48 | 4.82 | 5.49 | 0.08 | 1.67 |
Haveri | 4851 | 137.14 | 2.83 | 0.86 | 0.02 | 0.63 |
Kodagu | 4102 | 107.4 | 2.62 | 3.25 | 0.08 | 3.03 |
Kolar | 8223 | 752.8 | 9.15 | 129.11 | 1.57 | 17.15 |
Koppal | 7189 | 472.42 | 6.57 | 53.06 | 0.74 | 11.23 |
Mandya | 4961 | 374.41 | 7.55 | 35.29 | 0.71 | 9.43 |
Mysore | 6269 | 115.71 | 1.85 | 1.82 | 0.03 | 1.57 |
Raichur | 6828 | 658.25 | 9.64 | 108.14 | 1.58 | 16.43 |
Shimoga | 8465 | 481.53 | 5.69 | 2.98 | 0.04 | 0.62 |
Tumkur | 10598 | 623.77 | 5.89 | 102.16 | 0.96 | 16.38 |
Udupi | 3598 | 181.45 | 5.04 | 36.75 | 1.02 | 20.25 |
Uttara Kannada | 10291 | 640.48 | 6.22 | 7.59 | 0.07 | 1.19 |
Total | 191791 | 13030.62 | 6.79 | 1035.97 | 0.54 | 7.95 |
*Barren Lands: Sands-Coastal, Sands-Desertic, Sands-Semi Stab.-Stab>40m, Sands-Semi Stab.-Stab 15-40m, Mining Wastelands, Industrial wastelands, Barren Rocky/Stony waste.
5.5 ಲಭ್ಯವಿರುವ ಸೌರ ಸಾಮರ್ಥ್ಯದಿಂದ ವಿದ್ಯುತ್ ಉತ್ಪಾದನೆ
ಸೌರಕೋಶ (ಎಸ್‍ಪಿವಿ ಮಾಡ್ಯುಲ್) ಬಳಸಿಕೊಂಡು ವಿಕಿರಣಗಳಿಂದ ನೇರವಾಗಿ ವಿದ್ಯುಚ್ಛಕ್ತಿಯನ್ನು ಪಡೆಯಬಹುದು. ಎಸ್‍ಪಿವಿ ಮಾಡ್ಯುಲ್‍ಗಳನ್ನು ಮೇಲ್ಛಾವಣಿ ಮೇಲೆ ಅಳವಡಿಸಬಹುದು (ಗೃಹಬಳಕೆಗೆ) ಅಥವಾ ನೀರಾವರಿ ಬೇಡಿಕೆ ಪೂರೈಸಬಲ್ಲ ದೊಡ್ಡ ಸಾಮಥ್ರ್ಯದ ಉತ್ಪಾದನೆಗಾಗಿ ನಿರುಪಯುಕ್ತ/ ಬರಡು ಪ್ರದೇಶದಲ್ಲಿ ಅಳವಡಿಸಬಹುದು.
5.5.1 ಸೌರ ಮೇಲ್ಛಾವಣಿ ತಂತ್ರಜ್ಞಾನ (Rooftop SPV)
ರಾಜ್ಯದ ಸುಮಾರು ಶೇ. 68.43 ರಷ್ಟು ಜನತೆ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಅಲ್ಲಿ ಗೃಹ ವಿದ್ಯುಚ್ಛಕ್ತಿ ಬಳಕೆಯು ಪ್ರತಿ ಮನೆಗೆ ಮಾಸಿಕ 40 ರಿಂದ 60 ಕಿ.ವ್ಯಾ.ಘಂ ಇದೆ. ಗ್ರಾಮೀಣ ಪ್ರದೇಶದ ತಲಾ ವಿದ್ಯುತ್ ಬಳಕೆಯು ಸುಮಾರು 10 ರಿಂದ 12 ಕಿ.ವ್ಯಾ.ಘಂ./ತಿಂಗಳು. ಗ್ರಾಮೀಣ ಮನೆಯೊಂದರ ಸರಾಸರಿ ಮೇಲ್ಛಾವಣಿ ವಿಸ್ತೀರ್ಣ 109.83 ಚ.ಮೀ. ಇದ್ದು, ಇದರಿಂದ ಮಾಸಿಕ ವಿದ್ಯುತ್ ಬೇಡಿಕೆಯನ್ನು ಸೌರ ಎಸ್‍ಪಿವಿ ಅಳವಡಿಸಿ ಪೂರೈಸಬಹುದು. ಚಿತ್ರ 7 ರಲ್ಲಿ ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಮನೆಗಳ ಮೇಲ್ಛಾವಣಿಯ ಚಿತ್ರವನ್ನು ತೋರಿಸುತ್ತದೆ. ಮೇಲ್ಛಾವಣಿಯಲ್ಲಿ ಎಸ್‍ಪಿವಿ ತಂತ್ರಜ್ಞಾನ ಬಳಸಿ ಪ್ರತಿ ತಿಂಗಳು 60 ಕಿ.ವ್ಯಾ.ಘಂ. ವಿದ್ಯುತ್ ಉತ್ಪಾದಿಸಲು ಒಟ್ಟಾರೆ ವಿಸ್ತೀರ್ಣದ (η=10%, ಪರಿಣಾಮಕಾರಿ ವಿಸ್ತೀರ್ಣ = ಲಭ್ಯ ವಿಸ್ತೀರ್ಣದ ಶೇ. 80) ಕೇವಲ ಶೇ. 4.12 ರಷ್ಟು (3.62 ಚ.ಮೀ.) ಮಾತ್ರ ಅವಶ್ಯವಿದೆ.
ಸಾಮಾನ್ಯ ನಗರ ಪ್ರದೇಶದ ಮನೆಯೊಂದರಲ್ಲಿ ಲಭ್ಯವಿರುವ ಮೇಲ್ಛಾವಣಿ ವಿಸ್ತೀರ್ಣ ಸುಮಾರು 1200 ಚ.ಅಡಿ (112 ಚ.ಮೀ.) ಇದ್ದು, ಇದರಲ್ಲಿ ಶೇ. 80ರಷ್ಟು ವಿಸ್ತೀರ್ಣವನ್ನು ಸೌರ ಶಕ್ತಿ ಪಡೆಯಲು ಉಪಯೋಗಿಸಬಹುದು. ನಗರ ಪ್ರದೇಶದ ಸರಾಸರಿ ವಿದ್ಯುತ್ ಬಳಕೆಯು 100 ರಿಂದ 150 ಕಿ.ವ್ಯಾ.ಘಂ. ಇದೆ. ಈ ಗೃಹ ವಿದ್ಯುತ್ ಬೇಡಿಕೆಯನ್ನು ಲಭ್ಯವಿರುವ ಮೇಲ್ಛಾವಣಿ ವಿಸ್ತೀರ್ಣದ ಶೇ. 10.1 (9.1 ಚ.ಮೀ.) ರಷ್ಟನ್ನು ಮಾತ್ರ ಬಳಕೆ ಮಾಡುವ ಎಸ್‍ಪಿವಿ ತಂತ್ರಜ್ಞಾನದಿಂದ ಪೂರೈಸಬಹುದು.
ಚಿತ್ರ 7: ನಗರ ಮತ್ತು ಗ್ರಾಮೀಣ ಪ್ರದೇಶಗಳ ಮನೆಯ ಮೇಲ್ಛಾವಣಿ ವಿಸ್ತೀರ್ಣದ ಚಿತ್ರಗಳು
(ಗೂಗಲ್ ಭೂಚಿತ್ರ 2012, http://www.googleearth.com)
5.5.2 ನಿರುಪಯುಕ್ತ ಭೂಮಿಯಲ್ಲಿ ಸೌರವಿದ್ಯುತ್ ಉತ್ಪಾದನೆ
ಚಿತ್ರ 8 ರಲ್ಲಿ ಶೇ. 2ರಷ್ಟು ನಿರುಪಯುಕ್ತ ಭೂವಿಸ್ತೀರ್ಣದಲ್ಲಿ (260.61 ಚ.ಕಿ.ಮೀ. ಅಥವಾ ಬರಡು ಭೂಮಿಯ ಶೇ. 25.1 ರಷ್ಟು) ಉತ್ಪಾದಿಸಬಹುದಾದ ವಿದ್ಯುಚ್ಛಕ್ತಿ ಮತ್ತು ಸರಾಸರಿ ಬೇಡಿಕೆಯನ್ನು ತೋರಿಸಿದೆ. ವಿದ್ಯುಚ್ಛಕ್ತಿ ಉತ್ಪಾದನೆಯು ಪ್ರಸಕ್ತ ಬೇಡಿಕೆಗಿಂತ (36,975 ಗಿ.ವ್ಯಾ.ಘಂ.) ಕನಿಷ್ಟ 1.9 ಪಟ್ಟು ಹೆಚ್ಚಿರುವುದನ್ನು ಇದು ತೋರಿಸುತ್ತದೆ.
ಚಿತ್ರ 8: ಮಾಸಿಕ ಸರಾಸರಿ ಬೇಡಿಕೆ ಮತ್ತು ಸರಾಸರಿ ಬಿಸಿಲೂಡಿಕೆಯೊಂದಿಗೆ ನಿರುಪಯುಕ್ತ ಭೂಮಿಯಿಂದ ವಿದ್ಯುಚ್ಛಕ್ತಿ ಉತ್ಪಾದನೆ
ಚಿತ್ರ 8 ರಲ್ಲಿ ಕರ್ನಾಟಕದಲ್ಲಿ ಪ್ರಸಕ್ತ ವಿದ್ಯುತ್ ಬೇಡಿಕೆ (36,975 ಗಿ.ವ್ಯಾ.ಘಂ.) ಯನ್ನು ಈಡೇರಿಸಲು ಸಾಧ್ಯವಾಗುವಷ್ಟು ವಿದ್ಯುಚ್ಛಕ್ತಿ ಉತ್ಪಾದಿಸಲು ಅವಶ್ಯವಿರುವ ನಿರುಪಯುಕ್ತ ಭೂವಿಸ್ತೀರ್ಣದ (ಶೇ. 1.2, 156.36 ಕಿ.ಮೀ.) ವಿವರಗಳನ್ನು ನೀಡಿದೆ.