ನೈಸರ್ಗಿಕ ಸಂಪನ್ಮೂಲಗಳನ್ನು ತೊರೆದ ಬೆಂಗಳೂರಿನ ಆಧುನಿಕತೆ - ವಾಸಯೋಗ್ಯವೇ?

ರಾಮಚಂದ್ರ ಟಿ.ವಿ.* ಭರತ್ ಎಚ್. ಐತಾಳ್,  ವಿನಯ್. ಎಸ್.,  ಗಣೇಶ ಹೆಗಡೆ

ಇಂಧನ ಮತ್ತು ಜೌಗುಭೂಮಿ ಸಂಶೋಧನಾ ವಿಭಾಗ (EWRG), ಪರಿಸರ ವಿಜ್ಞಾನ ಕೇಂದ್ರ [CES],
ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು, ಕರ್ನಾಟಕ, 560 012, ಭಾರತ
*ಮಿಂಚಂಚೆ: cestvr@ces.iisc.ernet.in
ಜಾಲತಾಣ: http://ces.iisc.ernet.in/energy; http://ces.iisc.ernet.in/foss
ದೂರವಾಣಿ: 080-22933099/22933503 (ವಿಸ್ತಾರ 107)

ಅಧ್ಯಯನ ಪ್ರದೇಶ

ಬೆಂಗಳೂರು/ಬೃಹತ್ ಬೆಂಗಳೂರು (77 37' 19.54'' ಪೂ. ಮತ್ತು 12 59' 09.76'' ಉ) ನಗರವನ್ನು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 8 ವಲಯ ಮತ್ತು 198 ವಾರ್ಡ್‍ಗಳಾಗಿ ವಿಭಾಗಿಸಲಾಗಿದೆ (ಚಿತ್ರ 1). ನಗರದ ವಿಸ್ತೀರ್ಣವು 69 ಚ.ಕೀ.ಮೀ.ನಿಂದ (1949) 741 ಚ.ಕೀ.ಮೀ.ಗೆ ಏರಿಕೆಯಾಗಿದ್ದು (ಚಿತ್ರ 2) 10 ಪಟ್ಟು ಹೆಚ್ಚಾಗಿದೆ. ಅಲ್ಲದೇ, ಬೆಂಗಳೂರು ಭಾರತದ 5ನೇ ಅತಿದೊಡ್ಡ ಮಹಾನಗರವಾಗಿದೆ. ಬೆಂಗಳೂರಿನ ಜನಸಂಖ್ಯೆ 2001ರಿಂದ (6.53 ಲಕ್ಷ) 2011ರ (9.58 ಲಕ್ಷ) ಅವಧಿಯಲ್ಲಿ ಶೇ. 48ರಷ್ಟು ಹೆಚ್ಚಾಗಿದೆ. ಕಳೆದ 2 ದಶಕದಲ್ಲಿ ವಾರ್ಡ್‍ವಾರು ಜನಸಂಖ್ಯೆಯ ಹಂಚಿಕೆಯನ್ನು ಚಿತ್ರ 4ರಲ್ಲಿ ತೋರಿಸಿದೆ. ನಗರದಲ್ಲಿ, 2001ರಿಂದ 2011ರ ವರೆಗೆ ಜನಸಾಂದ್ರತೆ (ಚಿತ್ರ 3) 10732 ರಿಂದ 13392ಕ್ಕೆ ಏರಿಕೆಯಾಗಿದೆ.