ನೈಸರ್ಗಿಕ ಸಂಪನ್ಮೂಲಗಳನ್ನು ತೊರೆದ ಬೆಂಗಳೂರಿನ ಆಧುನಿಕತೆ - ವಾಸಯೋಗ್ಯವೇ?

ರಾಮಚಂದ್ರ ಟಿ.ವಿ.* ಭರತ್ ಎಚ್. ಐತಾಳ್,  ವಿನಯ್. ಎಸ್.,  ಗಣೇಶ ಹೆಗಡೆ

ಇಂಧನ ಮತ್ತು ಜೌಗುಭೂಮಿ ಸಂಶೋಧನಾ ವಿಭಾಗ (EWRG), ಪರಿಸರ ವಿಜ್ಞಾನ ಕೇಂದ್ರ [CES],
ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು, ಕರ್ನಾಟಕ, 560 012, ಭಾರತ
*ಮಿಂಚಂಚೆ: cestvr@ces.iisc.ernet.in
ಜಾಲತಾಣ: http://ces.iisc.ernet.in/energy; http://ces.iisc.ernet.in/foss
ದೂರವಾಣಿ: 080-22933099/22933503 (ವಿಸ್ತಾರ 107)

ಭೂ ಬಳಕೆಯ ಬದಲಾವಣೆಗಳು

ಕಳೆದ ಶತಮಾನದಲ್ಲಿ ಬೆಂಗಳೂರು ಜೀವಿ ವಿಕಸನದ ಕೊಂಡಿಯಾದ ಜಲಮೂಲ/ಕೆರೆಗಳಿಂದ ಸಮೃದ್ಧವಾಗಿತ್ತು. 1962ರಲ್ಲಿ ಸುಮಾರು 265ಕ್ಕೂ ಹೆಚ್ಚು ಕೆರೆ, ಕೊಳ, ಜಲಾಶಯಗಳನ್ನು ಹೊಂದಿದ್ದ ಗಾರ್ಡನ್ ಸಿಟಿ ಇಂದು ಬಡವಾಗಿದೆ. ಒಂದು ಕಾಲದಲ್ಲಿ ನೀರಿನ ವಿಷಯದಲ್ಲಿ ಸ್ವಾವಲಂಬಿಯಾಗಿದ್ದ ಬೆಂಗಳೂರಿಗರು ಇವತ್ತು ಹನಿ ನೀರಿಗಾಗಿ ಕೈಚಾಚುತ್ತಿದ್ದಾರೆ. ಸದ್ಯ, ನಗರದಲ್ಲಿ 98 ಕೆರೆಗಳಿದ್ದು, ಬಹುಪಾಲು ಕೆರೆಗಳು ಕಲುಷಿತವಾಗಿವೆ. ಕಾಲಕ್ರಮೇಣ ನಗರದ ವ್ಯಾಪ್ತಿ ಹೆಚ್ಚಿದಂತೆಲ್ಲ, ಕೇಂದ್ರಭಾಗ ಹೆಚ್ಚು ಹೆಚ್ಚು ಜನ ನಿಬಿಡವಾಗುತ್ತಿದೆ. ರಸ್ತೆಗಳ ಜಾಲ ಹೆಚ್ಚಿತ್ತಿದೆ ಮತ್ತು ಅಗಲೀಕರಣಕ್ಕಾಗಿ ರಸ್ತೆ ಬದಿಯ ಮರಗಳನ್ನು ಕಡಿಯಲಾಗುತ್ತಿದೆ. ಹಲವಾರು ಕೆರೆ, ಕೊಳಗಳನ್ನು ಆಕ್ರಮಿಸಿಕೊಂಡು ವಸತಿ ಸಮುಚ್ಚಯ, ಬಹು ಮಹಡಿ ಕಟ್ಟಡ, ಆಟದ ಮೈದಾನ, ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇನ್ನುಳಿದ ಬಹುತೇಕ ಕೆರೆಗಳು ಕಸದ ತೊಟ್ಟಿಗಳಾಗಿವೆ. ಇದು ಹೀಗೆಯೇ ಮುಂದುವರಿದಲ್ಲಿ ಬೆಂಗಳೂರಿನ ಕೆರೆಗಳು ಇತಿಹಾಸದ ಪುಟಗಳಲ್ಲಿ ಮಾತ್ರ ಕಾಣಸಿಗುವುದು ನಿಶ್ಚಿತ. ಅಧ್ಯಯನದ ಪ್ರಕಾರ ಕಳೆದ 4 ದಶಕಗಳಲ್ಲಿ ಬೆಂಗಳೂರು ಶೇ. 584ರಷ್ಟು ಕಟ್ಟಡಗಳ ಹೆಚ್ಚುವಿಕೆಗೆ, ಶೇ. 74ರಷ್ಟು ಜಲಮೂಲಗಳ ಮತ್ತು ಶೇ. 66ರಷ್ಟು ಮರಗಳ ನಶಿಸುವಿಕೆಗೆ ಸಾಕ್ಷಿಯಾಗಿದೆ.

ಚಿತ್ರ 1: ಅಧ್ಯಯನ ಪ್ರದೇಶ- ಬೆಂಗಳೂರು/ಬೃಹತ್ ಬೆಂಗಳೂರು

ಚಿತ್ರ 2: ನಗರದ ವಿಸ್ತೀರ್ಣದಲ್ಲಾದ ಬದಲಾವಣೆ

ಚಿತ್ರ 3: ಬೆಂಗಳೂರಿನ ಜನಸಂಖ್ಯೆಯಲ್ಲಾದ ಬೆಳವಣಿಗೆ

ಚಿತ್ರ 4: ವಾರ್ಡ್‍ವಾರು ಜನಸಂಖ್ಯೆಯ ಹಂಚಿಕೆ

ಕೋಷ್ಟಕ 1, ಕಾಲಕ್ರಮೇಣ ಭೂ ಬಳಕೆಯಲ್ಲಾದ ಬದಲಾವಣೆಗಳನ್ನು ವಿವರಿಸುತ್ತದೆ (ಚಿತ್ರ 5). 1973ರಲ್ಲಿ ಶೇ. 7.97ರಷ್ಟಿದ್ದ ಕಟ್ಟಡ ಪ್ರದೇಶವು, 2012ರಲ್ಲಿ ಶೇ. 58.33ಕ್ಕೆ ಏರಿಕೆಯಾಗಿದೆ. 1990ರ ದಶಕದಲ್ಲಿ ಪೀಣ್ಯ ಹಾಗೂ ರಾಜಾಜಿನಗರಗಳಲ್ಲಿ ತ್ವರಿತ ಕೈಗಾರಿಕೀಕರಣದಿಂದಾದ ನಗರೀಕರಣವನ್ನು ಚಿತ್ರ 5ರಲ್ಲಿ ಗಮನಿಸಬಹುದು.

ಕೋಷ್ಟಕ 1: ಭೂ ಬಳಕೆಯ ಬದಲಾವಣೆಗಳು

 

ನಗರ

ಹಸಿರು

ಜಲ ಪ್ರದೇಶ ಇತರೆ

ಇತರೆ

ವರ್ಷ

ಹೇ.

%

ಹೇ.

%

ಹೇ.

%

ಹೇ.

%

1973

5448

7.97

46639

68.27

2324

3.4

13903

20.35

1992

18650

27.3

31579

46.22

1790

2.6

16303

23.86

1999

24163

35.37

31272

45.77

1542

2.26

11346

16.61

2006

29535

43.23

19696

28.83

1073

1.57

18017

26.37

2012

41570

58.33

16569

23.25

665

0.93

12468

17.49

ವಾರ್ಡ್‍ಗಳಲ್ಲಿ ಮರಗಳ ಹಂಚಿಕೆ

ಬೆಂಗಳೂರನ್ನು ಕೇಂದ್ರೀಯ ವಾಣಿಜ್ಯ ಪ್ರದೇಶದಿಂದ 17 ಏಕ-ಕೇಂದ್ರೀಯ ವೃತ್ತಗಳಲ್ಲಿ ವಿಭಾಗಿಸಲಾಯಿತು. ಪ್ರತೀ ವೃತ್ತವೂ, ಅದರ ಹಿಂದಿನ ವೃತ್ತಕ್ಕಿಂತ 1 ಕೀ.ಮೀ. ಹಚ್ಚಿನ ತ್ರಿಜ್ಯವನ್ನು ಹೊಂದಿದ್ದು, ಇದು ಹಸಿರು ಹೊದಿಕೆಯ ಬದಾಲಾವಣೆಯನ್ನು ವಿಶ್ಲೇಷಿಸಲು ಸಹಾಯಕವಾಗಿದೆ. ಚಿತ್ರ 6, 1973ರಿಂದ 2013ರ ವರೆಗೆ ಪ್ರತೀ ವೃತ್ತದಲ್ಲಿನ ಮರಗಳ ಸಾಂದ್ರತೆಯನ್ನು ವಿವರಿಸುತ್ತದೆ. ಲಾಲ್‍ಬಾಗ್ ಮತ್ತು ಕಬ್ಬನ್ ಪಾರ್ಕ್‍ಗಳ ಇರುವಿಕೆಯಿಂದ ಕೇಂದ್ರೀಯ ಪ್ರದೇಶವು ಅಧಿಕ ಮರಗಳ ಸಾಂದ್ರತೆಯನ್ನು ತೋರಿಸುತ್ತದೆ. 2013ರ ವಾರ್ಡ್‍ವಾರು ಮರಗಳ ಸಾಂದ್ರತೆಯನ್ನು ಚಿತ್ರ 7ರಲ್ಲಿ ಕೊಡಲಾಗಿದೆ. ಅರಮನೆ ನಗರ, ಹುಡಿ ಮತ್ತು ವಸಂತಪುರ ವಾರ್ಡಗಳಲ್ಲಿ ಮರಗಳ ಸಾಂದ್ರತೆಯ ಪ್ರಮಾಣ 0.4ಕ್ಕಿಂತ ಹೆಚ್ಚಾಗಿದ್ದರೆ, ಚಿಕ್ಕಪೇಟೆ, ಲಗ್ಗೆರೆ, ಹೆಗ್ಗನಹಳ್ಳಿ, ಹೊಂಗಸಂದ್ರ ಹಾಗೂ ಪಾದರಾಯನಪುರ ವಾರ್ಡಗಳು 0.015ಕ್ಕಿಂತ ಕಡಿಮೆ ಮರ ಸಾಂದ್ರತೆಯನ್ನು ಹೊಂದಿವೆ. ಬೆಂಗಳೂರಿನ ಸರಾಸರಿ ಮರ ಸಾಂದ್ರತೆಯ ಪ್ರಮಾಣ 0.14.

ಅಂದರೆ, ಬೃಹತ್ ಬೆಂಗಳೂರಿನ ವಿಸ್ತೀರ್ಣ: 741 ಚ.ಕೀ.ಮೀ.
ಒಟ್ಟೂ ಹಸಿರು ಹೊದಿಕೆಯ ವಿಸ್ತೀರ್ಣ: 100.2 ಚ.ಕೀ.ಮೀ.
ಮರ ಸಾಂದ್ರತೆಯ ಪ್ರಮಾಣ = 100.2/741 = 0.14 (ಪ್ರತಿ ಚ.ಕೀ.ಮೀ.ಗೆ)


1973

1992

1999

 

2006

2012

ಬೆಂಗಳೂರಿನ ಕೆರೆಗಳು

 

ಚಿತ್ರ 5: ಭೂ ಬಳಕೆಯ ಬದಲಾವಣೆಗಳು

 

 


   1973                       2013
 



ಚಿತ್ರ 6: ಹಸಿರು ಹೊದಿಕೆಯ ಸಾಂದ್ರತೆಯ ಬದಾಲಾವಣೆ           ಚಿತ್ರ 7: ವಾರ್ಡ್‍ವಾರು ಮರಗಳ ಸಾಂದ್ರತೆ

ವಾರ್ಡ್‍ವಾರು ಮರಗಳ ಸಂಖ್ಯೆಯನ್ನು ಚಿತ್ರ 8ರಲ್ಲಿ ನೀಡಲಾಗಿದೆ. ಇದು ವಿವಿಧ ವಾರ್ಡ್‍ಗಳಲ್ಲಿ ಮರಗಳ ಹಂಚಿಕೆಯನ್ನು ಹೋಲಿಸುತ್ತದೆ. ವರ್ತೂರು, ಬೆಳ್ಳಂದೂರು, ಅಗರಂ, ಅರಮನೆ ನಗರ ವಾರ್ಡಗಳಲ್ಲಿ 40,000ಕ್ಕೂ ಹೆಚ್ಚಿನ ಮರಗಳಿವೆ ಹಾಗೂ ಚಿಕ್ಕಪೇಟೆ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ, ಕುಶಾಲ ನಗರ ವಾರ್ಡಗಳಲ್ಲಿ 100ಕ್ಕಿಂತ ಕಡಿಮೆ ಮರಗಳಿರುವುದು ತಿಳಿದುಬಂದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಕೇವಲ 14,78,412 ಮರಗಳಿದ್ದು, ಕಾಲಕ್ರಮೇಣ ಈ ಸಂಖ್ಯೆ ಕಡಮೆಯಾಗುತ್ತಿದೆ. ಎಲ್ಲಾ ವಾರ್ಡಗಳಲ್ಲಿ ಪ್ರತೀ ವ್ಯಕ್ತಿಗೆ ಲಭ್ಯವಿರುವ ಮರಗಳನ್ನು ಕಂಡುಹಿಡಯಲಾಗಿದ್ದು, ಇದನ್ನು ಚಿತ್ರ 9ರ ಮೂಲಕ ವಿವರಿಸಲಾಗಿದೆ. ಇದರ ಪ್ರಕಾರ, ಚಿಕ್ಕಪೇಟೆ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ, ದಯಾನಂದ ನಗರ ವಾರ್ಡಗಳಲ್ಲಿ ಪ್ರತೀ ವ್ಯಕ್ತಿಗೆ 0.002ಕ್ಕಿಂತ ಕಡಿಮೆ ಮರಗಳು ಲಭ್ಯವಿದೆ. ಅಂದರೆ, ಪ್ರತೀ ಮರವು 500 ಜನರಿಗೆ ಸೇವೆಯನ್ನು ಒದಗಿಸುತ್ತದೆ.

 

 

ಚಿತ್ರ 8: ವಾರ್ಡ್‍ವಾರು ಮರಗಳ ಸಂಖ್ಯೆ

ಇದಕ್ಕೆ ಹೋಲಿಸಿದರೆ ವರ್ತೂರು, ಬೆಳ್ಳಂದೂರು, ಜಕ್ಕೂರು, ಅರಮನೆ ನಗರ ವಾರ್ಡಗಳಲ್ಲಿ ಹೆಚ್ಚಿನ ಮರಗಳಿದ್ದು, ಪ್ರತೀ ವ್ಯಕ್ತಿಗೆ ಕನಿಷ್ಠ ಒಂದು ಮರ ಲಭ್ಯವಿದೆ. ಬೆಂಗಳೂರಿಗೆ ಹೋಲಿಸಿದರೆ ಗಾಂಧೀನಗರ (ಗುಜರಾತ್), ನಾಸಿಕ್ (ಮಹರಾಷ್ಟ್ರ)ಗಳಲ್ಲಿ ಪ್ರತೀ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಮರ ಲಭ್ಯವಿದೆ. ಆದರೆ ಬಹುತೇಕ ನಗರಗಳಲ್ಲಿ ಮರಗಳ ಪ್ರಮಾಣ ಇಳಿಮುಖವಾಗುತ್ತಿರುವುದು ಗಂಭೀರವಾಗಿ ಚಿಂತಿಸಬೇಕಾದ ವಿಷಯ. ಗಾಂಧೀನಗರ, ಬೆಂಗಳೂರು, ಅಹಮದಾಬಾದ್ ಹಾಗೂ ಬೃಹನ್ ಮುಂಬೈ ನಗರಗಳು 400 ಚ.ಕೀ.ಮೀ.ಗಿಂತಲೂ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿವೆ. ಪ್ರತೀ 100 ಜನರಿಗೆ ಗಾಂಧಿನಗರ 416 ಮರಗಳನ್ನು ಹೊಂದಿದ್ದರೆ, ಬೆಂಗಳೂರು 17, ಮುಂಬೈ 15 ಮತ್ತು ಅಹಮದಾಬಾದ್ 11 ಮರಗಳನ್ನು ಹೊಂದಿವೆ. ಕೋಷ್ಟಕ 2ರಲ್ಲಿ ನಗರವಾರು ಮರಗಳ ಹಾಗೂ ಜನಸಂಖ್ಯೆಯ ವಿವರಗಳನ್ನು ನೀಡಲಾಗಿದೆ.

ಕೋಷ್ಟಕ 2: ವಿವಿಧ ನಗರಗಳಲ್ಲಿ ಮರಗಳ ಹಾಗೂ ಜನಸಂಖ್ಯೆಯ ವಿವರ

ಪ್ರದೇಶ

ಜನಸಂಖ್ಯೆ

ವಿಸ್ತೀರ್ಣ

ಮರಗಳ ಸಂಖ್ಯೆ

ಪ್ರತೀ ವ್ಯಕ್ತಿಗೆ ಲಭ್ಯವಿರುವ ಮರ

ಪ್ರತೀ ಹೇಕ್ಟೇರ್‍ನಲ್ಲಿರುವ ಮರಗಳು

ಅಹ್ಮದಾಬಾದ್

5570590

46985

617090

0.111

13.13

ಗಾಂಧೀನಗರ

208300

57000

866670

4.161

15.20

ಬೃಹನ್ ಮುಂಬೈ

12478447

43771

1917844

0.154

43.82

ಬೆಂಗಳೂರು

9588910

74100

1478412

0.155

19.95