ರಾಮಚಂದ್ರ ಟಿ.ವಿ., ಭರತ್ ಎಚ್. ಐತಾಳ್, ವಿನಯ್. ಎಸ್., ರಾವ್ ಜಿ.ಆರ್., ಗೌರಿ ಕುಲಕರ್ಣಿ, ತಾರಾ ಎನ್.ಎಮ್., ನೂಪುರ್ ನಾಗರ್ ಮತ್ತು ಗಣೇಶ ಹೆಗಡೆ |
l |
ಸಾರಾಂಶ
ಬಹುಮಹಡಿ ಕಾಂಕ್ರೀಟ್ ಕಟ್ಟಡಗಳೇ ಕಾಣಸಿಗುವ ನಗರ ಪ್ರದೇಶಗಳಲ್ಲಿ, ಉದ್ಯಾನವನಗಳು, ಸಾಲು ಮರಗಳು ಮತ್ತು ಮನೆಯ ಹಿಂಭಾಗಗಳಲ್ಲಿ ವಿರಳವಾದ ಮರಗಳು, ಪೊದೆಗಳು ಹಾಗೂ ಔಷಧೀಯ ಸಸ್ಯಗಳನ್ನುಕಾಣಬಹುದು. ನಗರದ ಹಸಿರು ಪ್ರದೇಶಗಳು ವಾತಾವರಣದಲ್ಲಿನ (ಹಸಿರು ಮನೆ ಅನಿಲ) ಇಂಗಾಲವನ್ನು ಕ್ರೋಢೀಕರಿಸುವುದಲ್ಲದೇ ಸೂಕ್ಷ್ಮ ವಾತಾವರಣದ ಸಮತೋಲನ ಕಾಪಾಡುವಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತವೆ. ಮರಗಳು ಹೆಚ್ಚಿನ ಪ್ರಮಾಣದ ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದರ ಮೂಲಕ, ಅಂತರ್ಜಲದ ಮಟ್ಟವನ್ನು ಕಾಪಾಡುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನಗರ ಪ್ರದೇಶದಲ್ಲಿ ಪ್ರತೀ ವ್ಯಕ್ತಿಯ ಅಮ್ಲಜನಕ ಹಾಗೂ ಇತರ ಅರಣ್ಯಾಧಾರಿತ ಸೇವೆಗಳನ್ನು ಪೂರೈಸಲು ಕನಿಷ್ಠ 9.5 ಚ.ಮೀ. ಹಸಿರು ವಲಯದ ಅಗತ್ಯವಿದೆ. ಒಂದು ಅಂದಾಜಿನ ಪ್ರಕಾರ 1 ಹೆಕ್ಟೇರ್ ಅರಣ್ಯವು ಒಂದು ವರ್ಷಕ್ಕೆ ಸುಮಾರು 6 ಟನ್‍ಗಳಷ್ಟು ಇಂಗಾಲವನ್ನು ಸಂಗ್ರಹಿಸಬಲ್ಲದು, ಅಂದರೆ ಪ್ರತೀ ಮರ ವರ್ಷಕ್ಕೆ 6 ಕಿ.ಗ್ರಾಂ.ನಷ್ಟು ಇಂಗಾಲ ಸಂಗ್ರಹ ಮಾಡುವ ಸಾಮಥ್ರ್ಯ ಹೊಂದಿದೆ. ಸಾಮಾನ್ಯವಾಗಿ ಪ್ರತೀ ಮನುಷ್ಯ ವರ್ಷಕ್ಕೆ 192ರಿಂದ 328 ಕಿ.ಗ್ರಾಂ.ನಷ್ಟು ಇಂಗಾಲವನ್ನು ಕೇವಲ ಉಸಿರಾಟದ ಮೂಲಕ ಬಿಡುಗಡೆ ಮಾಡುತ್ತಾನೆ. ಅಂದರೆ, ಉಸಿರಾಟದಿಂದ ಬಿಡುಗಡೆಯಾದ ಇಂಗಾಲವನ್ನು ಮಿತಗೊಳಿಸಲು ಪ್ರತೀ ವ್ಯಕ್ತಿಗೆ ಸುಮಾರು 32ರಿಂದ 55 ಮರಗಳ ಅವಶ್ಯಕತೆಯಿದೆ.
ಬೆಂಗಳೂರು/ಬೃಹತ್ ಬೆಂಗಳೂರು (77ಲಿ 37' 19.54'' ಪೂ. ಮತ್ತು 12ಲಿ 59' 09.76'' ಉ.) ಕರ್ನಾಟಕದ ಪ್ರಮುಖ ನಗರ, ರಾಜಧಾನಿ ಹಾಗೂ ವಾಣಿಜ್ಯ, ಕೈಗಾರಿಕಾ ಮತ್ತು ಜ್ಞಾನಾರ್ಜನೆಯ ಕೇಂದ್ರ. ಬೆಂಗಳೂರು ನಗರದ ಜನಸಂಖ್ಯೆ 2001ರಿಂದೀಚೆಗೆ (65,37,124) ಅಗಾಧ ಪ್ರಮಾಣದಲ್ಲಿ ಏರಿಕೆಯಾಗಿದೆ (2011ರಲ್ಲಿ 95,88,910). ಜನಸಂಖ್ಯೆಯು ಶೇ. 46.68ರಷ್ಟು ಹೆಚ್ಚಳಗೊಂಡಿದೆ ಹಾಗೂ ಜನಸಾಂದ್ರತೆಯು ಪ್ರತೀ ಚದರ ಕೀ.ಮೀ.ಗೆ 10,732ರಿಂದ (2001ರಲ್ಲಿ) 13,392ಕ್ಕೆ (2011ರಲ್ಲಿ) ಏರಿಕೆಗೊಂಡಿದೆ. ಬೆಂಗಳೂರು ಹೆಚ್ಚಾಗಿ ಒಣ ಎಲೆಉದುರುವ ಮರಗಳನ್ನು ಹೊಂದಿದ್ದು, ಕೈಗಾರಿಕೀಕರಣಕ್ಕೂ ಮೊದಲು ವರ್ಷವಿಡೀ ಹಿತಕರವಾದ ಹವಾಮಾನವನ್ನು ಹೊಂದಿರುತ್ತಿತ್ತು.
ರಿಸೋಸ್ರ್ಯಾಟ್-2 ಎಮ್‍ಎಸ್‍ಎಸ್ ಮತ್ತು ಕಾರ್ಟೋಸ್ಯಾಟ್-2ರ ಅಂಕಿಅಂಶಗಳ ಸಂಯೋಗದಿಂದ ನಡೆಸಿದ ಭೂ ಬಳಕೆಯ ವಿಶ್ಲೇಷಣೆಯು 100.02 (ಶೇ. 14.08) ಚ.ಕೀ.ಮೀ.ನಷ್ಟು ಅರಣ್ಯಾವೃತ್ತ ಪ್ರದೇಶವನ್ನು ತೋರಿಸುತ್ತದೆ. ಚಿಕ್ಕಪೇಟೆ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ ವಾರ್ಡಗಳು ಅತಿ ಕಡಿಮೆ ಮರಗಳಿಂದ ಕೂಡಿದ ಭೂ ಬಳಕೆಯನ್ನು ಹೊಂದಿದ್ದು (1 ಹೆಕ್ಟೇರ್‍ಗಿಂತ ಕಡಿಮೆ), ವರ್ತೂರು, ಬೆಳ್ಳಂದೂರು, ಅಗರಂ ವಾರ್ಡಗಳು ಹೆಚ್ಚಿನ ಮರಗಳಿಂದ ಕೂಡಿದ ಭೂ ಬಳಕೆಯನ್ನು ಹೊಂದಿವೆ (300 ಹೆಕ್ಟೇರ್‍ಗಿಂತ ಅಧಿಕ). ಅರಮನೆ ನಗರ, ಹುಡಿ ಮತ್ತು ವಸಂತಪುರ ವಾರ್ಡಗಳಲ್ಲಿ ಹಸಿರು ಭೂ ಹೊದಿಕೆಯ ಪ್ರಮಾಣ ಹೆಚ್ಚಾಗಿದ್ದರೆ (0.4), ಚಿಕ್ಕಪೇಟೆ, ಲಗ್ಗೆರೆ, ಹೆಗ್ಗನಹಳ್ಳಿ, ಹೊಂಗಸಂದ್ರ ಹಾಗೂ ಪಾದರಾಯನಪುರ ಅತಿ ಕಡಿಮೆ ಮರ ಸಾಂದ್ರತೆಯನ್ನು (0.015) ಹೊಂದಿವೆ. ಬೆಂಗಳೂರಿನ ಸರಾಸರಿ ಮರ ಸಾಂದ್ರತೆ 0.14ರಷ್ಟಾಗಿದೆ. ಮರಗಳ ಮೇಲ್ಛಾವಣಿ ಚಿತ್ರಿಸುವಿಕೆಯಿಂದ ಮತ್ತು ಸ್ಥಳೀಯ ಅಂಕಿಅಂಶಗಳಿಂದ, ವರ್ತೂರು, ಬೆಳ್ಳಂದೂರು, ಅಗರಂ, ಅರಮನೆ ನಗರ ವಾರ್ಡಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮರಗಳಿರುವುದು ತಿಳಿದು ಬಂದಿದೆ. ಹಾಗೆಯೇ, ಚಿಕ್ಕಪೇಟೆ, ಪಾದರಾಯನಪುರ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಕುಶಾಲ ನಗರಗಳಲ್ಲಿ 100ಕ್ಕಿಂತ ಕಡಿಮೆ ಮರಗಳಿರುವುದು ಬೆಳಕಿಗೆ ಬಂದಿದೆ. ಈ ಲೆಕ್ಕಾಚಾರದಂತೆ ಬೆಂಗಳೂರಿನಲ್ಲಿ ಪ್ರಸ್ತುತ 14,78,412 ಮರಗಳಿವೆ ಎಂದು ಊಹಿಸಲಾಗಿದೆ. ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ, ಚಿಕ್ಕಪೇಟೆ, ದಯಾನಂದ ನಗರ ವಾರ್ಡ್‍ಗಳಲ್ಲಿ ಪ್ರತೀ ವ್ಯಕ್ತಿಗೆ ಲಭ್ಯವಿರುವ ಮರ 0.002ಕ್ಕಿಂತ ಕಡಿಮೆಯಾಗಿದೆ. ಅಂದರೆ, ಈ ವಾರ್ಡಗಳಲ್ಲಿ ಪ್ರತೀ ಮರವನ್ನು ಸುಮಾರು 500 ಜನ ಅವಲಂಬಿತರಾಗಿದ್ದಾರೆ. ಇದಕ್ಕೆ ಹೋಲಿಸಿದರೆ, ವರ್ತೂರು, ಬೆಳ್ಳಂದೂರು, ಜಕ್ಕೂರು, ಅಗರಂ, ಅರಮನೆ ನಗರ ವಾರ್ಡಗಳು ಜನಸಂಖ್ಯೆಗಿಂತ ಹೆಚ್ಚಿನ ಮರಗಳನ್ನು ಹೊದಿವೆ. ಅಂತರ್‍ನಗರ ವೈಜ್ಞಾನಿಕ ವಿಶ್ಲೇಷಣೆಯಿಂದ ಗಾಂಧಿನಗರ, ಬೆಂಗಳೂರು, ಅಹಮದಾಬಾದ್ ಹಾಗೂ ಬೃಹನ್ ಮುಂಬೈ ನಗರಗಳು 400 ಚ.ಕೀ.ಮೀ.ಗಿಂತಲೂ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿವೆ. ಪ್ರತೀ 100 ಜನರಿಗೆ ಗಾಂಧಿನಗರ 416 ಮರಗಳನ್ನು ಹೊಂದಿದ್ದರೆ, ಬೆಂಗಳೂರು 17, ಮುಂಬೈ 15 ಮತ್ತು ಅಹಮದಾಬಾದ್ 11 ಮರಗಳನ್ನು ಹೊಂದಿವೆ. ನಗರೀಕರಣ ಹಾಗೂ ಮರಗಳ ನಾಶ ನಗರದ ವಾತಾವರಣ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮವನ್ನುಂಟುಮಾಡುತ್ತದೆ. ನಗರವಾಸಿಗಳು ಅನುಭವಿಸುತ್ತಿರುವ ಮಾನಸಿಕ, ಸಾಮಾಜಿಕ ಹಾಗೂ ದೈಹಿಕ ತೊಂದರೆಗಳು ಮಿತಿಮೀರಿದ ನಗರೀಕರಣದ ಕೊಡುಗೆಗಳೇ ಅಗಿವೆ. ಇಷ್ಟೇ ಅಲ್ಲದೇ, ಅತಿಯಾದ ಹಿಂಸೆ, ಸ್ಥೂಲಕಾಯತೆ, ಹೆಚ್ಚಿದ ಉಸಿರಾಟದ ತೊಂದರೆ, ಸಂಚಾರ ಅಡಚಣೆ, ರಸ್ತೆ ಅಪಘಾತ ಮುಂತಾದವುಗಳು ವಿಶೇಷವಾಗಿ ನಗರಗಳಲ್ಲಿ ಹೆಚ್ಚಾಗಿ ಕಂಡುಬರುವುದು ನಗರೀಕರಣದ ಕರಾಳ ಮುಖವನ್ನು ತೋರಿಸುತ್ತವೆ. ಮಾನವನ ಅಥವಾ ಒಂದು ಸಮುದಾಯದ ಸಮಗ್ರ ಪ್ರಗತಿಗೆ ಕನಿಷ್ಠ ಶೇ. 33ರಷ್ಟು ಹಸಿರು ಹೊದಿಕೆಯನ್ನು ಕಾಪಾಡುವುದು ನಗರ ಯೋಜಕರ ಕರ್ತವ್ಯವಾಗಿದೆ. ಹಾಗಾದಲ್ಲಿ ಮಾತ್ರ ಪ್ರತೀ ವ್ಯಕ್ತಿಗೆ ಕನಿಷ್ಠ ಪಕ್ಷ 1.15ರಷ್ಟು ಮರವಾದರೂ ಉಳಿಯಬಹುದು.
ಮುನ್ನುಡಿ
ಕಾಂಕ್ರೀಟ್ ಕಟ್ಟಡಗಳೇ ಪ್ರಮುಖವಾಗಿರುವ ನಗರ ಪ್ರದೇಶಗಳಲ್ಲಿ, ಉದ್ಯಾನವನಗಳು, ಸಾಲು ಮರಗಳು ಮತ್ತು ಮನೆಯ ಹಿಂಭಾಗಗಳಲ್ಲಿ ವಿರಳವಾದ ಮರಗಳು, ಪೊದೆಗಳು ಹಾಗೂ ಔಷಧೀಯ ಸಸ್ಯಗಳುಕಾಣಸಿಗುತ್ತವೆ. ನಗರದ ಹಸಿರು ಪ್ರದೇಶಗಳು ವಾತಾವರಣದಲ್ಲಿನ (ಹಸಿರು ಮನೆ ಅನಿಲ) ಇಂಗಾಲವನ್ನು ಕ್ರೋಢೀಕರಿಸುವುದಲ್ಲದೇ ಸೂಕ್ಷ್ಮ ವಾತಾವರಣದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಸಿರು ಪ್ರದೇಶಗಳು (ಮರಗಳು) ಹೆಚ್ಚಿನ ಪ್ರಮಾಣದ ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದರ ಮೂಲಕ, ಅಂತರ್ಜಲದ ಮಟ್ಟವನ್ನು ಕಾಪಾಡುತ್ತವೆ. ನಗರ ಪ್ರದೇಶದ ಮರಗಳು ಮಹತ್ತರ ನೈಸರ್ಗಿಕ, ಪರಿಸರೀಯ, ಆರ್ಥಿಕ ಹಾಗೂ ಸಾಮಾಜಿಕ ಸೇವೆಗಳನ್ನು ಒದಗಿಸುವುದರ ಜೊತೆಗೆ ಗಾಳಿಯಲ್ಲಿನ ಮಲಿನಕಾರಕಗಳಾದ ಗಂಧಕದ ಡೈ ಆಕ್ಸೈಡ್, ಸಾರಜನಕದ ಆಕ್ಸೈಡ್‍ಗಳು, ಇಂಗಾಲದ ಡೈ ಆಕ್ಸೈಡ್‍ನ್ನು ಕಡಿಮೆಗಳಿಸುತ್ತವೆ ಹಾಗೂ ಅಂಟಿನ ಮೇಲ್ಪದರ ಹೊಂದಿರುವ ಎಲೆಗಳು ಅಥವಾ ಬಲೆಗಳಂತಹ ರಚನೆಗಳಿಂದ ತೇಲಾಡುವ ಕಣಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಮಾವು, ಅಶೋಕ, ಹೊಂಗೆ ಹಾಗೂ ಅರಸಿ ಮರದ ಎಲೆಗಳಿಂದ ಧೂಳಿನ ಪ್ರಮಾಣ ಕಡಿಮೆಯಗುವುದು ಹಲವಾರು ಸಂಶೋಧನಾ ಪ್ರಬಂಧಗಳಲ್ಲಿ ದಾಖಲಾಗಿದೆ. ಮರಗಳು ಹೀರುವಿಕೆ ಮತ್ತು ಚದುರುವಿಕೆಯಿಂದ ಕರ್ಕಶ ಶಬ್ದದ ಪ್ರಸಾರವನ್ನು ತಡೆಹಿಡಿಯುತ್ತವೆ ಮತ್ತು ಇದು ಆ ಪ್ರದೇಶದ ಜನರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇಷ್ಟೇ ಅಲ್ಲದೇ, ಇವು ವಾತಾವರಣದ ತಾಪಮಾನವನ್ನು ಕಾಯ್ದುಕೊಳ್ಳುವುದರಿಂದ ಆ ಪರಿಸರದಲ್ಲಿ ವಾತಾನುಕೂಲಿಯಗಳ ಬಳಕೆ ತಗ್ಗುವುದರಿಂದ ವಿದ್ಯುಚ್ಛಕ್ತಿಯ ಉಳಿತಾಯ ಸಾಧ್ಯ.
ಮರದ ನೆರಳಿನಿಂದ ಸೂರ್ಯನ ಶಾಖದ ಹೀರುವಿಕೆ ತಗ್ಗುತ್ತದೆ ಹಾಗೂ ಕಟ್ಟಡಗಳು ತಂಪಾಗಿರಲು ಸಾಧ್ಯ ಮತ್ತು ಇದು ವಾತಾವರಣದ ಜೊತೆಗಿನ ದೀರ್ಘತರಂಗ ವಿನಿಮಯವನ್ನು ಸಹ ತಗ್ಗಿಸುತ್ತದೆ. ಎಲೆಗಳ ಭಾಷ್ಪೀಕರಣದಿಂದ ವಾತಾವರಣಕ್ಕೆ ನೀರಾವಿಯು ಬಿಡುಗಡೆಯಾಗುತ್ತದೆ ಹಾಗೂ ಗಾಳಿಯಲ್ಲಿನ ಆದ್ರ್ರತೆ ಹೆಚ್ಚುತ್ತದೆ. ಹಸಿರು ಹೊದಿಕೆ ಶೇ. 30ರಷ್ಟು ಮಳೆಯ ನೀರನ್ನು ಎಲೆಗಳ ಮೂಲಕ ಭಾಷ್ಪೀಕರಣದಿಂದ ವಾತಾವರಣಕ್ಕೆ ಬಿಡುಗಡೆ ಮಾಡುವ ಮೂಲಕ ಜಲಚಕ್ರದಲ್ಲಿ ಮಹತ್ತರ ಪಾತ್ರವಹಿಸಿತ್ತದೆ. ಮಳೆ ನೀರಿನ ಬಹುಪಾಲು, ಬೇರುಗಳ ಮೂಲಕ ಅಂತರ್ಜಲವನ್ನು ಸೇರುತ್ತದೆ ಮತ್ತು ಅಲ್ಲಿ ಸಂಗ್ರಹಿಸಲ್ಪಡುತ್ತದೆ. ಹೀಗೆ ಅರಣ್ಯವು ಪ್ರವಾಹ ಮತ್ತು ಭೂಕುಸಿತವನ್ನು ತಡೆಗಟ್ಟುತ್ತದೆ. ನಗರದಲ್ಲಿ ವಾತಾವರಣದ ತಂಪನ್ನು ಕಾಯ್ದುಕೊಳ್ಳುವ ಸಾಮಥ್ರ್ಯವು ಕಾಡಿನ ಮರಗಳ ಪ್ರಭೇದ ಹಾಗೂ ವಿಸ್ತಾರವನ್ನು ಅವಲಂಬಿತವಾಗಿದೆ. ಎಲೆಯ ತಾಪಮಾನ ಅದರ ಪ್ರಾಕೃತಿಕ ರಚನೆ ಮತ್ತು ಆಕಾರವನ್ನು ಅವಲಂಬಿಸಿದೆ. ಹಲವಾರು ಅಧ್ಯಯನಗಳು ವಾತಾವರಣದ ತಂಪನ್ನು ಕಾಯ್ದುಕೊಳ್ಳುವ ಮರಗಳ ಗುಣವನ್ನು ಸಮರ್ಥಿಸಿವೆ. ನಗರ ಪ್ರದೇಶ ಗ್ರಾಮೀಣ ಪ್ರದೇಶಕ್ಕಿಂತ ಸುಮಾರು 2.5○ ಸೆ.ನಷ್ಟು ಹೆಚ್ಚಿನ ಉಷ್ಣಾಂಶ ಹೊಂದಿರುತ್ತದೆ ಹಾಗೂ ನಗರದ ನೆರಳು ರಹಿತ ನಿವೇಶನ, ನೆರಳಿನಲ್ಲಿರುವ ನಿವೇಶನಕ್ಕಿಂತ 1o ಸೆ.ನಷ್ಟು ಹೆಚ್ಚಿನ ಉಷ್ಣಾಂಶ ಹೊಂದಿರುತ್ತದೆ ಎಂಬುದು ವೈಜ್ಞಾನಿಕ ಅಧ್ಯಯನಗಳಲ್ಲಿ ದಾಖಲಾಗಿದೆ.
ವಾತಾವರಣದ ತಾಪಮಾನವನ್ನು ಕಾಪಾಡುವ ಸಾಮಥ್ರ್ಯ ಎಲ್ಲಾ ಮರ ಪ್ರಭೇದಗಳಲ್ಲಿ ಒಂದೇ ತೆರನಾಗಿರುವುದಿಲ್ಲ, ಇದು ಮರದ ಆಕಾರ, ಗಾತ್ರ ಹಾಗೂ ಆವರಿಸಿರುವ ಹಸಿರು ಮೇಲ್ಛಾವಣಿಯನ್ನು ಅವಲಂಬಿಸಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಅರಣ್ಯದ ಸೇವೆಗಳು (ಅಮ್ಲಜನಕ, ಸೂಕ್ಷ್ಮ ವಾತಾವರಣದ ಸಮತೋಲನ) ಹಾಗೂ ಉತ್ಪನ್ನಗಳನ್ನು (ಉರುವಲು, ಎಲೆಗಳು) ಪರಿಗಣಿಸಿ, ಪ್ರತೀ ವ್ಯಕ್ತಿಗೆ ಕನಿಷ್ಠ 9.5 ಚ.ಮೀ.ನಷ್ಟು ಹಸಿರು ಪ್ರದೇಶವಿರಬೇಕು ಎಂದು ಶಿಫಾರಸ್ಸು ಮಾಡಿದೆ. ಮರಗಳು ಅಸಂಖ್ಯ ಪ್ರಾಣಿ-ಪಕ್ಷಿಗಳಿಗೆ ಮತ್ತು ಕೀಟಾದಿಗಳಿಗೆ ಆಹಾರ ಹಾಗೂ ಆಶ್ರಯವನ್ನು ಒದಗಿಸುತ್ತವೆ. ಅಲ್ಲದೇ ಮರಗಳು ವಿವಿಧ ಬಣ್ಣದ ಹೂವುಗಳಿಂದ ಆ ಪ್ರದೇಶವನ್ನು ನಯನ ಮನೋಹರವಾಗಿಸುತ್ತವೆ.
ಕೈಗಾರಿಕೀಕರಣ, ಅರಣ್ಯ ನಾಶ ಮತ್ತಿತರ ಮಾನವೀಯ ಚಟುವಟಿಕೆಗಳು, ಹಸಿರು ಮನೆ ಅನಿಲಗಳಾದ ಗಂಧಕದ ಡೈ ಆಕ್ಸೈಡ್, ಸಾರಜನಕದ ಆಕ್ಸೈಡ್‍ಗಳು, ಮೀಥೇನ್, ಇಂಗಾಲದ ಡೈ ಆಕ್ಸೈಡ್‍ಗಳ ಹೆಚ್ಚುವಿಕೆಗೆ ಕಾರಣವಾಗಿವೆ. ಸಾಂಪ್ರದಾಯಿಕ ಇಂಧನಗಳು ಸುಮಾರು ಶೇ.75ರಷ್ಟು ಇಂಗಾಲದ ಡೈ ಆಕ್ಸೈಡ್ ಬಿಡುಗಡೆಗೆ ಕಾರಣವಾಗಿವೆ ಹಾಗೂ ಕಳೆದ 20 ವರ್ಷದಲ್ಲಿ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ 280 ಪಿ.ಪಿ.ಎಂ.ನಿಂದ 382 ಪಿ.ಪಿ.ಎಂ.ಗೆ ಏರಿಕೆಯಾಗಿದೆ ಮತ್ತು 2011ರಲ್ಲಿ ಇದರ ಪ್ರಮಾಣ 390 ಪಿ.ಪಿ.ಎಂ.ರಷ್ಟಿದೆ. ಇದು ಕೆಲವು ನಿರ್ದಿಷ್ಟ ವಿದ್ಯುತ್ಕಾಂತೀಯ ತರಂಗಗಳನ್ನು ವಾತಾವರಣದಲ್ಲಿಯೇ ಹಿಡಿದಿಟ್ಟುಕೊಳ್ಳುವುದರಿಂದ ತಾಪಮಾನದಲ್ಲಿ ಏರಿಕೆ ಉಂಟಾಗುತ್ತದೆ. ಮರ ಮತ್ತು ಮಣ್ಣು ನಗರ ಪ್ರದೇಶಗಳಲ್ಲಿ ಇಂಗಾಲದ ಡೈ ಆಕ್ಸೈಡ್‍ನ್ನು ಹಿಡಿದಿಟ್ಟುಕೊಂಡು ಉಷ್ಣಾಂಶವನ್ನು ಕಾಯ್ದುಕೊಳ್ಳುತ್ತವೆ. ಅಧ್ಯಯನದ ಪ್ರಕಾರ 1 ಹೆಕ್ಟೇರ್ ಅರಣ್ಯ ಪ್ರದೇಶ ವರ್ಷಕ್ಕೆ ಸುಮಾರು 6 ಟನ್‍ನಷ್ಟು ಇಂಗಾಲವನ್ನು ಹಿಡಿದಿಡುವ ಸಾಮಥ್ರ್ಯವನ್ನು ಹೊಂದಿದೆ. ಅಂದರೆ, ಪ್ರತೀ ಪ್ರೌಢ ವೃಕ್ಷ ವರ್ಷಕ್ಕೆ 6 ಕಿ.ಗ್ರಾಂ.ನಷ್ಟು ಇಂಗಾಲವನ್ನು ಹಿಡಿದಿಟ್ಟುಕೊಳ್ಳುತ್ತದೆ. . ಸಾಮಾನ್ಯವಾಗಿ ಪ್ರತೀ ಮನುಷ್ಯ ವರ್ಷಕ್ಕೆ 192ರಿಂದ 328 ಕಿ.ಗ್ರಾಂ.ನಷ್ಟು ಇಂಗಾಲವನ್ನು ಉಸಿರಾಟದ ಮೂಲಕ ಬಿಡುಗಡೆ ಮಾಡುತ್ತಾನೆ. ಅಂದರೆ, ಪ್ರತೀ ವ್ಯಕ್ತಿಯು ಕೇವಲ ಉಸಿರಾಟದಿಂದ ಬಿಡುಗಡೆಯಾದ ಇಂಗಾಲವನ್ನು ಮಿತಗೊಳಿಸಲು ಸುಮಾರು 32ರಿಂದ 55 ಮರಗಳ ಅವಶ್ಯಕತೆಯಿದೆ.
ವೇಗವಾಗಿ ಸಾಗುತ್ತಿರುವ ನಗರೀಕರಣ ಮಾನವನಮೇಲೆ ಪರಿಣಾಮ ಬೀರುತ್ತಿರುವ ಅತೀಮುಖ್ಯ ಸಾಮಾಜಿಕ ವಿದ್ಯಮಾನಗಳಲ್ಲೊಂದು. ಮುಂದುವರಿದ ರಾಷ್ಟ್ರಗಳಲ್ಲಾದ ಅಯೋಜಿತ ನಗರಗಳ ನಿರ್ಮಾಣ, ಗಾಳಿ, ನೀರು ಮತ್ತು ಭೂ ಸಂನ್ಮೂಲಗಳ ಮೇಲಾಗುತ್ತಿರುವ ಪರಿಣಾಮವನ್ನು ಒತ್ತಿ ಹೇಳುತ್ತಿವೆ. ಭಾರತದ ಜನಸಂಖ್ಯೆ 63 ಕೋಟಿಯಿಂದ 121 ಕೋಟಿಗೆ ಏರಿಕೆಯಾಗಿದೆ. ನಗರ ಪ್ರದೇಶದ ಜನಸಂಖ್ಯೆಯಲ್ಲಿ ಭಾರತ ಚೀನಾ ನಂತರದ ಸ್ಥಾನದಲ್ಲಿದೆ ಹಾಗೂ ವಿವಿಧ ಮಾನವೀಯ ಅಗತ್ಯಗಳ ಪೂರೈಕೆಗೆ ಭೂ ಪ್ರದೇಶದ ಬೇಡಿಕೆ ವ್ಯಾಪಕವಾಗಿ ಹೆಚ್ಚಿದೆ. ನಗರಗಳ ಬೆಳವಣಿಗೆಯಿಂದ ಹಸಿರು ಪ್ರದೇಶಗಳು, ಜೌಗು ಭೂಮಿ ಹಾಗೂ ಇನ್ನಿತರ ಪ್ರಾಕೃತಿಕ ಪರಿಸರ ವ್ಯವಸ್ಥೆಗಳು ನಶಿಸುತ್ತಿವೆ. ನಗರೀಕರಣ ಜಾಗತಿಕ ವಿದ್ಯಮಾನವಾಗಿದ್ದು, ಅನಿರ್ದಿಷ್ಟ ಭೂ ಬಳಕೆಯು ಅಯೋಜಿತ ನಗರ ವಿಸ್ತರಣೆಗೆ ಕಾರಣವಾಗಿದೆ. ಅಯೋಜಿತ ನಗರೀಕರಣ ಮತ್ತು ನೈಸರ್ಗಿಕ ಸಂನ್ಮೂಲಗಳ ಅವಿವೇಕಯುತ ನಿರ್ವಹಣೆಯಿಂದ ನಗರ ಪ್ರದೇಶದಲ್ಲಿ ಅಸಮರ್ಪಕ ಕಟ್ಟಡಗಳು ನಿರ್ಮಿಸಲ್ಪಡುತ್ತಿವೆ ಹಾಗೂ ನೀರು, ಗಾಳಿ ಮತ್ತು ಜನರ ಜೀವನದ ಗುಣಮಟ್ಟ ಕೆಡುತ್ತಿದೆ. ಮರಗಳ ನೆರಳಿನಿಂದ ಸೂರ್ಯನ ಶಾಖದ ಹೀರುವಿಕೆ ತಗ್ಗುತ್ತದೆ ಹಾಗೂ ಎಲೆಗಳ ಭಾಷ್ಪೀಕರಣದಿಂದ ವಾತಾವರಣಕ್ಕೆ ನೀರಾವಿಯು ಬಿಡುಗಡೆಯಾಗುತ್ತದೆ ಮತ್ತು ಇದು ತಾಪಮಾನವನ್ನು ಕಾಪಾಡುತ್ತದೆ. ಹೆಚ್ಚಿದ ಇಂಧನ ಬಳಕೆ, ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ, ಅಧಿಕ ವಾಹಕತೆಯ ಕೃತಕ ವಸ್ತುಗಳ ಬಳಕೆ, ಅರಣ್ಯ ಮತ್ತು ಜಲಮೂಲಗಳ ನಾಶ ಹಾಗೂ ಇತರ ಮಾನವೀಯ ಕಾರಣಗಳಿಂದ ನಗರ ಪ್ರದೇಶಗಳ ಉಷ್ಣಾಂಶ ಹಳ್ಳಿಗಳಿಗಿಂತ ಏರಿಕೆಯಾಗಿದೆ. ಈ ವಿದ್ಯಮಾನವನ್ನು ನಗರದ ಉಷ್ಣದ್ವೀಪ ಎಂದು ಕರೆಯಲಾಗುವುದು. ಕೋಷ್ಟಕ 1ರಲ್ಲಿ ಪರಿಸರೀಯ ಸೇವೆಗಳ ಪರಿಮಾಣವನ್ನು ವಿವರಿಸಲಾಗಿದೆ.
ಕೋಷ್ಟಕ 1: ಮರದಿಂದಾಗುವ ಪ್ರಯೋಜನಗಳು
|
|
|
|
|
|
|
|
|
|
ಪ್ರಸ್ತುತ ಇರುವ ಮರಗಳನ್ನು ಎಣಿಕೆ ಮಾಡಲು ಸಾಂಪ್ರದಾಯಿಕ ವಿಧಾನಗಳಲ್ಲಿ ಅಧಿಕ ಸಮಯ ಮತ್ತು ಮಾನವ ಸಂಪನ್ಮೂಲಗಳ ಅಗತ್ಯವಿದೆ ಮತ್ತು ಅನಿರ್ದಿಷ್ಟ ದೋಷಗಳು ಒಳಗೊಳ್ಳುವ ಸಾಧ್ಯತೆಯಿದೆ. ದೂರ ಸಂವೇದಿ ಮಾಹಿತಿ ಮತ್ತು ಭೂ ಮಾಹಿತಿ ತಂತ್ರಜ್ಞಾನದಿಂದ ನಿಷ್ಪಕ್ಷಪಾತ ಹಾಗೂ ದೋಷರಹಿತ ಅಂಕಿ-ಅಂಶಗಳು ಲಭ್ಯವಿದೆ. ಪ್ರಾದೇಶಿಕ ಅಂಕಿ-ಅಂಶವು ವಿವಿಧ ಭೂ ವೈಶಿಷ್ಟ್ಯ ಹಾಗೂ ರಚನೆಯ ಮಾಹಿತಿಯನ್ನು ಹೊಂದಿರಿತ್ತದೆ. ಇದು ಬಹು-ದೃಶ್ಯ ಮಾಹಿತಿ (ಮಲ್ಟಿ ರೆಸೊಲ್ಯೂಷನ್) ದೂರ ಸಂವೇದಿ ಅಂಕಿ-ಅಂಶಗಳಲ್ಲಿ ಸರೆಹಿಡಿಯಲ್ಪಟ್ಟಿದೆ. ಪ್ಯಾನ್‍ಕ್ರೋಮ್ಯಾಟಿಕ್ ಮತ್ತು ಮಲ್ಟಿಸ್ಪೆಕ್ಟ್ರಲ್ ಸಂವೇದಕಗಳಿಂದ ದೊರೆತ ಪ್ರಾದೇಶಿಕ ಚಿತ್ರ ಮಾಹಿತಿಯನ್ನು, ಸಮ್ಮಿಳನ ತಂತ್ರಜ್ಞಾನದ ಮೂಲಕ ಸಂಸ್ಕರಿಸಬಹುದು. ಈ ತಂತ್ರಜ್ಞಾನವನ್ನು ಪ್ರತ್ಯೇಕ ಪಿಕ್ಸೆಲ್, ರಚನೆ (ಚಹರೆ) ಅಥವಾ ಮಾಹಿತಿಯ ಪೂರ್ಣ ನಿರ್ಧರಿಸುವಿಕೆಯಲ್ಲಿಯೂ ಬಳಸಬಹುದು.
ಪ್ರಸ್ತುತ ಅಧ್ಯಯನದಲ್ಲಿ ಬೃಹತ್ ಬೆಂಗಳೂರಿನ ಬಹು-ದೃಶ್ಯ ಮಾಹಿತಿ (ಮಲ್ಟಿ-ರೆಸೊಲ್ಯೂಷನ್) ಅಂಕಿ-ಅಂಶಗಳನ್ನು ವಿಶ್ಲೇಷಿಸಲಾಗಿದೆ. ಸಮ್ಮಿಳನ ತಂತ್ರಜ್ಞಾನವು ಕಡಿಮೆ ಭೂ ದೃಶ್ಯ ಮಾಹಿತಿಯ ಮಲ್ಟಿಸ್ಪೆಕ್ಟ್ರಲ್ ಚಿತ್ರವನ್ನು ಅಧಿಕ ಭೂ ದೃಶ್ಯ ಮಾಹಿತಿಯ ಪ್ಯಾನ್‍ಕ್ರೋಮ್ಯಾಟಿಕ್ ಹೊಂದಿಸಲು ಸಹಾಯಕವಾಗಿದೆ. ನಗರ ಪ್ರದೇಶದ ಮೇಲ್ಮೈ ವೈಶಿಷ್ಟ್ಯಗಳನ್ನು ಕೇವಲ ಅವುಗಳ ಚಹರೆಯಿಂದಷ್ಟೆ ಅಲ್ಲದೇ, ರಚನೆಗಳನ್ನಾಧರಿಸಿಯೂ ಗುರುತಿಸಬಹುದು. ಈ ನಿಟ್ಟಿನಲ್ಲಿ ಬಹು-ದೃಶ್ಯ ಮಾಹಿತಿ (ಮಲ್ಟಿ-ರೆಸೊಲ್ಯೂಷನ್) ಚಿತ್ರ ಸಮ್ಮಿಳನ ತಂತ್ರಜ್ಞಾನವು ಪರಿಣಾಮಕಾರಿಯಾಗಿದೆ. ಪ್ರಸ್ತುತ ಬೃಹತ್ ಬೆಂಗಳೂರಿನಲ್ಲಿರುವ ಹಸಿರು ಪ್ರದೇಶವನ್ನು ಗರುತಿಸಿ, ದಾಖಲಿಸುವುದು ಈ ಅಧ್ಯಯನದ ಪ್ರುಮುಖ ಉದ್ದೇಶವಾಗಿದೆ. ಇದು (1) ಪ್ರತೀ ವಾರ್ಡ್‍ನಲ್ಲಿರುವ ಮರಗಳನ್ನು ಪತ್ತೆಹಚ್ಚುವುದು (2) ಜನ ಸಾಂದ್ರತೆ, ಪ್ರತೀ ವ್ಯಕ್ತಿಗೆ ಲಭ್ಯವಿರುವ ಮರಗಳು, ಮುಂತಾದ ಕೋಷ್ಟಕಗಳನ್ನು ಗುಣಿಸುವುದನ್ನು ಒಳಗೊಂಡಿದೆ.
ಅಧ್ಯಯನ ಪ್ರದೇಶ
ಬೆಂಗಳೂರು/ಬೃಹತ್ ಬೆಂಗಳೂರು (77ಲಿ 37' 19.54'' ಪೂ. ಮತ್ತು 12ಲಿ 59' 09.76'' ಉ.) ಕರ್ನಾಟಕದ ಪ್ರಮುಖ ನಗರ, ರಾಜಧಾನಿ ಹಾಗೂ ವಾಣಿಜ್ಯ, ಕೈಗಾರಿಕಾ ಮತ್ತು ಜ್ಞಾನಾರ್ಜನೆಯ ಕೇಂದ್ರವಾಗಿದ್ದು ದಕ್ಷಿಣ ಕರ್ನಾಟಕದ ಪೂರ್ವ ಭಾಗದಲ್ಲಿದೆ. ನಗರವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 8 ವಲಯ ಮತ್ತು 198 ವಾರ್ಡ್‍ಗಳಾಗಿ ವಿಭಾಗಿಸಲಾಗಿದೆ (ಚಿತ್ರ 1). ಬೆಂಗಳೂರು ನಗರವು 12ಲಿ 49' 5'' ರಿಂದ 13ಲಿ 8' 32'' ರೇಖಾಂಶದ ವರೆಗೆ ಹಾಗೂ 77ಲಿ 27ಲಿ 29ರಿಂದ 77ಲಿ 47' 2'' ಅಕ್ಷಾಂಶದ ವರೆಗೆ ಹಬ್ಬಿದ್ದು 741 ಚ.ಕೀ.ಮೀ. ವಿಸ್ತಾರವಾದ ಭೂ ಪ್ರದೇಶವನ್ನು ಹೊಂದಿದೆ. ನಗರದ ವಿಸ್ತೀರ್ಣವು 69 ಚ.ಕೀ.ಮೀ.ನಿಂದ (1949) 741 ಚ.ಕೀ.ಮೀ.ಗೆ ಏರಿಕೆಯಾಗಿದ್ದು (ಚಿತ್ರ 2) 10 ಪಟ್ಟು ಹೆಚ್ಚಾಗಿದೆ. ಅಲ್ಲದೇ,ಬೆಂಗಳೂರು ಭಾರತದ 5ನೇ ಅತಿದೊಡ್ಡ ಮಹಾನಗರವಾಗಿದೆ. ಬೆಂಗಳೂರಿನ ಜನಸಂಖ್ಯೆ 2001ರಿಂದ (6.53 ಲಕ್ಷ) 2011ರ (9.58 ಲಕ್ಷ) ಅವಧಿಯಲ್ಲಿ ಶೇ. 48ರಷ್ಟು ಹೆಚ್ಚಾಗಿದೆ. ಕಳೆದ 2 ದಶಕದಲ್ಲಿ ವಾರ್ಡ್‍ವಾರು ಜನಸಂಖ್ಯೆಯ ಹಂಚಿಕೆಯನ್ನು ಚಿತ್ರ 4ರಲ್ಲಿ ತೋರಿಸಿದೆ. ನಗರದಲ್ಲಿ, 2001ರಿಂದ 2011ರ ವರೆಗೆ ಜನಸಾಂದ್ರತೆ (ಚಿತ್ರ 3) 10732 ರಿಂದ 13392ಕ್ಕೆ ಏರಿಕೆಯಾಗಿದೆ.
ಚಿತ್ರ 1: ಅಧ್ಯಯನ ಪ್ರದೇಶ- ಬೆಂಗಳೂರು/ಬೃಹತ್ ಬೆಂಗಳೂರು
ಚಿತ್ರ 2: ನಗರದ ವಿಸ್ತೀರ್ಣದಲ್ಲಾದ ಬದಲಾವಣೆ
ಚಿತ್ರ 3: ಬೆಂಗಳೂರಿನ ಜನಸಂಖ್ಯೆಯಲ್ಲಾದ ಬೆಳವಣಿಗೆ
ಚಿತ್ರ 4: ವಾರ್ಡ್‍ವಾರು ಜನಸಂಖ್ಯೆಯ ಹಂಚಿಕೆ
ನಗರದ ಭೂ ರಚನೆ ಏರು-ತಗ್ಗುಗಳಿಂದ ಕೂಡಿದ್ದು, ಸಮುದ್ರ ಮಟ್ಟದಿಂದರುವ ಔನ್ನತ್ಯ 740 ಮೀ.ನಿಂದ 960 ಮೀ.ವರೆಗೆ ವ್ಯತ್ಯಾಸವಾಗುತ್ತದೆ (ಚಿತ್ರ 5) ಹಾಗೂ ಇದು ಹಲವಾರು ಕಾಲುವೆ ಮತ್ತು ಕೆರೆಗಳ ರಚನೆಗೆ ಕಾರಣವಾಗಿದೆ. ಈ ಜಲಾಶಯಗಳು ಮತ್ತು ಮರಗಳೇ ಸ್ಥಳೀಯ ವಾತಾವರಣವನ್ನು ಹಿತವಾಗಿರಿಸಿದ್ದವು. ಬೆಂಗಳೂರು ವಾರ್ಷಿಕ ಸರಾಸರಿ 800 ಮಿ.ಮಿ.ನಷ್ಟು ಮಳೆಯನ್ನು ಪಡೆಯುತ್ತದೆ.
"ಬೆಂಗಳೂರು" ಎಂಬ ಹೆಸರು, "ಬೆಂಗ"-ಪ್ಟರೋಕಾರ್ಪಸ್ ಮಾರ್ಸುಪಿಯಮ್ ಎಂಬ ಎಲೆಯುದುರುವ ಕಾಡಿನ ಮರ ಪ್ರಭೇದದ ಸ್ಥಳೀಯ ಹೆಸರು ಹಾಗೂ "ಊರು" ಎಂದರೆ ಹಳ್ಳಿ ಅಥವಾ ಪಟ್ಟಣ ಇವೆರಡರ ಸಂಯೋಗದಿದಂದ ಬಂದಿರುವುದಾಗಿದೆ. ಸಂಪದ್ಭರಿತವಾದ ಕಾಡು, ಪ್ರಾಣಿ ಸಂಕುಲ ಹಾಗೂ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆದ ಲಾಲಬಾಗ್ ಮತ್ತು ಕಬ್ಬನ್ ಪಾರ್ಕ್ ಸಸ್ಯೋದ್ಯಾನಗಳನ್ನು ಹೊಂದಿದ್ದ ಬೆಂಗಳೂರು, "ಭಾರತದ ಉದ್ಯಾನ ನಗರ" ಎಂದೇ ಪ್ರಸಿದ್ಧವಾಗಿದೆ. ಪ್ರಸ್ತುತ ಬೆಂಗಳೂರು 5ನೇ ಅತಿದೊಡ್ಡ ಮಹಾನಗರ ಹಾಗೂ ಅತೀ ವೇಗವಾಗಿ ಬಳೆಯುತ್ತಿರುವ ಮಹಾನಗರಗಳಲ್ಲಿ 2ನೇಯದು. ಬೆಂಗಳೂರಿನ ಮರಗಳು ಒಣ ಎಲೆ ಉದುರುವ ಕಾಡಿನ (Terminalia-Anogeissus latifolia-Tectona) ಜಾತಿಗೆ ಸೇರಿವೆ. ನಗರವು ವರ್ಷಪೂರ್ತಿ ಹಿತವಾದ ಸೌಮ್ಯ ವಾತಾವರಣವನ್ನು ಅನುಭವಿಸುತ್ತದೆ.
17ನೇ ಶತಮಾನದ ಆರಂಭದಲ್ಲಿ, ದಟ್ಟವಾದ ಗಿಡಗಂಟಿಗಳಿಂದ ತುಂಬಿದ್ದ, ಅರಣ್ಯಾವೃತವಾಗಿದ್ದ ಬೆಂಗಳೂರನ್ನು, ಮೈಸೂರು ಪ್ರಾಂತದ ದೊರೆ ಹೈದರ ಅಲಿಯು ‘ನಗರ' ಪ್ರದೇಶವೆಂದು ಘೋಷಿಸಿದನು. ಇವನ ಆಡಳಿತದಲ್ಲೇ ಸುಮಾರು 100 ಹೆಕ್ಟೇರ್ ವಿಸ್ತೀರ್ಣದಲ್ಲಿ ಲಾಲಬಾಗ್ ಸಸ್ಯೋದ್ಯಾನವು ಸ್ಥಾಪಿಸಲ್ಪಟ್ಟತು. ಈ ಎಲ್ಲ ಕಾರಣಗಳಿಂದ ಬೆಂಗಳೂರು "ಉದ್ಯಾನ ನಗರಿ" ಎಂದು ನಾಮಾಂಕಿತವಾಯಿತು. ನಂತರ 1831ರಲ್ಲಿ, ಬ್ರಿಟಿಷ್ ಆಡಳಿತಾಧಿಕಾರಿಗಳು "ಕಬ್ಬನ್ ಪಾರ್ಕ್"ನ್ನು ಸಹನಿರ್ಮಿಸಿ ನಗರದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದರು.
ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸಾರ್ವಜನಿಕ ಜಾಗಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಉದ್ದೇಶದಿಂದ ‘ಉದ್ಯಾನವನ'ಗಳನ್ನು ನಿರ್ಮಿಸುವ ಸಂಸ್ಕೃತಿಯನ್ನು ಪರಿಚಯಿಸಲಾಯಿತು. ನಿಧಾನವಾಗಿ ಇದು, ಮೇಲ್ವರ್ಗದ ಹಾಗೂ ವಿದ್ಯಾವಂತ ಸಮುದಾಯದಲ್ಲಿ ಹಾಸುಹೊಕ್ಕಾಯಿತು. ಉದಾಹರಣೆಗೆ, ನಗರದ ಅತ್ಯಂತ ಹಳೆಯ ಪ್ರದೇಶಗಳಲ್ಲೊಂದಾದ ಮಲ್ಲೇಶ್ವರಮ್, ಉದ್ಯಾನವನಗಳನ್ನು ನಿರ್ಮಿಸುವ ಸಂಸ್ಕೃತಿಯನ್ನು ಬಹುಬೇಗ ಅಳವಡಿಸಿಕೊಂಡಿತು ಅಲ್ಲದೇ, ಭಾರತೀಯ ಸಂಪ್ರದಾಯಗಳೊಂದಿಗೆ ಹೊಂದಿಸಿಕೊಂಡಿತು. ಇಲ್ಲಿ ಜನರು, ಹಣ್ಣು ಮತ್ತು ತರಕಾರಿಗಳನ್ನು ತಮ್ಮ ಮನೆಯ ಉದ್ಯಾನಗಳಲ್ಲಿ ಬೆಳೆದರು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನೂ ಸಹ ಬೆಳೆಸಿದರು. ‘ಸಂಪಿಗೆ’ ರಸ್ತೆ ಮತ್ತು ‘ಮಾರ್ಗೋಸಾ’ ರಸ್ತೆಗಳು ಇದಕ್ಕೆ ಜೀವಂತ ನಿದರ್ಶನಗಳಾಗಿವೆ.
ಸುಮಾರು 1965ರ ಹೊತ್ತಿಗೆ ಸಣ್ಣ-ಕೈಗಾರಿಕೆಗಳು, ಉದ್ಯಮಗಳು ಬೆಂಗಳೂರಿಗೆ ಲಗ್ಗೆಯಿಟ್ಟವು. ಸುಮಾರು 3 ದಶಕಗಳ ಕೈಗಾರಿಕೀಕರಣಕ್ಕೆ ಸಾಕ್ಷಿಯಾದ ಉದ್ಯಾನ ನಗರಿಯನ್ನು 21ನೇ ಶತಮಾನದ ಆರಂಭದಲ್ಲಿ (1998ರಿಂದ) ‘ಮಾಹಿತಿ ತಂತ್ರಜ್ಞಾನ’ ವಲಯ ಸಂಪೂರ್ಣವಾಗಿ ಮುತ್ತಿಕೊಂಡಿತು. ಈಗ ಬೆಂಗಳೂರು ಸಿಲಿಕಾನ್ ನಗರಿ, ಮಾಹಿತಿ ತಂತ್ರಜ್ಞಾನದ ತೊಟ್ಟಿಲು. ಲೆಕ್ಕಕ್ಕೆ ನಿಲುಕದಷ್ಟು ವ್ಯಾಪಾರಿಕ, ಔದ್ಯೋಗಿಕ, ಶೈಕ್ಷಣಿಕ ಸಂಸ್ಥೆಗಳಿಗೆ ಹಾಗೂ ಬಟ್ಟೆ ತಯಾರಿಕೆ, ವಾಯುಯಾನ, ಬಾಹ್ಯಾಕಾಶ, ಜೈವಿಕ ಮತ್ತು ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳಿಗೆ ಈ ನಗರ ಆಶ್ರಯ ನೀಡಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಮೂಲಭೂತ ಅಗತ್ಯಗಳಾದ ನೀರು, ಇಂಧನ, ಸಾರ್ವಜನಿಕ ಸಂಚಾರ, ಭೂ ಅವಶ್ಯಕತೆಗಳ ಮೇಲೆ ತ್ವರಿತ ಮತ್ತು ತೀಕ್ಷ್ಣ ಒತ್ತಡವನ್ನುಂಟುಮಾಡಿದವು. ವಿಶಾಲವಾದ ಉದ್ಯಾನಗಳು ಮತ್ತು ಬ್ರಿಟಿಷರ ಬಂಗಲೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಬಹುಮಹಡಿ ಕಟ್ಟಡಗಳಾದವು. ಬ್ರಹತ್ ಉದ್ಯಾನವನಗಳು ಮನೆಯ ಮುಂದಿನ ಅಥವಾ ಬಾಲ್ಕನಿಯ ಹುಲ್ಲುಹಾಸುಗಳಾಗಿ ರೂಪಾಂತರಗೊಂಡವು. ಬೆಂಗಳೂರು, 133 ಕುಟುಂಬದ, 542 ಜಾತಿಯ, 979 ಪ್ರಭೇದದ ನೈಸರ್ಗಿಕ ವನ್ಯಸಂಪತ್ತನ್ನು ಹೊಂದಿತ್ತು. ಅಯೋಜಿತ ಹಾಗೂ ಅನಿಯಂತ್ರಿತ ನಗರೀಕರಣದಿಂದ ಬೆಂಗಳೂರಿನ ವಿಸ್ತೀರ್ಣ ಸ್ವಾತಂತ್ರ್ಯಾನಂತರ 69 ಚ.ಕೀ.ಮೀ.ಯಿಂದ 741 ಚ.ಕೀ.ಮೀ.ಗೆ ಏರಿಕೆಯಾಯಿತು. ಪ್ರಸ್ತುತ ಬೆಂಗಳೂರು ಬಹುತೇಕ ಉದ್ಯಾನವನ ಮತ್ತು ಜಲಾಶಯಗಳನ್ನು ಕಳೆದುಕೊಳ್ಳುತ್ತಿದ್ದು, ಕೇವಲ ಭೌತಿಕ, ಕೃತಕ,ಮಾನವ ನಿರ್ಮಿತ ಕಟ್ಟಡಗಳ/ವಸ್ತುಗಳ ಆಗರವಾಗುತ್ತದೆ.
ಬೆಂಗಳೂರಿನಲ್ಲಿ ಈ ಕೆಳಗಿನ ವೃಕ್ಷಸಂಕುಲಗಳನ್ನು ಕಾಣಬಹುದಾಗಿದೆ.
ಸ್ಥಳೀಯ ಪ್ರಭೇದ - ಹಲಸು, ಮಾವು, ಬೇವು, ಹತ್ತಿ, ಬೂರುಗ, ಆಲ, ಅಶ್ವಥ್ಥ, ಸೌಸಗೆ, ಮಂದಾರ, ಇಪ್ಪೆ, ಮಲಬಾರ್ ಬೇವು, ಕದಂಬ, ಹೊಂಗೆ, ಹೊನ್ನೆ, ನೇರಳೆ, ಅಶೋಕ, ಮಹಾಗೊನಿ, ಆರ್ಜುನ, ತಾರೆ ಮುಂತಾದವು.
ಅನ್ಯದೇಶೀಯ ಪ್ರಭೇದ - ಗುಲ್ ಮೊಹರ್, ಶಿರೀಶ (ರೇನ್ ಟ್ರೀ), ಶಿವಲಿಂಗ ಮರ, ಕಾಪರ್ ಪೊಡ್, ಬೆಂಕಿ ಹೂ ಮರ ಇತ್ಯಾದಿ.
ಇತ್ತೀಚಿನ ದಿನಗಳಲ್ಲಿ, ನಗರದಲ್ಲಿ ಮಿತಿಮೀರಿದ ವಾಹನದಟ್ಟಣೆಯಿಂದ ಗಂಧಕದ ಡೈ ಆಕ್ಸೈಡ್, ಸಾರಜನಕದ ಆಕ್ಸೈಡ್‍ಗಳು, ಮೀಥೇನ್, ಇಂಗಾಲದ ಡೈ ಆಕ್ಸೈಡ್‍ಗಳ ಹಾಗೂ ತೇಲಾಡುವ ಕಣಗಳು ಅಧಿಕಗೊಂಡಿವೆ. ವಾಯು ಮಾಲಿನ್ಯ ಮತ್ತು ಬರಿದಾದ ಕಾಡುಗಳು ನೇರವಾಗಿ ನಗರದ ಉಷ್ಣದ್ವೀಪ ರಚನೆಯನ್ನು ಪ್ರಚೋದಿಸುತ್ತವೆ ಹಾಗೂ ಇದು ಸೂಕ್ಷ್ಮ ವಾತಾವರಣದ ಅಸಮತೋಲಕ್ಕೆ ಕಾರಣವಾಗಿದೆ.
ಕಳೆದ ಶತಮಾನದಲ್ಲಿ ಬೆಂಗಳೂರು ಜೀವಿ ವಿಕಸನದ ಕೊಂಡಿಯಾದ ಜಲಮೂಲ/ಕೆರೆಗಳಿಂದ ಸಮೃದ್ಧವಾಗಿತ್ತು. 1962ರಲ್ಲಿ ಸುಮಾರು 265ಕ್ಕೂ ಹೆಚ್ಚು ಕೆರೆ, ಕೊಳ, ಜಲಾಶಯಗಳನ್ನು ಹೊಂದಿದ್ದ ಗಾರ್ಡನ್ ಸಿಟಿ ಇಂದು ಬಡವಾಗಿದೆ. ಒಂದು ಕಾಲದಲ್ಲಿ ನೀರಿನ ವಿಷಯದಲ್ಲಿ ಸ್ವಾವಲಂಬಿಯಾಗಿದ್ದ ಬೆಂಗಳೂರಿಗರು ಇವತ್ತು ಹನಿ ನೀರಿಗಾಗಿ ಕೈಚಾಚುತ್ತಿದ್ದಾರೆ. ಸದ್ಯ, ನಗರದಲ್ಲಿ 98 ಕೆರೆಗಳಿದ್ದು, ಬಹುಪಾಲು ಕೆರೆಗಳು ಕಲುಷಿತವಾಗಿವೆ. ಕಾಲಕ್ರಮೇಣ ನಗರದ ವ್ಯಾಪ್ತಿ ಹೆಚ್ಚಿದಂತೆಲ್ಲ, ಕೇಂದ್ರಭಾಗ ಹೆಚ್ಚು ಹೆಚ್ಚು ಜನ ನಿಬಿಡವಾಗುತ್ತಿದೆ. ರಸ್ತೆಗಳ ಜಾಲ ಹೆಚ್ಚಿತ್ತಿದೆ ಮತ್ತು ಅಗಲೀಕರಣಕ್ಕಾಗಿ ರಸ್ತೆ ಬದಿಯ ಮರಗಳನ್ನು ಕಡಿಯಲಾಗುತ್ತಿದೆ. ಹಲವಾರು ಕೆರೆ, ಕೊಳಗಳನ್ನು ಆಕ್ರಮಿಸಿಕೊಂಡು ವಸತಿ ಸಮುಚ್ಚಯ, ಬಹು ಮಹಡಿ ಕಟ್ಟಡ, ಆಟದ ಮೈದಾನ, ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇನ್ನುಳಿದ ಬಹುತೇಕ ಕೆರೆಗಳು ಕಸದ ತೊಟ್ಟಿಗಳಾಗಿವೆ. ಇದು ಹೀಗೆಯೇ ಮುಂದುವರಿದಲ್ಲಿ ಬೆಂಗಳೂರಿನ ಕೆರೆಗಳು ಇತಿಹಾಸದ ಪುಟಗಳಲ್ಲಿ ಮಾತ್ರ ಕಾಣಸಿಗುವುದು ನಿಶ್ಚಿತ. ಅಧ್ಯಯನದ ಪ್ರಕಾರ ಕಳೆದ 4 ದಶಕಗಳಲ್ಲಿ ಬೆಂಗಳೂರು ಶೇ. 584ರಷ್ಟು ಕಟ್ಟಡಗಳ ಹೆಚ್ಚುವಿಕೆಗೆ, ಶೇ. 74ರಷ್ಟು ಜಲಮೂಲಗಳ ಮತ್ತು ಶೇ. 66ರಷ್ಟು ಮರಗಳ ನಶಿಸುವಿಕೆಗೆ ಸಾಕ್ಷಿಯಾಗಿದೆ.
ಬೆಂಗಳೂರು ಪರ್ವತ ಶ್ರೇಣಿಗಳಲ್ಲಿದ್ದು ಪ್ರಮುಖವಾಗಿ 3 ಜಲ ಕಣಿವೆಗಳನ್ನು ಹೊಂದಿದೆ: ವೃಷಭಾವತಿ, ಕೋರಮಂಗಲ-ಚಲ್ಲಘಟ್ಟ ಮತ್ತು ಹೆಬ್ಬಾಳ-ನಾಗವಾರ (ಚಿತ್ರ 5). ಅರ್ಕಾವತಿ, ಪಿನಾಕಿನಿ ಮತ್ತು ಶಿಂಷಾ ತೊರೆಗಳ ಮೂಲಕ ನೀರು ಹರಿದು ಕಾವೇರಿ ನದಿಯನ್ನು ಸೇರುತ್ತದೆ. ನಗರದ ಮಧ್ಯ, ಪೂರ್ವ ಮತ್ತು ಉತ್ತರ ಭಾಗಗಳು ಏರು-ತಗ್ಗುಗಳಿಂದ ಕೂಡಿದ್ದು, ಎತ್ತರದ ಪ್ರದೇಶಗಳು ಪೊದೆಗಳಿಂದಾವೃತವಾಗಿವೆ. ತಗ್ಗು ಪ್ರದೇಶಗಳಲ್ಲಿ ನೀರಾವರಿಯ ಅನುಕೂಲಕ್ಕೆ ಕಾಲುವೆಗಳಿಗೆ ಅಡ್ಡವಾಗಿ ಕಟ್ಟುಗಳನ್ನು ನಿರ್ಮಿಸಿ ವಿವಿಧ ಅಕಾರ ಹಾಗೂ ಸಾಮಥ್ರ್ಯದ ನೀರಿನ ಸಂಗ್ರಹಾಗಾರಗಳನ್ನು ರಚಿಸಲಾಗಿದೆ. ನಗರದ ದಕ್ಷಿಣ ಭಾಗವು ಗುಡ್ಡಗಾಡು ಪ್ರದೇಶವಾಗಿದ್ದು, ಪೊದೆಗಳು ಮತ್ತು ಅರಣ್ಯಗಳಿಂದ ಸುತ್ತುವರಿದಿದೆ. ಭೌಗೋಳಿಕವಾಗಿ ಈ ಪ್ರದೇಶವು ಹೆಚ್ಚಾಗಿ ಬೆಣಚು ಕಲ್ಲು ಹಾಗೂ ಗ್ನೇಯ್ಸಸ್ ಎಂಬ ವರ್ಗದ ಕಲ್ಲುಗಳಿಂದ ಕೂಡಿದ್ದು, ಡೈಕ್ಸ್, ಡೊಲೆರಿಟಸ್ ಮುಂತಾದ ಕಲ್ಲುಗಳನ್ನೂ ಸಹ ಕಾಣಬಹುದು.
ಭೂ ಬಳಕೆಯ ಬದಲಾವಣೆಗಳು
ಕೋಷ್ಟಕ 2, ಕಾಲಕ್ರಮೇಣ ಭೂ ಬಳಕೆಯಲ್ಲಾದ ಬದಲಾವಣೆಗಳನ್ನು ವಿವರಿಸುತ್ತದೆ (ಚಿತ್ರ 6). 1973ರಲ್ಲಿ ಶೇ. 7.97ರಷ್ಟಿದ್ದ ಕಟ್ಟಡ ಪ್ರದೇಶವು, 2012ರಲ್ಲಿ ಶೇ. 58.33ಕ್ಕೆ ಏರಿಕೆಯಾಗಿದೆ.1990ರ ದಶಕದಲ್ಲಿ ಪೀಣ್ಯ ಹಾಗೂ ರಾಜಾಜಿನಗರಗಳಲ್ಲಿ ತ್ವರಿತ ಕೈಗಾರಿಕೀಕರಣದಿಂದಾದ ನಗರೀಕರಣವನ್ನು ಚಿತ್ರ 6ರಲ್ಲಿ ಗಮನಿಸಬಹುದು.
ಚಿತ್ರ 5: ಭೌಗೋಳಿಕ ವಿನ್ಯಾಸ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾದ ಕ್ಷಿಪ್ರ ಬದಲಾವಣೆಗಳಿಂದ 2000ದ ನಂತರ ವೈಟ್‍ಫೀಲ್ಡ್, ಇಲೆಕ್ಟ್ರಾನಿಕ್ ಸಿಟಿ, ದೊಮ್ಮಲೂರು, ಹೆಬ್ಬಾಳಗಳಲ್ಲಿ ಅನಿಯಂತ್ರಿತ ನಗರ ಸಂಬಂಧೀ ಬೆಳವಣಿಗೆಗಳಾದವು. ಕೆಲವು ಖಾಸಗಿ ಗುತ್ತಿಗೆದಾರರ ದುರಾಸೆ ಮತ್ತು ವಿಶೇಷ ಆರ್ಥಿಕ ವಲಯಗಳ ರಚನೆ, ಈ ಅವೈಜ್ಞಾನಿಕ ಬಳವಣಿಗೆಗೆ ಇಂಬು ನೀಡಿದವು. ಒಂದು ಕಾಲದಲ್ಲಿ ಶೇ. 68.27ರಷ್ಟು (1973) ಹಸಿರು ಹೊದಿಕೆಯಿಂದ ಉದ್ಯಾನ ನಗರಿ ಎಂದು ಬೀಗುತ್ತಿದ್ದ ಬೆಂಗಳೂರಿನಲ್ಲಿ ಈಗ, ಶೇ. 25ಕ್ಕಿಂತ ಕಡಿಮೆ ಪ್ರದೇಶದಲ್ಲಿ ಅರಣ್ಯವಿದೆ. ಬೆಂಗಳೂರಿನ ಕೆರೆಗಳ ವ್ಯಥೆಯೂ ಇದಕ್ಕೆ ಹೊರತಾಗಿಲ್ಲ. 1973ರಲ್ಲಿ ಶೇ. 3.4ರಷ್ಟು ಜಲಾವೃತ ಪ್ರದೇಶವನ್ನು ಹೊಂದಿದ್ದ ಬೆಂಗಳೂರಿನಲ್ಲಿ ಇಂದು ಶೇ. 1 ಕ್ಕಿಂತ ಕಡಿಮೆ ಜಲಭಾಗವಿದೆ. ಚಿತ್ರ 7ರಲ್ಲಿ ಅಳಿದುಹೋದ ಕೆರೆಗಳು, ರಾಜಾ ಕಾಲುವೆಗಳು ಮತ್ತು ಪ್ರಸ್ತುತ ಉಳಿವಿಗಾಗಿ ಹೋರಡುತ್ತಿರುವ ಜಲಾಶಯಗಳನ್ನು ತೋರಿಸಲಾಗಿದೆ. ಇತರೆ ಭೂ ಬಳಕೆ ಶೇ. 20.35ರಿಂದ (1973) ಶೇ. 17.49ಕ್ಕೆ (2012) ಇಳಿಕೆಯಾಗಿದೆ.
ಕೋಷ್ಟಕ 2: ಭೂ ಬಳಕೆಯ ಬದಲಾವಣೆಗಳು
Class | Urban | Vegetation | Water | Others | ||||
Year | Ha | % | Ha | % | Ha | % | Ha | % |
1973 | 5448 | 7.97 | 46639 | 68.27 | 2324 | 3.4 | 13903 | 20.35 |
1992 | 18650 | 27.3 | 31579 | 46.22 | 1790 | 2.6 | 16303 | 23.86 |
1999 | 24163 | 35.37 | 31272 | 45.77 | 1542 | 2.26 | 11346 | 16.61 |
2006 | 29535 | 43.23 | 19696 | 28.83 | 1073 | 1.57 | 18017 | 26.37 |
2012 | 41570 | 58.33 | 16569 | 23.25 | 665 | 0.93 | 12468 | 17.49 |
ಚಿತ್ರ 6: ಭೂ ಬಳಕೆಯ ಬದಲಾವಣೆಗಳು
ಚಿತ್ರ 7: ಬೆಂಗಳೂರಿನ ಕೆರೆಗಳು
ಉದ್ದೇಶಗಳು
ಈ ಅಧ್ಯಯನದ ಉದ್ದೇಶ ಬೆಂಗಳೂರಿನಲ್ಲಿರುವ ಮರಗಳನ್ನು ದೂರ ಸಂವೇದಿ ಮಾಹಿತಿಯ ಆಧಾರದ ಮೇಲೆ ಚಿತ್ರಿಸುವುದು ಮತ್ತು ವಾರ್ಡ್‍ವಾರು ಮರ ಸಾಂದ್ರತೆ ಹಾಗೂ ಪ್ರತಿ ವ್ಯಕ್ತಿಗೆ ಲಭ್ಯವಿರುವ ಮರಗಳನ್ನು ಕಂಡುಹಿಡಿಯುವುದು.
ಫಲಿತಾಂಶಗಳು ಮತ್ತು ಚರ್ಚೆ
ಚಿತ್ರ ಸಮ್ಮಿಳನ ತಂತ್ರಜ್ಞಾನ: ವಿವಿಧ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಮಲ್ಟಿಸ್ಪೆಕ್ಟ್ರಲ್ ಮತ್ತು ಕಾರ್ಟೊಸ್ಯಾಟ್ ಚಿತ್ರ ಮಾಹಿತಿಯನ್ನು ಸಮ್ಮಿಳನಗೊಳಿಸಲಾಯಿತು ಮತ್ತು ಇದರ ನಿಖರತೆ ಹಾಗೂ ಕ್ಷಮತೆಯನ್ನೂ ಸಹ ಪರಿಶೀಲಿಸಲಾಯಿತು. ಈ ಎಲ್ಲಾ ಚಿತ್ರ ಸಮ್ಮಿಳನ ತಂತ್ರಜ್ಞಾನಗಳು ಅತ್ಯಂತ ಕಷ್ಟಕರವಾದುವು ಹಾಗೂ ಸುಮಾರು 36 ಘಂಟೆಗಳಷ್ಟು ಕಾಲ ತೆಗೆದುಕೊಳ್ಳುತ್ತವೆ. ಚಿತ್ರ 8ರಲ್ಲಿ ಚಿತ್ರ ಸಮ್ಮಿಳನ ತಂತ್ರಜ್ಞಾನದ ಫಲಿತಾಂಶಗಳನ್ನು ತೋರಿಸಲಾಗಿದೆ. ಇವುಗಳಲ್ಲಿ ಎಚ್‍ಸಿಎಸ್ ಮಾದರಿಯು ಉತ್ತಮ ಫಲಿತಾಂಶ ನೀಡಿದೆ.
ನಗರದ ಭೂ ಬಳಕೆಯನ್ನು, ಎಚ್‍ಪಿಎಫ್ ಚಿತ್ರ ಸಮ್ಮಿಳನ ತಂತ್ರಜ್ಞಾನದಿಂದ ದೊರೆತ ಭೂ ಚಿತ್ರವನ್ನು ಉಪಯೋಗಿಸಿಕೊಂಡು ವಿಶ್ಲೇಷಿಸಲಾಯಿತು. ಇದಕ್ಕೆ ಗಾಸಿಯನ್ ಮ್ಯಾಕ್ಸಿಮಮ್ ಲೈಕ್ಲಿಹುಡ್ ಮಾದರಿಯನ್ನು ಬಳಸಿಕೊಳ್ಳಲಾಗಿದೆ. ಸಂಪೂರ್ಣ ವಿಶ್ಲೇಷಣೆಯನ್ನು 2 ವಿಭಾಗಗಳಾಗಿ ವಿಂಗಡಿಸಲಾಗಿದೆ(ಚಿತ್ರ 9): ಸಸ್ಯವರ್ಗ ಮತ್ತು ಸಸ್ಯವಿಲ್ಲದ ಭೂಬಳಕೆ. ಒಟ್ಟಾರೆ ನಿಖರತೆ ಶೇ. 91.5 ಮತ್ತು ವಿಶ್ಲೇಷಣೆಯ ಶೇ. 86ರಷ್ಟು ಭಾಗ ಸ್ಥಳೀಯ ಮಾಹಿತಿಯೊಂದಿಗೆ ಹೊಂದಿಕೆಯಾಗಿದೆ.
ಚಿತ್ರ 8: ಚಿತ್ರ ಸಮ್ಮಿಳನ ತಂತ್ರಜ್ಞಾನದಿಂದ ದೊರೆತ ಬೆಂಗಳೂರಿನ ಭೂ ದೃಶ್ಯ
ಚಿತ್ರ 9: ಬೆಂಗಳೂರಿನಲ್ಲಿ ಹಸಿರು ಹೊದಿಕೆಯ ಹಂಚಿಕೆ
ಚಿತ್ರ 10: ವಾರ್ಡ್‍ವಾರು ಹಸಿರು ಹೊದಿಕೆಯ ಹಂಚಿಕೆ (ಹೆಕ್ಟೇರ್‍ಗಳಲ್ಲಿ)
ವಾರ್ಡ್‍ಗಳಲ್ಲಿ ಮರಗಳ ಹಂಚಿಕೆ
ವಾರ್ಡ್ ನಕ್ಷೆಯನ್ನು ಚಿತ್ರ 9ರ ಮೇಲೆಜೋಡಿಸಿ, ಪ್ರತೀ ವಾರ್ಡ್‍ನಲ್ಲಿರುವ ಹಸಿರು ಪ್ರದೇಶವನ್ನು ಗುರುತಿಸಲಾಯಿತು. ಚಿತ್ರ 10ರಲ್ಲಿ ವಾರ್ಡ್‍ವಾರು ಮರಗಳ ಹಂಚಿಕೆಯನ್ನು ತೋರಿಸಲಾಗಿದೆ. ಹೆಚ್ಚಿನ ಅಂಕಿ-ಅಂಶಗಳನ್ನು ಅನುಬಂಧ 2ರಲ್ಲಿ ಕೊಡಲಾಗಿದೆ. ಚಿಕ್ಕಪೇಟೆ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ ವಾರ್ಡಗಳು ಅತಿ ಕಡಿಮೆ ಮರಗಳಿಂದ ಕೂಡಿದ ಭೂ ಬಳಕೆಯನ್ನು ಹೊಂದಿದ್ದು (1 ಹೆಕ್ಟೇರ್‍ಗಿಂತ ಕಡಿಮೆ), ವರ್ತೂರು, ಬೆಳ್ಳಂದೂರು, ಅಗರಂ ವಾರ್ಡಗಳು ಹೆಚ್ಚಿನ ಮರಗಳಿಂದ ಕೂಡಿದ ಭೂ ಬಳಕೆಯನ್ನು ಹೊಂದಿವೆ (300 ಹೆಕ್ಟೇರ್‍ಗಿಂತ ಅಧಿಕ).
ಬೆಂಗಳೂರನ್ನು ಕೇಂದ್ರೀಯ ವಾಣಿಜ್ಯ ಪ್ರದೇಶದಿಂದ 17 ಏಕ-ಕೇಂದ್ರೀಯ ವೃತ್ತಗಳಲ್ಲಿ ವಿಭಾಗಿಸಲಾಯಿತು. ಪ್ರತೀ ವೃತ್ತವೂ, ಅದರ ಹಿಂದಿನ ವೃತ್ತಕ್ಕಿಂತ 1 ಕೀ.ಮೀ. ಹಚ್ಚಿನ ತ್ರಿಜ್ಯವನ್ನು ಹೊಂದಿದ್ದು, ಇದು ಹಸಿರು ಹೊದಿಕೆಯ ಬದಾಲಾವಣೆಯನ್ನು ವಿಶ್ಲೇಷಿಸಲು ಸಹಾಯಕವಾಗಿದೆ. ಚಿತ್ರ 11, 1973ರಿಂದ 2013ರ ವರೆಗೆ ಪ್ರತೀ ವೃತ್ತದಲ್ಲಿನ ಮರಗಳ ಸಾಂದ್ರತೆಯನ್ನು ವಿವರಿಸುತ್ತದೆ. ಚಿತ್ರ 12ರಲ್ಲಿ ಕಳೆದ 4 ದಶಕಗಳಲ್ಲಿ ಕಣ್ಮರೆಯಾದ ಹಸಿರು ಪ್ರದೇಶವನ್ನು ತೋರಿಸಲಾಗಿದೆ. ಲಾಲ್‍ಬಾಗ್ ಮತ್ತು ಕಬ್ಬನ್ ಪಾರ್ಕ್‍ಗಳ ಇರುವಿಕೆಯಿಂದ ಕೇಂದ್ರೀಯ ಪ್ರದೇಶವು ಅಧಿಕ ಮರಗಳ ಸಾಂದ್ರತೆಯನ್ನು ತೋರಿಸುತ್ತದೆ. 2013ರ ವಾರ್ಡ್‍ವಾರು ಮರಗಳ ಸಾಂದ್ರತೆಯನ್ನು ಚಿತ್ರ 12ರಲ್ಲಿ ಕೊಡಲಾಗಿದೆ. ಅರಮನೆ ನಗರ, ಹುಡಿ ಮತ್ತು ವಸಂತಪುರ ವಾರ್ಡಗಳಲ್ಲಿ ಮರಗಳ ಸಾಂದ್ರತೆಯ ಪ್ರಮಾಣ 0.4ಕ್ಕಿಂತ ಹೆಚ್ಚಾಗಿದ್ದರೆ, ಚಿಕ್ಕಪೇಟೆ, ಲಗ್ಗೆರೆ, ಹೆಗ್ಗನಹಳ್ಳಿ, ಹೊಂಗಸಂದ್ರ ಹಾಗೂ ಪಾದರಾಯನಪುರ ವಾರ್ಡಗಳು 0.015ಕ್ಕಿಂತ ಕಡಿಮೆ ಮರ ಸಾಂದ್ರತೆಯನ್ನು ಹೊಂದಿವೆ. ಬೆಂಗಳೂರಿನ ಸರಾಸರಿ ಮರ ಸಾಂದ್ರತೆಯ ಪ್ರಮಾಣ 0.14.
ಅಂದರೆ, ಬೃಹತ್ ಬೆಂಗಳೂರಿನ ವಿಸ್ತೀರ್ಣ: 741 ಚ.ಕೀ.ಮೀ.
ಒಟ್ಟೂ ಹಸಿರು ಹೊದಿಕೆಯ ವಿಸ್ತೀರ್ಣ: 100.2 ಚ.ಕೀ.ಮೀ.
ಮರ ಸಾಂದ್ರತೆಯ ಪ್ರಮಾಣ= 100.2/741 = 0.14 (ಪ್ರತಿ ಚ.ಕೀ.ಮೀ.ಗೆ)
ಚಿತ್ರ 11: ಹಸಿರು ಹೊದಿಕೆಯ ಸಾಂದ್ರತೆಯ ಬದಾಲಾವಣೆ
ಭೂ ಸ್ಥಾನೀಕರಣ ವ್ಯವಸ್ಥೆಯ (ಜಿಪಿಎಸ್) ನೆರವಿನಿಂದ ನಿರ್ದಿಷ್ಟ ವಾರ್ಡ್‍ಗಳಲ್ಲಿ ಮರದ ಸ್ಥಾನವನ್ನು ಮತ್ತು ಮೇಲ್ಛಾವಣಿಯ ಹರವನ್ನು ಅಳೆಯಲಾಯಿತು. ಗೂಗಲ್ ಭೂ ಚಿತ್ರದ ಸಹಾಯದಿಂದಲೂ ಸಹ ಮರದ ಮೇಲ್ಛಾವಣಿಯ ಹರವನ್ನು ಅಳೆಯಲಾಯಿತು. ಈ ಮಾಹಿತಿಯ ಆಧಾರದ ಮೇಲೆ, ದೂರ ಸಂವೇದಿ ಉಪಗ್ರಹ ಚಿತ್ರಗಳನ್ನು ಬಳಸಿ ಮರಗಳ ಸಂಖ್ಯೆಯನ್ನು ಅಂದಾಜಿಸಲಾಗಿದೆ. ಚಿತ್ರ 15ರಲ್ಲಿ ಮೇಲ್ಛಾವಣಿಯ ಹರವಿನಂತೆ ವಾರ್ಡ್‍ವಾರು ಮರಗಳ ಹಂಚಿಕೆಯನ್ನು ತೋರಿಸಲಾಗಿದೆ: (1) <500 ಮರಗಳು ಮತ್ತು (2) >500 ಮರಗಳು.
ಚಿತ್ರ 13: ವಾರ್ಡ್‍ವಾರು ಮರಗಳ ಸಾಂದ್ರತೆ
ಚಿತ್ರ 14: ವಾರ್ಡ್‍ಗಳಲ್ಲಿ ಮರಗಳ ಹಂಚಿಕೆ
ಚಿತ್ರ 15: ವಾರ್ಡ್‍ಗಳಲ್ಲಿ ಮರದ ಮೇಲ್ಛಾವಣಿಯ ಹರವಿನ ಹಂಚಿಕೆ
ವಾರ್ಡ್‍ವಾರು ಮರಗಳ ಸಂಖ್ಯೆಯನ್ನು ಚಿತ್ರ 14ರಲ್ಲಿ ನೀಡಲಾಗಿದೆ. ಇದು ವಿವಿಧ ವಾರ್ಡ್‍ಗಳಲ್ಲಿ ಮರಗಳ ಹಂಚಿಕೆಯನ್ನು ಹೋಲಿಸುತ್ತದೆ. ವರ್ತೂರು, ಬೆಳ್ಳಂದೂರು, ಅಗರಂ, ಅರಮನೆ ನಗರ ವಾರ್ಡಗಳಲ್ಲಿ 40,000ಕ್ಕೂ ಹೆಚ್ಚಿನ ಮರಗಳಿವೆ ಹಾಗೂ ಚಿಕ್ಕಪೇಟೆ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ, ಕುಶಾಲ ನಗರ ವಾರ್ಡಗಳಲ್ಲಿ 100ಕ್ಕಿಂತ ಕಡಿಮೆ ಮರಗಳಿರುವುದು ತಿಳಿದುಬಂದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಕೇವಲ 14,78,412 ಮರಗಳಿದ್ದು, ಕಾಲಕ್ರಮೇಣ ಈ ಸಂಖ್ಯೆ ಕಡಮೆಯಾಗುತ್ತಿದೆ. ಅನುಬಂಧ 3ರಲ್ಲಿ ನಗರದಲ್ಲಿರುವ ಕೆಲವು ಪ್ರಮುಖ ಮರಗಳ ವಿವರಗಳನ್ನು ನೀಡಲಾಗಿದೆ. ಅನುಬಂಧ 1ರಲ್ಲಿ ವಿವಿಧ ಅಧ್ಯಯನಗಳಲ್ಲಿ ಉಲ್ಲೇಖಿಸಿದ ಮರಗಳ ವಿವರಗಳನ್ನು ಸಂಗ್ರಹಿಸಲಾಗಿದೆ.
ದೂರ ಸಂವೇದಿ ಮಾಹಿತಿಯ ಆಧಾರದ ಮೇಲೆ, ತಂತ್ರಾಂಶಗಳನ್ನು ಬಳಸಿ ದೊರೆತ ಫಲಿತಾಂಶಗಳನ್ನು ಕೆಲವು ನಿರ್ದಿಷ್ಟ ವಾರ್ಡಗಳಲ್ಲಿ ಸ್ಥಳೀಯ ಮಾಹಿತಿಗನುಸಾರ ಪರಿಶೀಲಿಸಲಾಗಿದೆ. ಚಿತ್ರ 16(ಅ)ರಲ್ಲಿ ಮರಗಣತಿಯಿಂದ ದೊರೆತ ಮರಗಳ ಹಂಚಿಕೆಯನ್ನೂ, ಚಿತ್ರ 16(ಬ)ರಲ್ಲಿ ಮಾದರಿ ವಿಂಗಡನೆ ತಂತ್ರಾಂಶದಿಂದ ದೊರೆತ ಮರಗಳ ಹಂಚಿಕೆಯನ್ನು ತೋರಿಸಲಾಗಿದೆ. ಮರಗಣತಿಯ ಪ್ರಕಾರ 22,201 ಮರಗಳನ್ನು ಗುರುತಿಸಲಾಗಿದೆ. ಚಿತ್ರ 17ರಲ್ಲಿ ಮೇಲ್ಛಾವಣಿಯ ಹರವಿನ ಅಧಾರದ ಮೇಲೆ ಮರಗಳ ವಿಂಗಡಣೆಯನ್ನು ಕೊಡಲಾಗಿದೆ. ದೂರ ಸಂವೇದಿ ಮಾಹಿತಿಯ ಆಧಾರದ ಮೇಲೆ ಭಾರತೀಯ ವಿಜ್ಞಾನ ಸಂಸ್ಥೆಯು 107.85 ಹೆಕ್ಟೇರ್‍ನಷ್ಟು ಹಸಿರು ಭೂಬಳಕೆಯನ್ನು ಹೊಂದಿದ್ದು, ಸುಮಾರು 22,616 ಮರಗಳನ್ನು ಗುರುತಿಸಲಾಗಿದೆ. ಈ ವಿಶ್ಲೇಷಣೆಯು, ಶೇ. 97ರಷ್ಟು ನಿಖರತೆಯನ್ನು ತೋರಿಸುತ್ತದೆ.
ಚಿತ್ರ 16: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮರಗಳ ಹಂಚಿಕೆ
ಚಿತ್ರ 17: ಸ್ಥಳೀಯ ಮಾಹಿತಿಯಂತೆ ಮರದ ಮೇಲ್ಛಾವಣಿಯ ಹರವಿನ ಹಂಚಿಕೆ
2001 ಮತ್ತು 2011ರ ನಡುವೆ ಕಂಡುಬಂದ ಜನಸಂಖ್ಯೆಯ ಬದಲಾವಣೆಯ ಆಧಾರದ ಮೇಲೆ, 2013ರ ವಾರ್ಡ್‍ವಾರು ಜನಸಂಖ್ಯೆಯನ್ನು ಅಂದಾಜಿಸಲಾಗಿದೆ (ಚಿತ್ರ 18). ನಗರದ ಕೇಂದ್ರ ಭಾಗದ ವಾರ್ಡಗಳಲ್ಲಿ 40,000ಕ್ಕೂ ಹೆಚ್ಚು ಜನರಿದ್ದು, ಹೊರವಲಯದ ವಾರ್ಡಗಳಲ್ಲಿ 30,000ಕ್ಕಿಂತ ಕಡಿಮೆ ಜನಸಂಖ್ಯೆಯಿರುವುದು ಕಂಡುಬರುತ್ತದೆ.
ಚಿತ್ರ 18: ವಾರ್ಡ್‍ವಾರು ಜನಸಂಖ್ಯೆ (2013)
ಚಿತ್ರ 19: ವಾರ್ಡಗಳಲ್ಲಿ ಪ್ರತೀ ವ್ಯಕ್ತಿಗೆ ಲಭ್ಯವಿರುವ ಮರಗಳು
ಎಲ್ಲಾ ವಾರ್ಡಗಳಲ್ಲಿ ಪ್ರತೀ ವ್ಯಕ್ತಿಗೆ ಲಭ್ಯವಿರುವ ಮರಗಳನ್ನು ಕಂಡುಹಿಡಯಲಾಗಿದ್ದು, ಇದನ್ನು ಚಿತ್ರ 19ರ ಮೂಲಕ ವಿವರಿಸಲಾಗಿದೆ. ಇದರ ಪ್ರಕಾರ, ಚಿಕ್ಕಪೇಟೆ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ, ದಯಾನಂದ ನಗರ ವಾರ್ಡಗಳಲ್ಲಿ ಪ್ರತೀ ವ್ಯಕ್ತಿಗೆ 0.002ಕ್ಕಿಂತ ಕಡಿಮೆ ಮರಗಳು ಲಭ್ಯವಿದೆ. ಅಂದರೆ, ಪ್ರತೀ ಮರವು 500 ಜನರಿಗೆ ಸೇವೆಯನ್ನು ಒದಗಿಸುತ್ತದೆ. ಇದಕ್ಕೆ ಹೋಲಿಸಿದರೆ ವರ್ತೂರು, ಬೆಳ್ಳಂದೂರು, ಜಕ್ಕೂರು, ಅರಮನೆ ನಗರ ವಾರ್ಡಗಳಲ್ಲಿ ಹೆಚ್ಚಿನ ಮರಗಳಿದ್ದು, ಪ್ರತೀ ವ್ಯಕ್ತಿಗೆ ಕನಿಷ್ಠ ಒಂದು ಮರ ಲಭ್ಯವಿದೆ. ಬೆಂಗಳೂರಿಗೆ ಹೋಲಿಸಿದರೆ ಗಾಂಧೀನಗರ (ಗುಜರಾತ್), ನಾಸಿಕ್ (ಮಹರಾಷ್ಟ್ರ)ಗಳಲ್ಲಿ ಪ್ರತೀ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಮರ ಲಭ್ಯವಿದೆ. ಆದರೆ ಬಹುತೇಕ ನಗರಗಳಲ್ಲಿ ಮರಗಳ ಪ್ರಮಾಣ ಇಳಿಮುಖವಾಗುತ್ತಿರುವುದು ಗಂಭೀರವಾಗಿ ಚಿಂತಿಸಬೇಕಾದ ವಿಷಯ. ಗಾಂಧೀನಗರ, ಬೆಂಗಳೂರು, ಅಹಮದಾಬಾದ್ ಹಾಗೂ ಬೃಹನ್ ಮುಂಬೈ ನಗರಗಳು 400 ಚ.ಕೀ.ಮೀ.ಗಿಂತಲೂ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿವೆ. ಪ್ರತೀ 100 ಜನರಿಗೆ ಗಾಂಧಿನಗರ 416 ಮರಗಳನ್ನು ಹೊಂದಿದ್ದರೆ, ಬೆಂಗಳೂರು 17, ಮುಂಬೈ 15 ಮತ್ತು ಅಹಮದಾಬಾದ್ 11 ಮರಗಳನ್ನು ಹೊಂದಿವೆ. ಕೋಷ್ಟಕ 3ರಲ್ಲಿ ನಗರವಾರು ಮರಗಳ ಹಾಗೂ ಜನಸಂಖ್ಯೆಯ ವಿವರಗಳನ್ನು ನೀಡಲಾಗಿದೆ.
ಕೋಷ್ಟಕ 3: ನಗರವಾರು ಮರಗಳ ಹಾಗೂ ಜನಸಂಖ್ಯೆಯ ವಿವರ
State | Location | Population | Area (Ha) | Number of Trees | Tree / person | Tree / Hectare | Ref. |
Gujarat | Ahmedabad | 5570590 | 46985 | 617090 | 0.111 | 13.13 | 21 |
Surat | 4462000 | 39549 | 333970 | 0.075 | 8.44 | 21 | |
Vadodara | 1666700 | 16264 | 747190 | 0.448 | 45.94 | 21 | |
Gandhinagar | 208300 | 57000 | 866670 | 4.161 | 15.20 | 21 | |
Rajkot | 1287000 | 10400 | 139520 | 0.108 | 13.42 | 21 | |
Bhavnagar | 593770 | 5320 | 485950 | 0.818 | 91.34 | 21 | |
Junagafh | 320250 | 5670 | 76690 | 0.239 | 13.53 | 21 | |
Jamnagar | 529310 | 3434 | 45880 | 0.087 | 13.36 | 21 | |
Maharashtra | Nagpur | 2405421 | 21717 | 2143838 | 0.891 | 98.72 | 22 |
Nashik | 1486973 | 25900 | 2055523 | 1.382 | 79.36 | 22 | |
Brihan Mumbai | 12478447 | 43771 | 1917844 | 0.154 | 43.82 | 22 | |
Kalyan* | 472208 | 5198 | 212795 | 0.451 | 40.94 | 22 | |
Thane | 1818872 | 12700 | 45262 | 0.025 | 3.56 | 22 | |
Navi Mumbai | 1119477 | 16205 | 478120 | 0.427 | 29.50 | 22 | |
Nanded | 550564 | 4906 | 101310 | 0.184 | 20.65 | 22 | |
Mira and Bhayandar | 814655 | 7904 | 150000 | 0.184 | 18.98 | 22 | |
Karnataka | Bangalore | 9588910 | 74100 | 1478412 | 0.155 | 19.95 | calculated |
ಉಪಸಂಹಾರ
ರಿಸೋಸ್ರ್ಯಾಟ್-2 ಎಮ್‍ಎಸ್‍ಎಸ್ ಮತ್ತು ಕಾರ್ಟೋಸ್ಯಾಟ್-2ರ ಅಂಕಿ-ಅಂಶಗಳ ಸಂಯೋಗದಿಂದ ನಡೆಸಿದ ಭೂ ಬಳಕೆಯ ವಿಶ್ಲೇಷಣೆಯು 100.02 (ಶೇ. 14.08) ಚ.ಕೀ.ಮೀ.ನಷ್ಟು ಅರಣ್ಯಾವೃತ್ತ ಪ್ರದೇಶವನ್ನು ತೋರಿಸುತ್ತದೆ. ಚಿಕ್ಕಪೇಟೆ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ ವಾರ್ಡಗಳು ಅತಿ ಕಡಿಮೆ ಮರಗಳಿಂದ ಕೂಡಿದ ಭೂ ಬಳಕೆಯನ್ನು ಹೊಂದಿದ್ದು (1 ಹೆಕ್ಟೇರ್‍ಗಿಂತ ಕಡಿಮೆ), ವರ್ತೂರು, ಬೆಳ್ಳಂದೂರು, ಅಗರಂ ವಾರ್ಡಗಳು ಹೆಚ್ಚಿನ ಮರಗಳಿಂದ ಕೂಡಿದ ಭೂ ಬಳಕೆಯನ್ನು ಹೊಂದಿವೆ (300 ಹೆಕ್ಟೇರ್‍ಗಿಂತ ಅಧಿಕ). ಅರಮನೆ ನಗರ, ಹುಡಿ ಮತ್ತು ವಸಂತಪುರ ವಾರ್ಡಗಳಲ್ಲಿ ಹಸಿರು ಭೂ ಹೊದಿಕೆಯ ಪ್ರಮಾಣ ಹೆಚ್ಚಾಗಿದ್ದರೆ (0.4), ಚಿಕ್ಕಪೇಟೆ, ಲಗ್ಗೆರೆ, ಹೆಗ್ಗನಹಳ್ಳಿ, ಹೊಂಗಸಂದ್ರ ಹಾಗೂ ಪಾದರಾಯನಪುರ ವಾರ್ಡಗಳು ಅತಿ ಕಡಿಮೆ ಮರ ಸಾಂದ್ರತೆಯನ್ನು (0.015) ಹೊಂದಿವೆ. ಬೆಂಗಳೂರಿನ ಸರಾಸರಿ ಮರ ಸಾಂದ್ರತೆ 0.14ರಷ್ಟಾಗಿದೆ. ಮರಗಳ ಮೇಲ್ಛಾವಣಿ ಚಿತ್ರಿಸುವಿಕೆಯಿಂದ ಮತ್ತು ಸ್ಥಳೀಯ ಅಂಕಿಅಂಶಗಳಿಂದ, ವರ್ತೂರು, ಬೆಳ್ಳಂದೂರು, ಅಗರಂ, ಅರಮನೆ ನಗರ ವಾರ್ಡಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮರಗಳಿರುವುದು ತಿಳಿದು ಬಂದಿದೆ. ಹಾಗೆಯೇ, ಚಿಕ್ಕಪೇಟೆ, ಪಾದರಾಯನಪುರ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಕುಶಾಲ ನಗರಗಳಲ್ಲಿ 100ಕ್ಕಿಂತ ಕಡಿಮೆ ಮರಗಳಿರುವುದು ಬೆಳಕಿಗೆ ಬಂದಿದೆ. ಈ ಲೆಕ್ಕಾಚಾರದಂತೆ ಬೆಂಗಳೂರಿನಲ್ಲಿ ಪ್ರಸ್ತುತ 1478412 ಮರಗಳಿವೆ ಎಂದು ಊಹಿಸಲಾಗಿದೆ. ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ, ಚಿಕ್ಕಪೇಟೆ, ದಯಾನಂದ ನಗರ ವಾರ್ಡಗಳಲ್ಲಿ ಪ್ರತೀ ವ್ಯಕ್ತಿಗೆ ಲಭ್ಯವಿರುವ ಮರ 0.002ಕ್ಕಿಂತ ಕಡಿಮೆಯಾಗಿದೆ. ಅಂದರೆ, ಈ ವಾರ್ಡಗಳಲ್ಲಿ ಪ್ರತೀ ಮರವನ್ನು ಸುಮಾರು 500 ಜನ ಅವಲಂಬಿತರಾಗಿದ್ದಾರೆ. ಇದಕ್ಕೆ ಹೋಲಿಸಿದರೆ, ವರ್ತೂರು, ಬೆಳ್ಳಂದೂರು, ಜಕ್ಕೂರು, ಅಗರಂ, ಅರಮನೆ ನಗರ ವಾರ್ಡಗಳು ಅಲ್ಲಿನ ಜನಸಂಖ್ಯೆಗಿಂತ ಹೆಚ್ಚಿನ ಮರಗಳನ್ನು ಹೊದಿವೆ. ಬೆಂಗಳೂರಿಗೆ ಹೋಲಿಸಿದರೆ ಗಾಂಧೀನಗರ (ಗುಜರಾತ್), ನಾಸಿಕ್ (ಮಹರಾಷ್ಟ್ರ)ಗಳಲ್ಲಿ ಪ್ರತೀ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಮರ ಲಭ್ಯವಿದೆ. ಆದರೆ ಬಹುತೇಕ ನಗರಗಳಲ್ಲಿ ಮರಗಳ ಪ್ರಮಾಣ ಇಳಿಮುಖವಾಗುತ್ತಿರುವುದು ಶೋಚನೀಯ. ಗಾಂಧಿನಗರ, ಬೆಂಗಳೂರು, ಅಹಮದಾಬಾದ್ ಹಾಗೂ ಬೃಹನ್ ಮುಂಬೈ ನಗರಗಳು 400 ಚ.ಕೀ.ಮೀ.ಗಿಂತಲೂ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿವೆ. ಪ್ರತೀ 100 ಜನರಿಗೆ ಗಾಂಧಿನಗರ 416 ಮರಗಳನ್ನು ಹೊಂದಿದ್ದರೆ, ಬೆಂಗಳೂರು 17, ಮುಂಬೈ 15 ಮತ್ತು ಅಹಮದಾಬಾದ್ 11 ಮರಗಳನ್ನು ಹೊಂದಿವೆ.
ಭಾರತದ ಬಹುಪಾಲು ಕಾಡುಗಳು ದಿನದಿಂದ ದಿನಕ್ಕೆ ಕೃಷಿ ಭೂಮಿಗಳಾಗಿ, ವಸತಿ ಸಮುಚ್ಛಯಗಳಾಗಿ ಅಥವಾ ವಾಣಿಜ್ಯ ಸಂಕೀರ್ಣಗಳಾಗಿ ಬದಲಾಗುತ್ತಿವೆ. ಈ ಎಲ್ಲ ಚಟುವಟಿಕೆಗಳ ಹಿಂದೆ ತನ್ನ ಅಭಿಷ್ಟಗಳನ್ನು ಪೂರೈಸಿಕೊಳ್ಳುವ, ಐಷಾರಾಮಿ ಬದುಕನ್ನು ತನ್ನದಾಗಿಸಿಕೊಳ್ಳುವ ಮಾನವೀಯ ಯೋಜನೆಗಳಿವೆ. ವೃಕ್ಷ ಸಂಕುಲದ ಹಾಗೂ ವನ್ಯ ಸಂಕುಲದ ಮೇಲೆ ದಾಳಿ ಇದೆ ರೀತಿ ಎಗ್ಗಿಲ್ಲದೇ ಮುಂದುವರಿದರೆ, ಜಗತ್ತಿನ ಅತೀ ಬುದ್ಧಿವಂತ ಎಂದು ಬೀಗುತ್ತಿರುವ ಮನುಕುಲದ ಅಳಿವು ದೂರವಿಲ್ಲ. ಪ್ರಕೃತಿದತ್ತ ಸಂಪನ್ಮೂಲಗಳನ್ನು ಹಾಗೂ ನೈಸರ್ಗಿಕ ಸಮತೋಲವನ್ನು ಕಾಪಾಡುವುದು ಸಹ ಇದೇ ಬುದ್ಧಜೀವಿಯ ಹೊಣೆಗಾರಿಕೆ. ಅರಣ್ಯ ಸಂರಕ್ಷಣೆ ಬಹುಶ: ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಬಹುದು. ತಮ್ಮೆಲ್ಲ ಸ್ವಾರ್ಥವನ್ನು ಕ್ಷಣಕಾಲ ಬದಿಗಿಟ್ಟು ಪ್ರತಿಯೊಬ್ಬರೂ ಪ್ರಯತ್ನಿಸಿದರೆ, ಮುಂದಿನ ಪೀಳಿಗೆಗೆ ಬದುಕಲು ಬೇಕಾದ ಪರಿಶುದ್ಧ ವಾತಾವರಣವನ್ನು ಸೃಷ್ಟಿಸುವುದು ಕಷ್ಡವಾಗಲಾರದು. ಹೀಗೆ ಮಾಡಿದರೆ ನಿಸರ್ಗವೂ ಮನುಕುಲದ ತಪ್ಪನ್ನು ಕ್ಷಮಿಸಬಹುದು.
ದಶಕೂಪಸಮಾ ವಾಪೀ ದಶವಾಪೀಸಮೋ ಹೃದ: |
ದಶಹೃದಸಮ: ಪುತ್ರೋ ದಶಪುತ್ರಸಮೋ ದ್ರುಮ: ||
-ಮತ್ಸ್ಯ ಪುರಾಣ 154:512
ಹತ್ತು ಬಾವಿಗಳು ಒಂದು ಕೆರೆಗೆ ಸಮ, ಹತ್ತು ಕೆರೆಗಳಿಂದ ಒಂದು ಸರೋವರ.
ಹತ್ತು ಸರೋವರಗಳು ಒಂದು ಮಗುವಿಗೆ ಸಮ, ಹಾಗೆಯೇ ಒಂದು ವೃಕ್ಷ ಹತ್ತು ಮಕ್ಕಳಿಗೆ ಸಮ.
|| ವೃಕ್ಷೋ ರಕ್ಷತಿ ರಕ್ಷಿತ: ||
ಕೃತಜ್ಞತೆಗಳು
ನಮಗೆ ಈ ಕೆಲಸವನ್ನು ನಿಯೋಜಿಸಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಡಾ. ವಾಮನ ಆಚಾರ್ಯ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ಹಣಕಾಸಿನ ನೆರವನ್ನು ನೀಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಋಣಿಯಾಗಿದ್ದೇವೆ.
ಗ್ರಂಥಋಣ
ಅನುಬಂಧ – 1: ವಾರ್ಡ್‍ವಾರು ಮರಗಳ ವಿವರ
ವಾರ್ಡ್ ಸಂ. | ವಾರ್ಡ್ ಹೆಸರು | ವಾರ್ಡ್ ವಿಸ್ತೀರ್ಣ (ಹೆ.) | ಹಸಿರು ಹೊದಿಕೆ (ಹೆ.) | ಹಸಿರು ಸಾಂದ್ರತೆ | ಮರಗಳ ಸಂಖ್ಯೆ | ಜನಸಂಖ್ಯೆ | ಪ್ರತೀ ವ್ಯಕ್ತಿಗಿರುವ ಮರ |
1 | ಕೆಂಪೆಗೌಡ ವಾರ್ಡ್ | 1071.6 | 165.3 | 0.1543 | 24412 | 33683 | 0.725 |
2 | ಚೌಡೇಶ್ವರಿ | 699.2 | 198.2 | 0.2834 | 29259 | 20897 | 1.400 |
3 | ಅಟ್ಟೂರು | 1032.3 | 134.3 | 0.1301 | 19830 | 37050 | 0.535 |
4 | ಯಲಹಂಕ ಉಪನಗರ | 482.8 | 85.0 | 0.1761 | 12556 | 43856 | 0.286 |
5 | ಜಕ್ಕೂರು | 2413.7 | 255.3 | 0.1058 | 37695 | 29628 | 1.272 |
6 | ಥಣಿಸಂದ್ರ | 990.9 | 49.8 | 0.0502 | 7356 | 23836 | 0.309 |
7 | ಬ್ಯಾಟರಾಯನಪುರ | 930.7 | 133.8 | 0.1437 | 19755 | 47284 | 0.418 |
8 | ಕೊಡಿಗೆಹಳ್ಳಿ | 383.6 | 48.1 | 0.1255 | 7109 | 38285 | 0.186 |
9 | ವಿದ್ಯಾರಣ್ಯಪುರ | 981.9 | 195.1 | 0.1987 | 28812 | 46061 | 0.626 |
10 | ದೊಡ್ಡ ಬೊಮ್ಮಸಂದ್ರ | 421.6 | 133.8 | 0.3173 | 19757 | 34213 | 0.577 |
11 | ಕುವೆಂಪು ನಗರ | 764.1 | 272.9 | 0.3572 | 40296 | 44501 | 0.906 |
12 | ಶೆಟ್ಟಿಹಳ್ಳಿ | 912.0 | 173.1 | 0.1898 | 25562 | 33911 | 0.754 |
13 | ಮಲ್ಲಸಂದ್ರ | 128.8 | 6.2 | 0.0485 | 928 | 47010 | 0.020 |
14 | ಬಗಲಕುಂಟೆ | 466.3 | 44.8 | 0.0961 | 6619 | 42661 | 0.155 |
15 | ಟ. ದಾಸರಹಳ್ಳಿ | 89.4 | 5.0 | 0.0561 | 748 | 38196 | 0.020 |
16 | ಜಾಲಹಳ್ಳಿ | 516.0 | 177.8 | 0.3445 | 26255 | 38073 | 0.690 |
17 | ಜೆ.ಪಿ. ಪಾರ್ಕ್ | 214.6 | 25.8 | 0.1205 | 3821 | 46726 | 0.082 |
18 | ರಾಧಾಕೃಷ್ಣ ಟೆಂಪಲ್ | 205.3 | 35.4 | 0.1724 | 5232 | 30117 | 0.174 |
19 | ಸಂಜಯ ನಗರ | 156.3 | 21.7 | 0.1387 | 3207 | 43546 | 0.074 |
20 | ಗಂಗಾ ನಗರ | 208.9 | 42.4 | 0.2029 | 6261 | 31734 | 0.197 |
21 | ಹೆಬ್ಬಾಳ | 135.5 | 12.7 | 0.0938 | 1883 | 43612 | 0.043 |
22 | ವಿಶ್ವನಾಥ ನಗೇನಹಳ್ಳಿ | 160.0 | 4.5 | 0.0282 | 672 | 44041 | 0.015 |
23 | ನಾಗವಾರ | 201.7 | 6.0 | 0.0299 | 895 | 56746 | 0.016 |
24 | ಎಚ್.ಬಿ.ಆರ್. ಲೇಔಟ್ | 486.0 | 58.0 | 0.1194 | 8577 | 32495 | 0.264 |
25 | ಹೊರಮಾವು | 1746.7 | 209.5 | 0.1199 | 30934 | 46145 | 0.670 |
26 | ರಾಮಮೂರ್ತಿ | 790.4 | 83.7 | 0.1059 | 12366 | 42288 | 0.292 |
27 | ಬಾನಸವಾಡಿ | 334.0 | 40.5 | 0.1212 | 5982 | 49704 | 0.120 |
28 | ಕಮ್ಮನಹಳ್ಳಿ | 105.9 | 2.8 | 0.0268 | 262 | 61883 | 0.004 |
29 | ಕಚರಕನಹಳ್ಳಿ | 164.0 | 15.6 | 0.0950 | 2306 | 34903 | 0.066 |
30 | ಕಾಡುಗೊಂಡನಹಳ್ಳಿ | 68.9 | 1.8 | 0.0259 | 169 | 62304 | 0.003 |
31 | ಕುಶಾಲ ನಗರ | 59.8 | 0.9 | 0.0151 | 89 | 41383 | 0.002 |
32 | ಕಾವಲ್ ಭೈರಸಂದ್ರ | 153.7 | 16.4 | 0.1065 | 2424 | 34323 | 0.071 |
33 | ಮನೋರಾಯನಪಾಳ್ಯ | 83.1 | 4.7 | 0.0566 | 700 | 64491 | 0.011 |
34 | ಗಂಗೇನಹಳ್ಳಿ | 107.7 | 29.2 | 0.2712 | 4317 | 33149 | 0.130 |
35 | ಅರಮನೆ ನಗರ | 736.5 | 296.2 | 0.4022 | 43743 | 40379 | 1.083 |
36 | ಮತ್ತಿಕೆರೆ | 86.4 | 3.8 | 0.0434 | 562 | 60014 | 0.009 |
ವಾರ್ಡ್ ಸಂ. | ವಾರ್ಡ್ ಹೆಸರು | ವಾರ್ಡ್ ವಿಸ್ತೀರ್ಣ (ಹೆ.) | ಹಸಿರು ಹೊದಿಕೆ (ಹೆ.) | ಹಸಿರು ಸಾಂದ್ರತೆ | ಮರಗಳ ಸಂಖ್ಯೆ | ಜನಸಂಖ್ಯೆ | ಪ್ರತೀ ವ್ಯಕ್ತಿಗಿರುವ ಮರ |
38 | ಎಚ್.ಎಮ್.ಟಿ. ಲೇಔಟ್ | 492.4 | 64.7 | 0.1314 | 9556 | 39538 | 0.242 |
39 | ಚೊಕ್ಕಸಂದ್ರ | 394.0 | 47.7 | 0.1210 | 7048 | 47588 | 0.148 |
40 | ದೊಡ್ಡ ಬಿದರಕಲ್ಲು | 1298.4 | 85.8 | 0.0661 | 12680 | 34389 | 0.369 |
41 | ಪೀಣ್ಯ (ಕೈಗಾರಿಕಾ ಪ್ರದೇಶ) | 557.7 | 35.4 | 0.0635 | 5238 | 44128 | 0.119 |
42 | ಲಕ್ಷ್ಮಿದೇವಿ | 148.2 | 11.7 | 0.0790 | 1737 | 33978 | 0.051 |
43 | ನಂದಿನಿ ಲೇಔಟ್ | 145.1 | 15.1 | 0.1042 | 2237 | 41160 | 0.054 |
44 | ಮಾರಪ್ಪನಪಾಳ್ಯ | 215.5 | 17.5 | 0.0811 | 2589 | 45168 | 0.057 |
45 | ಮಲ್ಲೇಶ್ವರಂ | 200.7 | 47.9 | 0.2387 | 7079 | 48249 | 0.147 |
46 | ಜಯಚಾಮರಾಜೇಂದ್ರ ನಗರ | 82.8 | 8.9 | 0.1072 | 1316 | 43913 | 0.030 |
47 | ದೇವರ ಜೀವನಹಳ್ಳಿ | 142.5 | 35.7 | 0.2505 | 5276 | 46320 | 0.114 |
48 | ಮುನೇಶ್ವರ ನಗರ | 48.3 | 1.2 | 0.0253 | 116 | 55562 | 0.002 |
49 | ಲಿಂಗರಾಜಪುರ | 82.0 | 5.3 | 0.0646 | 788 | 62207 | 0.013 |
50 | ಬೆನ್ನಿಗನಹಳ್ಳಿ | 497.9 | 161.4 | 0.3241 | 23829 | 47446 | 0.502 |
51 | ವಿಜ್ಞಾನಪುರ | 213.3 | 18.4 | 0.0863 | 2721 | 54181 | 0.050 |
52 | ಕೆ.ಆರ್. ಪುರಂ | 506.8 | 88.9 | 0.1755 | 13135 | 35958 | 0.365 |
53 | ಬಸವನಪುರ | 621.6 | 28.1 | 0.0452 | 4153 | 34641 | 0.120 |
54 | ಹುಡಿ | 134.7 | 201.4 | 1.4955 | 29745 | 33016 | 0.901 |
55 | ದೇವಸಂದ್ರ | 361.7 | 76.1 | 0.2103 | 11237 | 31541 | 0.356 |
56 | ಎ. ನಾರಾಯಣಪುರ | 211.9 | 13.1 | 0.0617 | 1934 | 47401 | 0.041 |
57 | ಸಿ.ವಿ. ರಾಮನ್ ನಗರ | 365.7 | 90.9 | 0.2486 | 13432 | 56495 | 0.238 |
58 | ಹೊಸ ತಿಪ್ಪಸಂದ್ರ | 318.3 | 68.8 | 0.2160 | 10159 | 62891 | 0.162 |
59 | ಮಾರುತಿ ಸೇವಾ ನಗರ | 246.9 | 51.2 | 0.2074 | 7567 | 47571 | 0.159 |
60 | ಸಗರಾಯಪುರಂ | 79.2 | 13.7 | 0.1728 | 2028 | 57499 | 0.035 |
61 | ಎಸ್.ಕೆ. ಗಾರ್ಡನ್ | 132.9 | 39.5 | 0.2973 | 5838 | 41762 | 0.140 |
62 | ರಾಮಸ್ವಾಮಿ ಪಾಳ್ಯ | 78.4 | 11.8 | 0.1507 | 1751 | 48858 | 0.036 |
63 | ಜಯಮಹಲ್ | 142.2 | 40.1 | 0.2821 | 5927 | 31969 | 0.185 |
64 | ರಾಜಮಹಲ್ ಗುಟ್ಟಹಳ್ಳಿ | 76.8 | 9.4 | 0.1230 | 1400 | 52624 | 0.027 |
65 | ಕಾಡು ಮಲ್ಲೇಶ್ವರ | 139.5 | 17.5 | 0.1255 | 2592 | 35273 | 0.073 |
66 | ಸುಬ್ರಮಣ್ಯ ನಗರ | 91.7 | 4.7 | 0.0508 | 694 | 50422 | 0.014 |
67 | ನಾಗಪುರ | 178.6 | 19.6 | 0.1100 | 2906 | 47229 | 0.062 |
68 | ಮಹಾಲಕ್ಷ್ಮಿಪುರಂ | 98.7 | 6.2 | 0.0633 | 929 | 55965 | 0.017 |
69 | ಲಗ್ಗರೆ | 166.7 | 1.8 | 0.0108 | 172 | 48973 | 0.004 |
70 | ರಾಜಗೋಪಾಲ ನಗರ | 216.4 | 4.9 | 0.0225 | 725 | 56113 | 0.013 |
71 | ಹೆಗ್ಗನಹಳ್ಳಿ | 195.9 | 2.1 | 0.0109 | 201 | 60431 | 0.003 |
72 | ಹೇರೊಹಳ್ಳಿ | 778.2 | 69.9 | 0.0899 | 10332 | 36966 | 0.280 |
73 | ಕೊಟ್ಟಿಗೆಪಾಳ್ಯ | 576.2 | 60.9 | 0.1057 | 9000 | 48032 | 0.187 |
74 | ಶಕ್ತಿ ಗಣಪತಿ ನಗರ | 74.4 | 4.5 | 0.0606 | 672 | 62898 | 0.011 |
75 | ಶಂಕರ ಮಠ | 110.0 | 5.4 | 0.0491 | 804 | 70165 | 0.011 |
ವಾರ್ಡ್ ಸಂ. | ವಾರ್ಡ್ ಹೆಸರು | ವಾರ್ಡ್ ವಿಸ್ತೀರ್ಣ (ಹೆ.) | ಹಸಿರು ಹೊದಿಕೆ (ಹೆ.) | ಹಸಿರು ಸಾಂದ್ರತೆ | ಮರಗಳ ಸಂಖ್ಯೆ | ಜನಸಂಖ್ಯೆ | ಪ್ರತೀ ವ್ಯಕ್ತಿಗಿರುವ ಮರ |
77 | ದತ್ತಾತ್ರೇಯ ದೇವಸ್ಥಾನ | 66.7 | 6.0 | 0.0895 | 888 | 56212 | 0.016 |
78 | ಪುಲಿಕೇಶಿ ನಗರ | 166.8 | 33.4 | 0.2003 | 4940 | 37407 | 0.132 |
79 | ಸರ್ವಜ್ಞ ನಗರ | 362.6 | 125.0 | 0.3446 | 18458 | 46419 | 0.398 |
80 | ಹೊಯ್ಸಳ ನಗರ | 204.5 | 44.8 | 0.2193 | 6625 | 47677 | 0.139 |
81 | ವಿಜ್ಞಾನ ನಗರ | 579.4 | 70.2 | 0.1212 | 10376 | 40288 | 0.258 |
82 | ಗರುಡಾಚಾರಪಾಳ್ಯ | 693.2 | 97.8 | 0.1412 | 14452 | 35695 | 0.405 |
83 | ಕಾಡುಗೋಡಿ | 1191.5 | 267.6 | 0.2246 | 39509 | 41072 | 0.962 |
84 | ಹಗದೂರು | 1256.1 | 243.1 | 0.1935 | 35895 | 34733 | 1.033 |
85 | ದೊಡ್ಡ ನೆಕ್ಕುಂಡಿ | 1228.8 | 162.1 | 0.1319 | 23937 | 31825 | 0.752 |
86 | ಮಾರತ್‍ಹಳ್ಳಿ | 297.8 | 36.9 | 0.1238 | 5447 | 45844 | 0.119 |
87 | ಎಚ್.ಎ.ಎಲ್. ವಿಮಾನ ನಿಲ್ದಾಣ | 682.1 | 122.5 | 0.1796 | 18093 | 56837 | 0.318 |
88 | ಜೀವನ್‍ಭೀಮಾ ನಗರ | 191.6 | 45.5 | 0.2372 | 6714 | 68414 | 0.098 |
89 | ಜೋಗುಪಾಳ್ಯ | 88.8 | 8.2 | 0.0920 | 1212 | 53063 | 0.023 |
90 | ಹಲ್ಸೂರು | 169.9 | 25.4 | 0.1492 | 3749 | 47678 | 0.079 |
91 | ಭಾರತಿ ನಗರ | 73.3 | 6.3 | 0.0864 | 942 | 50994 | 0.018 |
92 | ಶಿವಾಜಿ ನಗರ | 43.0 | 0.7 | 0.0164 | 70 | 66280 | 0.001 |
93 | ವಸಂತ ನಗರ | 316.2 | 78.9 | 0.2494 | 11649 | 34049 | 0.342 |
94 | ಗಾಂಧೀನಗರ | 179.1 | 17.1 | 0.0958 | 2538 | 46906 | 0.054 |
95 | ಸುಭಾಶ್ ನಗರ | 135.9 | 18.7 | 0.1373 | 2760 | 39011 | 0.071 |
96 | ಓಕಳಿಪುರಂ | 81.8 | 12.7 | 0.1548 | 1876 | 55464 | 0.034 |
97 | ದಯಾನಂದ ನಗರ | 45.5 | 1.4 | 0.0304 | 131 | 63052 | 0.002 |
98 | ಪ್ರಕಾಶ ನಗರ | 59.5 | 6.6 | 0.1117 | 988 | 60963 | 0.016 |
99 | ರಾಜಾಜಿ ನಗರ | 74.9 | 7.7 | 0.1034 | 1149 | 51661 | 0.022 |
100 | ಬಸವೇಶ್ವರ ನಗರ | 83.8 | 8.5 | 0.1020 | 1267 | 35390 | 0.036 |
101 | ಕಾಮಾಕ್ಷಿಪಾಳ್ಯ | 86.7 | 8.4 | 0.0970 | 1249 | 31806 | 0.039 |
102 | ವೃಷಭಾವತಿ ನಗರ | 100.0 | 2.2 | 0.0222 | 208 | 50003 | 0.004 |
103 | ಕಾವೇರಿಪುರ | 150.0 | 5.8 | 0.0386 | 861 | 57774 | 0.015 |
104 | ಗೋವಿಂದರಾಜ ನಗರ | 82.3 | 9.0 | 0.1096 | 1340 | 33141 | 0.040 |
105 | ಅಗ್ರಹಾರ ದಾಸರಹಳ್ಳಿ | 79.9 | 6.5 | 0.0817 | 969 | 36241 | 0.027 |
106 | ಡಾ. ರಾಜ್‍ಕುಮಾರ ವಾರ್ಡ್ | 96.2 | 5.6 | 0.0585 | 838 | 26833 | 0.031 |
107 | ಶಿವನಗರ | 78.3 | 6.0 | 0.0770 | 896 | 56732 | 0.016 |
108 | ಶ್ರೀರಾಮ ಮಂದಿರ | 116.1 | 10.0 | 0.0865 | 1488 | 40804 | 0.036 |
109 | ಚಿಕ್ಕಪೇಟೆ | 75.9 | 0.2 | 0.0023 | 25 | 52688 | 0.000 |
110 | ಸಂಪಂಗಿರಾಮ ನಗರ | 446.4 | 144.7 | 0.3240 | 21362 | 43997 | 0.486 |
111 | ಶಾಂತಲಾ ನಗರ | 409.6 | 92.3 | 0.2253 | 13629 | 40151 | 0.339 |
112 | ದೊಮ್ಮಲೂರು | 182.0 | 36.4 | 0.2002 | 5386 | 46100 | 0.117 |
113 | ಕೊನೇನ ಅಗ್ರಹಾರ | 206.7 | 33.7 | 0.1631 | 4984 | 56050 | 0.089 |
114 | ಅಗರಂ | 1139.9 | 338.2 | 0.2967 | 49930 | 47334 | 1.055 |
ವಾರ್ಡ್ ಸಂ. | ವಾರ್ಡ್ ಹೆಸರು | ವಾರ್ಡ್ ವಿಸ್ತೀರ್ಣ (ಹೆ.) | ಹಸಿರು ಹೊದಿಕೆ (ಹೆ.) | ಹಸಿರು ಸಾಂದ್ರತೆ | ಮರಗಳ ಸಂಖ್ಯೆ | ಜನಸಂಖ್ಯೆ | ಪ್ರತೀ ವ್ಯಕ್ತಿಗಿರುವ ಮರ |
116 | ನೀಲಸಂದ್ರ | 51.7 | 2.9 | 0.0561 | 268 | 64298 | 0.004 |
117 | ಶಾಂತಿ ನಗರ | 255.8 | 53.8 | 0.2102 | 7946 | 48388 | 0.164 |
118 | ಸುಧಾಮ ನಗರ | 103.9 | 6.2 | 0.0599 | 925 | 40949 | 0.023 |
119 | ಧರ್ಮರಾಯ ಸ್ವಾಮಿ ದೇವಸ್ಥಾನ | 110.6 | 4.6 | 0.0420 | 692 | 41323 | 0.017 |
120 | ಕಾಟನ್‍ಪೇಟೆ | 75.3 | 9.1 | 0.1210 | 1351 | 58936 | 0.023 |
121 | ಬಿನ್ನಿಪೇಟೆ | 73.2 | 6.6 | 0.0907 | 988 | 53722 | 0.018 |
122 | ಕೆಂಪಾಪುರ ಅಗ್ರಹಾರ | 36.3 | 0.6 | 0.0174 | 62 | 63853 | 0.001 |
123 | ವಿಜಯ ನಗರ | 73.6 | 2.4 | 0.0323 | 222 | 58345 | 0.004 |
124 | ಹೊಸಹಳ್ಳಿ | 88.6 | 8.3 | 0.0940 | 1237 | 45248 | 0.027 |
125 | ಮರೆನಹಳ್ಳಿ | 77.4 | 3.3 | 0.0427 | 306 | 22215 | 0.014 |
126 | ಮಾರುತಿ ಮಂದಿರ | 80.3 | 5.9 | 0.0730 | 872 | 30684 | 0.028 |
127 | ಮೂಡಲಪಾಳ್ಯ | 101.0 | 5.1 | 0.0508 | 762 | 48189 | 0.016 |
128 | ನಾಗರಭಾವಿ | 159.5 | 33.0 | 0.2066 | 4871 | 18334 | 0.266 |
129 | ಜ್ಞಾನಭಾರತಿ ವಾರ್ಡ್ | 1216.9 | 165.7 | 0.1362 | 24474 | 28473 | 0.860 |
130 | ಉಳ್ಳಾಲ | 895.3 | 71.0 | 0.0793 | 10486 | 34946 | 0.300 |
131 | ನಾಯಂಡಹಳ್ಳಿ | 208.1 | 39.7 | 0.1908 | 5868 | 38691 | 0.152 |
132 | ಅತ್ತಿಗುಪ್ಪೆ | 136.2 | 9.3 | 0.0685 | 1385 | 29247 | 0.047 |
133 | ಹಂಪಿ ನಗರ | 112.1 | 10.0 | 0.0889 | 1479 | 35358 | 0.042 |
134 | ಬಾಪೂಜಿ ನಗರ | 67.4 | 1.6 | 0.0244 | 156 | 60446 | 0.003 |
135 | ಪಾದರಾಯನಪುರ | 34.3 | 0.2 | 0.0061 | 26 | 67623 | 0.000 |
136 | ಜಗಜೀವನ್‍ರಾಮ ನಗರ | 54.0 | 5.3 | 0.0984 | 791 | 58800 | 0.013 |
137 | ರಾಯಪರಂ | 60.3 | 8.2 | 0.1355 | 1213 | 55201 | 0.022 |
138 | ಛಲವಾದಿಪಾಳ್ಯ | 42.8 | 6.3 | 0.1466 | 934 | 43419 | 0.022 |
139 | ಕೆ.ಆರ್. ಮಾರ್ಕೆಟ್ | 78.6 | 6.3 | 0.0801 | 937 | 40309 | 0.023 |
140 | ಚಾಮರಾಜಪೇಟೆ | 97.4 | 11.1 | 0.1143 | 1652 | 45530 | 0.036 |
141 | ಆಜಾದ್ ನಗರ | 66.4 | 4.6 | 0.0693 | 685 | 59620 | 0.011 |
142 | ಸುಂಕೇನಹಳ್ಳಿ | 156.4 | 24.2 | 0.1545 | 3575 | 48032 | 0.074 |
143 | ವಿಶ್ವೇಶ್ವರಪುರಂ | 242.1 | 56.3 | 0.2325 | 8317 | 47946 | 0.173 |
144 | ಸಿದ್ದಾಪುರ | 64.0 | 14.0 | 0.2188 | 2078 | 52305 | 0.040 |
145 | ಹೊಂಬೇಗೌಡ ನಗರ | 141.6 | 21.3 | 0.1507 | 3156 | 48427 | 0.065 |
146 | ಲಕ್ಕಸಂದ್ರ | 125.8 | 22.9 | 0.1822 | 3391 | 37597 | 0.090 |
147 | ಆಡುಗೋಡಿ | 165.7 | 43.1 | 0.2603 | 6375 | 39779 | 0.160 |
148 | ಇಜಿಪುರ | 160.3 | 14.9 | 0.0927 | 2203 | 35093 | 0.063 |
149 | ವರ್ತೂರು | 2723.1 | 488.1 | 0.1792 | 72069 | 30430 | 2.368 |
150 | ಬೆಳ್ಳಂದೂರು | 2655.1 | 368.2 | 0.1387 | 54366 | 25614 | 2.123 |
151 | ಕೋರಮಂಗಲ | 368.1 | 95.4 | 0.2593 | 14095 | 46971 | 0.300 |
152 | ಸುದ್ದಗುಂಟೆಪಾಳ್ಯ | 175.0 | 23.8 | 0.1360 | 3518 | 47703 | 0.074 |
153 | ಜಯನಗರ | 251.8 | 60.4 | 0.2400 | 8928 | 47774 | 0.187 |
ವಾರ್ಡ್ ಸಂ. | ವಾರ್ಡ್ ಹೆಸರು | ವಾರ್ಡ್ ವಿಸ್ತೀರ್ಣ (ಹೆ.) | ಹಸಿರು ಹೊದಿಕೆ (ಹೆ.) | ಹಸಿರು ಸಾಂದ್ರತೆ | ಮರಗಳ ಸಂಖ್ಯೆ | ಜನಸಂಖ್ಯೆ | ಪ್ರತೀ ವ್ಯಕ್ತಿಗಿರುವ ಮರ |
155 | ಹನುಮಂತ ನಗರ | 96.2 | 10.2 | 0.1062 | 1515 | 49847 | 0.030 |
156 | ಶ್ರೀನಗರ | 84.1 | 3.7 | 0.0444 | 343 | 55903 | 0.006 |
157 | ಗಾಳಿ ಆಂಜನೇಯ ದೇವಸ್ಥಾನ | 111.0 | 9.1 | 0.0822 | 1354 | 37896 | 0.036 |
158 | ದೀಪಾಂಜಲಿ ನಗರ | 214.3 | 14.6 | 0.0683 | 2170 | 63287 | 0.034 |
159 | ಕೆಂಗೇರಿ | 484.1 | 11.1 | 0.0230 | 1653 | 46698 | 0.035 |
160 | ರಾಜರಾಜೇಶ್ವರಿ ನಗರ | 1149.9 | 151.6 | 0.1318 | 22386 | 38401 | 0.583 |
161 | ಹೊಸ್ಕೆರೆಹಳ್ಳಿ | 126.5 | 9.5 | 0.0751 | 1409 | 42577 | 0.033 |
162 | ಗಿರಿನಗರ | 173.4 | 19.1 | 0.1099 | 2820 | 63715 | 0.044 |
163 | ಕತ್ರಿಗುಪ್ಪೆ | 108.0 | 7.1 | 0.0657 | 1055 | 66776 | 0.016 |
164 | ವಿದ್ಯಾಪೀಠ | 121.6 | 10.7 | 0.0880 | 1585 | 65600 | 0.024 |
165 | ಗಣೇಶ ಮಂದಿರ | 161.9 | 21.9 | 0.1355 | 3245 | 30688 | 0.106 |
166 | ಕರಿಸಂದ್ರ | 112.9 | 13.7 | 0.1214 | 2032 | 40962 | 0.050 |
167 | ಯೆಡಿಯೂರು | 123.1 | 16.9 | 0.1371 | 2497 | 45951 | 0.054 |
168 | ಪಟ್ಟಾಭಿರಾಮ ನಗರ | 171.6 | 37.0 | 0.2156 | 5468 | 41167 | 0.133 |
169 | ಬ್ಯಾರಸಂದ್ರ | 88.3 | 13.3 | 0.1509 | 1974 | 36875 | 0.054 |
170 | ಜಯನಗರ ಪೂರ್ವ | 105.8 | 11.5 | 0.1089 | 1708 | 31162 | 0.055 |
171 | ಗರಪ್ಪನಪಾಳ್ಯ | 68.1 | 1.9 | 0.0284 | 181 | 55283 | 0.003 |
172 | ಮಡಿವಾಳ | 113.4 | 7.6 | 0.0666 | 1121 | 38074 | 0.029 |
173 | ಜಕ್ಕಸಂದ್ರ | 150.0 | 21.0 | 0.1398 | 3103 | 28062 | 0.111 |
174 | ಎಚ್.ಎಸ್.ಆರ್. ಲೇಔಟ್ | 685.8 | 93.7 | 0.1366 | 13842 | 35672 | 0.388 |
175 | ಬೊಮ್ಮನಹಳ್ಳಿ | 200.5 | 9.9 | 0.0496 | 1474 | 46273 | 0.032 |
176 | ಬಿ.ಟಿ.ಎಮ್. ಲೇಔಟ್ | 208.3 | 26.6 | 0.1279 | 3937 | 45745 | 0.086 |
177 | ಜೆ.ಪಿ. ನಗರ | 181.3 | 24.1 | 0.1330 | 3568 | 33253 | 0.107 |
178 | ಸಾರಕ್ಕಿ | 128.6 | 14.0 | 0.1092 | 2079 | 53803 | 0.039 |
179 | ಶಾಕಾಂಬರಿ ನಗರ | 182.0 | 35.1 | 0.1928 | 5186 | 30871 | 0.168 |
180 | ಬನಶಂಕರಿ ದೇವಸ್ಥಾನ | 65.1 | 6.3 | 0.0969 | 938 | 65724 | 0.014 |
181 | ಕುಮಾರಸ್ವಾಮಿ ಲೇಔಟ್ | 189.0 | 22.1 | 0.1169 | 3269 | 54606 | 0.060 |
182 | ಪದ್ಮನಾಭ ನಗರ | 169.2 | 11.2 | 0.0663 | 1664 | 34171 | 0.049 |
183 | ಚಿಕ್ಕಲಸಂದ್ರ | 105.8 | 3.9 | 0.0365 | 576 | 48164 | 0.012 |
184 | ಉತ್ತರಹಳ್ಳಿ | 907.0 | 91.0 | 0.1004 | 13445 | 37677 | 0.357 |
185 | ಯೆಲ್ಚಿನಹಳ್ಳಿ | 153.9 | 5.4 | 0.0354 | 811 | 47703 | 0.017 |
186 | ಜಾರಗನಹಳ್ಳಿ | 128.5 | 4.5 | 0.0354 | 677 | 39772 | 0.017 |
187 | ಪುಟ್ಟೇನಹಳ್ಳಿ | 288.1 | 42.3 | 0.1469 | 6256 | 39414 | 0.159 |
188 | ಬಿಳೇಕಹಳ್ಳಿ | 412.9 | 56.0 | 0.1357 | 8276 | 38574 | 0.215 |
189 | ಹೊಂಗಸಂದ್ರ | 223.1 | 3.2 | 0.0143 | 293 | 47976 | 0.006 |
190 | ಮಂಗಮ್ಮನಪಾಳ್ಯ | 352.7 | 21.6 | 0.0612 | 3195 | 57126 | 0.056 |
191 | ಸಿಂಗಸಂದ್ರ | 947.3 | 70.1 | 0.0740 | 10350 | 36232 | 0.286 |
192 | ಬೇಗೂರು | 1924.3 | 194.1 | 0.1008 | 28657 | 29205 | 0.981 |
193 | ಅರಕೆರೆ | 651.2 | 58.3 | 0.0895 | 8613 | 46060 | 0.187 |
194 | ಗೊಟ್ಟಿಗೆರೆ | 642.5 | 65.8 | 0.1024 | 9715 | 36986 | 0.263 |
ಅನುಬಂಧ– 2: ಬೆಂಗಳೂರಿನ ಮಹತ್ವದ ಮರಗಳು
|
![]() |
![]() |
|
|
![]() |
![]() |
|
|
![]() |
|
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
|
![]() |
![]() |
|
![]() |
|
![]() |
|
![]() |
|
![]() ![]() |
|
![]() |
|
![]() |
|
![]() |
|
![]() |